ಮುಂಬೈ: ವಿಕೆಟ್ ಕೀಪರ್, ನಂಬರ್ 1,2,3 ಹಾಗೂ 5ನೇ ಕ್ರಮಾಂಕ.. ಹೀಗೆ ಎಲ್ಲೇ ಅವಕಾಶ ಕೊಟ್ಟರೂ ಸೈ ಎನಿಸಿಕೊಳ್ಳುತ್ತಿರುವ ಕನ್ನಡಿಗ ಕೆ.ಎಲ್.ರಾಹುಲ್ 12ನೇ ಆಟಗಾರನಾಗಿ ಕ್ರೀಸ್‌ಗೆ ಬಂದರೂ ಶತಕ ಸಿಡಿಸಬಲ್ಲರು ಎಂದು ಟೀಮ್ ಇಂಡಿಯಾ ಆರಂಭಿಕ ಶಿಖರ್ ಧವನ್ ಅಭಿಪ್ರಾಯಪಟ್ಟಿದ್ದಾರೆ.
ಸಹೋದರ, ಅತ್ಯುತ್ತಮವಾಗಿ ಆಡಿದ್ದಿಯಾ,ಅದ್ಭುತವಾದ ಶತಕ.. ಹೀಗೆಯೇ ಬಲಿಷ್ಠವಾಗಿ ಮುಂದುವರಿಯುತ್ತಿರು.. ನಿನ್ನ ಬ್ಯಾಟಿಂಗ್ ವೈಖರಿ ನೋಡಿದ್ರೆ, 12ನೇ ಆಟಗಾರನಾಗಿ ನೀನು ಬ್ಯಾಟಿಂಗ್ ಮಾಡಿದರೂ ಶತಕ ಬಾರಿಸುತ್ತೀಯ..' ಎಂದು 'ಗಬ್ಬರ್ ಸಿಂಗ್' ಖ್ಯಾತಿಯ ಧವನ್ ಪ್ರಶಂಸಿಸಿದ್ದಾರೆ.
ಬಹಳ ಸಮಯದಿಂದಲೂ ರೋಹಿತ್ ಜೊತೆಗೆ ಆರಂಭಿಕನಾಗಲು ರಾಹುಲ್ ಹಾಗೂ ಧವನ್ ಪೈಪೋಟಿಯಲ್ಲಿದ್ದಾರೆ. ಆದರೆ ಧವನ್ ಗಾಯಕ್ಕೊಳಾಗಿದ್ದಾಗ ಆರಂಭಿಕನಾಗಿ ಉತ್ತಮ ಬ್ಯಾಟಿಂಗ್ ನಡೆಸಿದ್ದ ರಾಹುಲ್ ಮತ್ತೆ ಧವನ್ ತಂಡಕ್ಕೆ ಬಂದವೇಳೆ ವಿಕೆಟ್ ಕೀಪರ್ ಹಾಗೂ ಮಿಡಲ್ ಆರ್ಡರ್ ಬ್ಯಾಟ್ಸ್ಮನ್ ಆಗಿ ಯಶಸ್ವಿಯಾಗಿದ್ದರು.
ರಾಹುಲ್ ಎಲ್ಲಾ ಕ್ರಮಾಂಕದಲ್ಲಿ ಯಶಸ್ವಿ ಆಗ್ತಿರೋದ್ರಿಂದ ಧವನ್ ಹಾಗೂ ಇತರೆ ವಿಕೆಟ್ ಕೀಪರ್ಗಳು ಒತ್ತಡಕ್ಕೊಳಗಾಗುತ್ತಿದ್ದಾರೆ. ಈಗಾಗಲೇ ರಿಷಭ್ ಪಂತ್, ರಾಹುಲ್ ಅಬ್ಬರದ ಪ್ರದರ್ಶನದಿಂದ ತಂಡದಿಂದ ಹೊರಬಿದ್ದಿದ್ದಾರೆ. ಅಲ್ಲದೇ ಧವನ್ ಮೇಲೂ ಕೂಡ ರಾಹುಲ್ ಪ್ರದರ್ಶನ ಪರಿಣಾಮ ಬೀರಿದ್ದು, ಧವನ್ ಒಂದು ವೇಳೆ ಆರಂಭಿಕನಾಗಿ ವಿಫಲನಾದರೆ ತಂಡದಿಂದ ಹೊರಬೀಳಬೇಕಾದ ಒತ್ತಡದಲ್ಲಿದ್ದಾರೆ. ಮಯಾಂಕ್ ಅಗರ್ವಾಲ್ ಆರಂಭಿಕನಾಗಿ ಯಶಸ್ವಿಯಾಗಿದ್ದರಿಂದ ಟೆಸ್ಟ್ ಕ್ರಿಕೆಟ್ನಿಂದ ಹೊರಬಿದ್ದಿದ್ದಾರೆ.
ಇನ್ನು ರಾಹುಲ್ ಅದ್ಭುತ ಪ್ರದರ್ಶನದಿಂದ ಟಿ20 ಯಲ್ಲಿ ಭಾರತ ತಂಡದ 5-0ಯಲ್ಲಿ ವಿಫಲವಾದರೆ, ಏಕದಿನ ಸರಣಿಯಲ್ಲಿ ಅವರ ಉತ್ತಮ ಪ್ರದರ್ಶನ ನಡುವೆಯೂ ಭಾರತ ತಂಡ 3-0ಯಲ್ಲಿ ವೈಟ್ವಾಶ್ ಸೋಲು ಅನುಭವಿಸಿತ್ತು.