ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯಾಗೆ ಚಾಂಪಿಯನ್​ಶಿಪ್​ನ 4 ಅಂಕ ಕಡಿತ ಮತ್ತು ಸಂಭಾವನೆಯ ಶೇ. 40ರಷ್ಟು ದಂಡ! - 3rd test in MCG, Tim paine

ಐಸಿಸಿ ನಿಯಮಗಳ ಪ್ರಕಾರ ಟಿಮ್​ ಪೇನ್​ ತಂಡ ನಿಗದಿತ ಸಮಯದಲ್ಲಿ 2 ಓವರ್​ಗಳನ್ನು ತಡವಾಗಿ ಮಾಡಿದ್ದಕ್ಕೆ ಐಸಿಸಿ ಎಲೈಟ್​ ಪ್ಯಾನಲ್​ ಮ್ಯಾಚ್​ ರೆಫ್ರಿ ಡೇವಿಡ್​ ಬೂನ್​ ಈ ದಂಡವನ್ನು ವಿಧಿಸಿದ್ದಾರೆ ಎಂದು ಐಸಿಸಿ ಹೇಳಿಕೆ ಬಿಡುಗಡೆ ಮಾಡಿದೆ.

ಆಸ್ಟ್ರೇಲಿಯಾ ತಂಡಕ್ಕೆ ದಂಡ
ಆಸ್ಟ್ರೇಲಿಯಾ ತಂಡಕ್ಕೆ ದಂಡ

By

Published : Dec 29, 2020, 3:55 PM IST

Updated : Dec 29, 2020, 4:01 PM IST

ದುಬೈ:ಮೆಲ್ಬೋರ್ನ್​ನಲ್ಲಿ ಮಂಗಳವಾರ ಕೊನೆಗೊಂಡ ಎರಡನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನಿಧಾನಗತಿ ಓವರ್​ ದರ ಕಾಯ್ದುಕೊಂಡಿದ್ದಕ್ಕೆ ಟೆಸ್ಟ್​ ಚಾಂಪಿಯನ್​ಶಿಪ್​ನ 4 ಅಂಕಗಳು ಮತ್ತು ಪಂದ್ಯದ ಶುಲ್ಕದ ಶೇಕಡಾ 40ರಷ್ಟು ದಂಡ ವಿಧಿಸಲಾಗಿದೆ.

ಐಸಿಸಿ ನಿಯಮಗಳ ಪ್ರಕಾರ ಟಿಮ್​ ಪೇನ್​ ತಂಡ ನಿಗದಿತ ಸಮಯದಲ್ಲಿ 2 ಓವರ್​ಗಳನ್ನು ತಡವಾಗಿ ಮಾಡಿದ್ದಕ್ಕೆ ಐಸಿಸಿ ಎಲೈಟ್​ ಪ್ಯಾನಲ್​ ಮ್ಯಾಚ್​ ರೆಫ್ರಿ ಡೇವಿಡ್​ ಬೂನ್​ ಈ ದಂಡವನ್ನು ವಿಧಿಸಿದ್ದಾರೆ ಎಂದು ಐಸಿಸಿ ಹೇಳಿಕೆ ಬಿಡುಗಡೆ ಮಾಡಿದೆ.

ಇದನ್ನು ಓದಿ:ಆತ ಸೇರಿಕೊಂಡರೆ ತಂಡದ ಬಲ ಹೆಚ್ಚಲಿದೆ: ಪೇನ್​ ಹೇಳಿದ್ದು ಯಾರ ಬಗ್ಗೆ ಗೊತ್ತೇ?

ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ಪ್ರಕಾರ ಕನಿಷ್ಠ ಓವರ್​ ರೇಟ್​​ ಅಪರಾಧಗಳಿಗೆ ಸಂಬಂಧಿಸಿದಂತೆ ಎಲ್ಲ ಆಟಗಾರರು ಮತ್ತು ಸಿಬ್ಬಂದಿಗೆ ಶೇ. 20ರಷ್ಟು(ಒಂದು ಓವರ್​ಗೆ) ದಂಡ ಮತ್ತು ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ನಿಯಮ 16.11.2 ​ ಅನ್ವಯ ಓವರ್​ಗೆ 2 ಅಂಕ ಕಡಿತಗೊಳಿಸಲಾಗಿದೆ. ಈ ಪಂದ್ಯದಲ್ಲಿ 2 ಓವರ್​ ತಡವಾಗಿ ಮಾಡಿದ್ದಕ್ಕೆ 4 ಅಂಕವನ್ನು ತನ್ನ ಅಂಕ ಪಟ್ಟಿಯಿಂದ ಆಸೀಸ್​ ಕಳೆದುಕೊಂಡಿದೆ.

ಪೇನ್​ ಕೂಡ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರಿಂದ ಯಾವುದೇ ವಿಚಾರಣೆ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ.

Last Updated : Dec 29, 2020, 4:01 PM IST

ABOUT THE AUTHOR

...view details