ಕರ್ನಾಟಕ

karnataka

ETV Bharat / sports

ಪಾಕಿಸ್ತಾನದ ಈ ಆಟಗಾರ ಕೊಹ್ಲಿ ಸಾಧನೆಯ ಹಂತಕ್ಕೆ ಬರಲಿದ್ದಾರೆ: ಆಕಾಶ್​ ಚೋಪ್ರಾ

ಬಾಬರ್‌ ಅಜಮ್‌ ಪ್ರತಿಭಾವಂತ ಬ್ಯಾಟ್ಸ್​ಮನ್​ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ವಿರಾಟ್‌ ಕೊಹ್ಲಿ ಇರುವ ಹಂತಕ್ಕೆ ತಲುಪಬೇಕಾದರೆ ಇನ್ನೂ ತುಂಬಾ ದೂರ ಸಾಗಬೇಕಿದೆ. ಅಜಮ್‌ಗಿಂತಲೂ ಕೊಹ್ಲಿ ಮೊದಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಆರಂಭಿಸಿದ್ದರು. ಸಾರ್ವಕಾಲಿಕ ದಿಗ್ಗಜರ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಹೆಸರು ಈಗಾಗಲೇ ಸೇರ್ಪಡೆಯಾಗಿದೆ ಎಂದು ಆಕಾಶ್‌ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಬಾಬರ್​ ಅಜಮ್​- ಕೊಹ್ಲಿ
ಬಾಬರ್​ ಅಜಮ್​- ಕೊಹ್ಲಿ

By

Published : Jul 12, 2020, 12:25 PM IST

ಮುಂಬೈ:ಪ್ರಸ್ತುತ ಕ್ರಿಕೆಟ್​ ಜಗತ್ತಿನ ರನ್​ ಮಷಿನ್​, ಸೂಪರ್​ ಸ್ಟಾರ್​ ಆಗಿರುವ ವಿರಾಟ್​ ಕೊಹ್ಲಿ ಈಗಾಗಲೇ ಹಲವಾರು ದಾಖಲೆಗಳನ್ನು ತಮ್ಮ ಹಸೆರಿಗೆ ಬರೆದುಕೊಂಡು ಲೆಜೆಂಡ್​ಗಳ ಪಟ್ಟಿಗೆ ಸೇರಿಕೊಂಡಿದ್ದಾರೆ. ಆದರೆ ಪಾಕಿಸ್ತಾನದ ಬಾಬರ್​, ಆಸ್ಟ್ರೇಲಿಯಾದ ಸ್ಟಿವ್​ ಸ್ಮಿತ್​ ಹಾಗೂ ಕಿವೀಸ್​ ನಾಯಕ ವಿಲಿಯಮ್ಸನ್​ ಅವರೊಂದಿಗೆ ಹೋಲಿಕೆ ಮಾಡಿ ಉತ್ತಮ ಬ್ಯಾಟ್ಸ್​ಮನ್​ ಯಾರು ಎಂಬ ಚರ್ಚೆ ನಡೆಯುತ್ತಲೇ ಇರುತ್ತದೆ.

ಬಹುಪಾಲು ದಿಗ್ಗಜರು ಪ್ರಸ್ತುತ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಎಂದೇ ಹೇಳುತ್ತಿದ್ದಾರೆ. ಆದರೆ ಪಾಕಿಸ್ತಾನದ ಯುವ ಆಟಗಾರ ಬಾಬರ್​ ಅಜಮ್​ ಭವಿಷ್ಯದಲ್ಲಿ ಕೊಹ್ಲಿ ಸಾಧನೆಯನ್ನು ಮರುಕಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್​ಮನ್​ ಆಕಾಶ್​ ಚೋಪ್ರಾ ಕೂಡ ಅದನ್ನೇ ಪುನರುಚ್ಚರಿಸಿದ್ದಾರೆ.

ಬಾಬರ್‌ ಅಜಮ್‌ ಪ್ರತಿಭಾವಂತ ಬ್ಯಾಟ್ಸ್​ಮನ್​ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ವಿರಾಟ್‌ ಕೊಹ್ಲಿ ಇರುವ ಹಂತಕ್ಕೆ ತಲುಪಬೇಕಾದರೆ ಇನ್ನೂ ತುಂಬಾ ದೂರ ಸಾಗಬೇಕಿದೆ. ಅಜಮ್‌ಗಿಂತಲೂ ಕೊಹ್ಲಿ ಮೊದಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಆರಂಭಿಸಿದ್ದರು. ಸಾರ್ವಕಾಲಿಕ ದಿಗ್ಗಜರ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಹೆಸರು ಈಗಾಗಲೇ ಸೇರ್ಪಡೆಯಾಗಿದೆ ಎಂದು ಆಕಾಶ್‌ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಬಾಬರ್​ 74 ಏಕದಿನ ಪಂದ್ಯಗಳಿಂದ 3359 ರನ್​, 38 ಟಿ-20 ಪಂದ್ಯಗಳಿಂದ 1471 ಹಾಗೂ 26 ಟೆಸ್ಟ್​ ಪಂದ್ಯಗಳಿಂದ 1850 ರನ್​ ಗಳಿಸಿದ್ದಾರೆ. ಆದರೆ ವಿರಾಟ್​ ಕೊಹ್ಲಿ 86 ಟೆಸ್ಟ್​, 248 ಏಕದಿನ ಪಂದ್ಯ ಹಾಗೂ 82 ಟಿ-20 ಪಂದ್ಯಗಳನ್ನಾಡಿದ್ದಾರೆ. ಅವರು ಕ್ರಮವಾಗಿ 7240, 11867 ಹಾಗೂ 2794 ರನ್​ ಗಳಿಸಿದ್ದಾರೆ.

ABOUT THE AUTHOR

...view details