ಢಾಕಾ: ಕೋಲ್ಕತ್ತಾದಲ್ಲಿ ಹಿಂದೂ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿಕ್ಕಾಗಿ ಮುಸ್ಲಿಂವಾದಿಗಳಿಂದ ಕೊಲೆ ಬೆದರಿಕೆ ಬಂದ ನಂತರ ಬಾಂಗ್ಲಾದೇಶದ ಸ್ಟಾರ್ ಆಲ್ರೌಂಡರ್ ಶಕಿಬ್ ಅಲ್ ಹಸನ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ಫ್ರಾನ್ಸ್ನಲ್ಲಿ ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ರಗಳ ಪ್ರಕಟಣೆ ಮಾಡಿದ ನಂತರ ಇತ್ತೀಚಿನ ವಾರಗಳಲ್ಲಿ ಇಸ್ಲಾಮಿಸ್ಟ್ಗಳು ಫ್ರಾನ್ಸ್ ವಿರೋಧಿ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಶಕಿಬ್ ಭಾರತದಲ್ಲಿ ಕಾಳಿ ಮಾತೆಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಬಾಂಗ್ಲಾದೇಶದಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಂರ ಕೋಪಕ್ಕೆ ತುತ್ತಾಗಿದ್ದಾರೆ.
"ನೀವು ಕಾಳಿ ಮಾತೆ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿ ಮುಸ್ಲಿಂರ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ. ನಿಮ್ಮನ್ನು ಕತ್ತಿಯಿಂದ ತುಂಡು ತುಂಡಾಗಿ ಕತ್ತರಿಸುತ್ತೇನೆ ಹಾಗೂ ಅಗತ್ಯವಿದ್ದರೆ ಸಲ್ಹೆಟ್ನಿಂದ ಢಾಕಾಗೆ ಬಂದು ಕತ್ತಿಯಿಂದ ಕೊಲ್ಲುವುದಾಗಿ" ಶಕೀಬ್‌ಗೆ ಫೇಸ್ಬುಕ್ ಲೈವ್ನಲ್ಲಿ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದ.