ಬ್ರಿಸ್ಬೇನ್(ಆಸ್ಟ್ರೇಲಿಯಾ):ಬ್ರಿಸ್ಬೇನ್ನಲ್ಲಿ 32 ವರ್ಷಗಳಿಂದ ಸೋಲೇ ಕಾಣದ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿದ ಭಾರತ ಹೊಸ ಇತಿಹಾಸ ನಿರ್ಮಾಣ ಮಾಡಿದ್ದು, ಟೀಂ ಇಂಡಿಯಾವನ್ನು ಆಸ್ಟ್ರೇಲಿಯಾ ಮಾಧ್ಯಮಗಳು ಕೊಂಡಾಡಿವೆ.
"ಸುಸ್ತು, ಗಾಯದ ಸಮಸ್ಯೆ ಎದುರಿಸಿದ ಮತ್ತು ಖಾಲಿಯಾದ ತಂಡ, ಪೂರ್ಣ ಸಾಮರ್ಥ್ಯದ ಆಸ್ಟ್ರೇಲಿಯಾವನ್ನು ಮುಜುಗರಕ್ಕೀಡು ಮಾಡಿದೆ" ಎಂದು ಆಸ್ಟ್ರೇಲಯಾ ಮಾಧ್ಯಮವೊಂದು ಹೇಳಿದೆ.
"ನೀವು ಆಘಾತದ ಸ್ಥಿತಿಯಲ್ಲಿದ್ದರೆ, ಚಿಂತಿಸಬೇಡಿ, ನೀವು ಒಬ್ಬಂಟಿಯಾಗಿಲ್ಲ.. ಆದರೆ ಭಾರತವು ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ವಿಜಯದಲ್ಲಿ ಬಾರ್ಡರ್-ಗವಾಸ್ಕರ್ ಸರಣಿಯನ್ನು ಗೆದ್ದಿದೆ" ಎಂದು ಮತ್ತೊಂದು ಕ್ರೀಡಾ ಪತ್ರಿಕೆ ಹೇಳಿದೆ.
"ಟೆಸ್ಟ್ ಕ್ರಿಕೆಟ್‌ನಲ್ಲಿ (ಅಡಿಲೇಡ್‌ನಲ್ಲಿ) ತನ್ನ ಅತ್ಯಂತ ಅವಮಾನಕರ ಕ್ಷಣದಿಂದ ಟೀಂ ಇಂಡಿಯಾ ಒಂದು ತಿಂಗಳ ಅಂತರದಲ್ಲಿ ತನ್ನ ಅತ್ಯುತ್ತಮ ಮಟ್ಟಕ್ಕೆ ಪುಟಿದಿದೆ. ಇಂದು ರಾತ್ರಿ, ನಾಳೆ ಮತ್ತು ಎಲ್ಲಿಯ ನೆನಪಿನಲ್ಲಿ ಉಳಿಯುವುದೋ ಅಲ್ಲಿಯವರೆಗೂ ಈ ಸಂತಸವನ್ನು ಅಲ್ಲಿಯವರೆಗೂ ಆಚರಿಸಲಾಗುತ್ತದೆ ಎಂದು ಮತ್ತೊಂದು ಪತ್ರಿಕೆ ಹೇಳಿದೆ.
"ಭಾರತದ ಅತ್ಯಂತ ಭೀಕರವಾದ ಸಾಗರೋತ್ತರ ಟೆಸ್ಟ್ ಪ್ರವಾಸವು ಅವರ ಅತ್ಯಂತ ಪ್ರಸಿದ್ಧ ಟೆಸ್ಟ್ ಗೆಲುವಿನ ಕಿರೀಟವನ್ನು ಪಡೆದಿದೆ. ಏಕೆಂದರೆ ಅವರು ಊಹಿಸಲಾಗದ ಅಡೆತಡೆಗಳನ್ನು ಮೀರಿ ಗಬ್ಬಾದಲ್ಲಿ ಎದುರಾಳಿಗಳ ವಿರುದ್ಧ ಜಯಿ ಸಿದೆ ಎಂದು ಪತ್ರಿಕೆಯೊಂದು ಹೇಳಿದೆ.
ಮಂಗಳವಾರ ಆಸೀಸ್ ನೀಡಿದ 328 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಭಾರತ ತಂಡ ರಿಷಭ್ ಪಂತ್, ಶುಬ್ಮನ್ ಗಿಲ್ ಮತ್ತು ಪೂಜಾರ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ಕಳೆದುಕೊಂಡು ಜಯ ದಾಖಲಿಸಿತ್ತು.