ಕರ್ನಾಟಕ

karnataka

ETV Bharat / sports

ಕೊರೊನಾ ಸಂಕಷ್ಟದ ನಡುವೆಯೂ ಆಟಗಾರರ ಗುತ್ತಿಗೆ ವೇತನ ಪಾವತಿಸಿದ ಬಿಸಿಸಿಐ..

ಕೊರೊನಾ ದೇಶವ್ಯಾಪಿ ಹೆಚ್ಚಾಗುತ್ತಿರುವುದರಿಂದ ಈಗಾಗಲೇ ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾ, ಸಚಿನ್ ತೆಂಡೂಲ್ಕರ್​, ಗಂಗೂಲಿ, ಪಠಾಣ್​ ಬ್ರದರ್ಸ್‌, ಗಂಭೀರ್​, ಪೂಜಾರ, ರಹಾನೆ ಸೇರಿದಂತೆ ಹಲವಾರು ಕ್ರಿಕೆಟಿಗರು ತಮ್ಮ ಕೈಲಾದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದರು. ಇದೀಗ ಬಿಸಿಸಿಐ ಆಟಗಾರರಿಗೆ ವೇತನ ನೀಡಿ ನೆರವು ನೀಡಿದೆ.

bcci salary
bcci update

By

Published : Apr 11, 2020, 11:33 AM IST

ಮುಂಬೈ :ಭಾರತದಾದ್ಯಂತ ಕಳೆದ 18 ದಿನಗಳಿಂದ ಲಾಕ್​ಡೌನ್​ ಘೋಷಿಸಿದ ಮೇಲೆ ಎಲ್ಲಾ ಕಾರ್ಯಚಟುವಟಿಕೆಗಳು ನಿಂತಿವೆ. ಈ ಸಂದರ್ಭದಲ್ಲಿ ಬಿಸಿಸಿಐ ಕ್ರಿಕೆಟಿಗರಿಗೆ ಯಾವುದೇ ರೀತಿಯ ಹಣಕಾಸಿನ ತೊಂದರೆಯಾಗಬಾರೆದೆಂದು ಮೊದಲ ತ್ರೈಮಾಸಿಕ ಕಂತಿನ ಹಣವನ್ನು ನೀಡಿದೆ.

ಇಂಗ್ಲೆಂಡ್​, ಆಸ್ಟ್ರೇಲಿಯಾ ದೇಶಗಳಲ್ಲಿ ಆಟಗಾರರ ವೇತನದಲ್ಲಿ ಕಡಿತ ಮಾಡಲಾಗಿದೆ. ಆದರೆ, ಕ್ರಿಕೆಟ್​ನ ಶ್ರೀಮಂತ ಸಂಸ್ಥೆಯಾಗಿರುವ ಬಿಸಿಸಿಐ ಆಟಗಾರರ ವೇತನದಲ್ಲಿ ಯಾವುದೇ ಕಡಿತ ಮಾಡಲಾಗುವುದಿಲ್ಲ ಎಂದು ತಿಳಿಸಿತ್ತು. ಇದೀಗ ಮಾರ್ಚ್​ ಅಂತ್ಯಕ್ಕೆ ಮುಕ್ತಾಯವಾಗುವಂತೆ ವರ್ಷದ ಲೆಕ್ಕಾಚಾರದಲ್ಲಿ ಸೇರ್ಪಡೆಯಾಗುವಂತೆ ವೇತನ ನೀಡಲಾಗಿದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಐಪಿಎಲ್ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, ಸೆಪ್ಟೆಂಬರ್​ನಲ್ಲಿ ಟಿ20 ವಿಶ್ವಕಪ್​ ಹಾಗೂ ಏಷ್ಯಾಕಪ್​ ವೇಳಾಪಟ್ಟಿಯಲ್ಲಿ ಸೇರಿದೆ. ಆದರೆ, ಕೊರೊನಾ ಜಾಗತಿಕ ಮಟ್ಟದಲ್ಲಿ ಹೆಚ್ಚಾಗಿರುವುದರಿಂದ ಆ ಟೂರ್ನಿಗಳು ನಡೆಯುವುದು ಅನುಮಾನ ಎನ್ನಾಲಾಗಿದೆ. ಆದರೆ, ವಿಶ್ವಕಪ್​ ನಿಷೇಧಿಸಲು ಇನ್ನೂ ಐಸಿಸಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಐಸಿಸಿ ನಿರ್ಧಾರ ಬರುವವರೆಗೂ ಐಪಿಎಲ್​ ಆಯೋಜನೆ ಕುರಿತು ಯಾವುದೇ ನಿರ್ಣಯಕ್ಕೆ ಬರುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಕೊರೊನಾ ದೇಶವ್ಯಾಪಿ ಹೆಚ್ಚಾಗುತ್ತಿರುವುದರಿಂದ ಈಗಾಗಲೇ ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾ, ಸಚಿನ್ ತೆಂಡೂಲ್ಕರ್​, ಗಂಗೂಲಿ, ಪಠಾಣ್​ ಬ್ರದರ್ಸ್‌, ಗಂಭೀರ್​, ಪೂಜಾರ, ರಹಾನೆ ಸೇರಿದಂತೆ ಹಲವಾರು ಕ್ರಿಕೆಟಿಗರು ತಮ್ಮ ಕೈಲಾದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದರು. ಇದೀಗ ಬಿಸಿಸಿಐ ಆಟಗಾರರಿಗೆ ವೇತನ ನೀಡಿ ನೆರವು ನೀಡಿದೆ.

ABOUT THE AUTHOR

...view details