ಕರ್ನಾಟಕ

karnataka

ETV Bharat / sports

ಕೊನೆಯ 2 ಟೆಸ್ಟ್​ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಬರ್ನ್ಸ್​ ಔಟ್​, ವಾರ್ನರ್ ಇನ್

ವಾರ್ನರ್​ ಎರಡನೇ ಏಕದಿನ ಪಂದ್ಯದ ವೇಳೆ ತೊಡೆ ಸಂದು ಗಾಯಕ್ಕೊಳಗಾಗಿ ಕೊನೆಯ ಏಕದಿನ, ಟಿ20 ಸರಣಿ ಹಾಗೂ ಮೊದಲೆರಡು ಟೆಸ್ಟ್​ ಸರಣಿಯಲ್ಲಿ ಹೊರಗುಳಿದಿದ್ದರು. ಒಂದು ತಿಂಗಳಿನಿಂದ ಪುನಶ್ಚೇತನ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಫಿಟ್​ ಆಗಿದ್ದು, ಕೊನೆಯ ಎರಡು ಟೆಸ್ಟ್​ ಪಂದ್ಯಕ್ಕೆ ತಂಡ ಸೇರಿಕೊಂಡಿದ್ದಾರೆ.

ಡೇವಿಡ್ ವಾರ್ನರ್
ಡೇವಿಡ್ ವಾರ್ನರ್​

By

Published : Dec 30, 2020, 4:21 PM IST

ಮೆಲ್ಬೋರ್ನ್​: ಭಾರತದ ವಿರುದ್ಧ ಬ್ರಿಸ್ಬೇನ್ ಮತ್ತು ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಎರಡು ಟೆಸ್ಟ್​ ಪಂದ್ಯಗಳಿಗೆ ಆಸ್ಟ್ರೇಲಿಯಾ ತಂಡದಲ್ಲಿ ಡೇವಿಡ್​ ವಾರ್ನರ್​ ಆಡುವ ಸಾಧ್ಯತೆಯಿದೆ. ಬುಧವಾರ ಘೋಷಿಸಿರುವ 18 ಸದಸ್ಯರ ಆಸ್ಟ್ರೇಲಿಯಾ ತಂಡ ಪ್ರಕಟಿಸಿದ್ದು, ವಾರ್ನರ್​ ತಂಡಕ್ಕೆ ಸೇರ್ಪಡೆಯಾಗಿದ್ದರೆ, ಮೊದಲೆರಡು ಪಂದ್ಯಗಳಲ್ಲಿ ವಿಫಲರಾಗಿರುವ ಜೋ ಬರ್ನ್ಸ್​ ತಂಡದಿಂದ ಹೊರಬಿದ್ದಿದ್ದಾರೆ.

ವಾರ್ನರ್​ ಎರಡನೇ ಏಕದಿನ ಪಂದ್ಯದ ವೇಳೆ ತೊಡೆ ಸಂದು ಗಾಯಕ್ಕೊಳಗಾಗಿ ಕೊನೆಯ ಏಕದಿನ, ಟಿ20 ಸರಣಿ ಹಾಗೂ ಮೊದಲೆರಡು ಟೆಸ್ಟ್​ ಸರಣಿಯಲ್ಲಿ ಹೊರಗುಳಿದಿದ್ದರು. ಒಂದು ತಿಂಗಳಿನಿಂದ ಪುನಶ್ಚೇತನ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಫಿಟ್​ ಆಗಿದ್ದು, ಕೊನೆಯ ಎರಡು ಟೆಸ್ಟ್​ ಪಂದ್ಯಕ್ಕೆ ತಂಡ ಸೇರಿಕೊಂಡಿದ್ದಾರೆ.

ಡೇವಿಡ್​ ತಮ್ಮ ಗಾಯದಿಂದ ಚೇತರಿಸಿಕೊಳ್ಳುವ ಹಾದಿಯಲ್ಲಿ ತುಂಬಾ ಪ್ರಗತಿ ಸಾಧಿಸಿದ್ದಾರೆ. ಸಿಡ್ನಿ ಟೆಸ್ಟ್​ಗೆ ಇನ್ನೂ 7 ದಿನಗಳ ಕಾಲ ಅವಕಾಶ ಇರುವುದರಿಂದ ಅವರಿಗೆ ಆಡಲು ಅವಕಾಶ ಕೊಡಬಹುದು ಎಂದು ಆಯ್ಕೆ ಸಮಿತಿ ಸದಸ್ಯ ಟ್ರೆವರ್ ಹೋನ್ಸ್​ ಕ್ರಿಕೆಟ್ ಆಸ್ಟ್ರೇಲಿಯಾ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾರ್ನರ್​ ಜೊತೆಗೆ ಅಭ್ಯಾಸ ಪಂದ್ಯದಲ್ಲಿ ತಲೆಗೆ ಚೆಂಡು ಬಿದ್ದು ಕಂಕಷನ್​ಗೆ ಒಳಗಾಗಿದ್ದ ವಿಲ್​ ಪುಕೋವ್​ಸ್ಕಿ, ಸೀನ್ ಅಬಾಟ್​ ಮತ್ತು ಮಾರ್ಕಸ್ ಹ್ಯಾರೀಸ್​ ಅವರನ್ನು ಕೂಡ ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಕೊನೆಯ ಎರಡು ಟೆಸ್ಟ್​ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ

ಆಸ್ಟ್ರೇಲಿಯಾ ತಂಡ: ಟಿಮ್ ಪೈನ್ (ನಾಯಕ), ಪ್ಯಾಟ್ ಕಮ್ಮಿನ್ಸ್ (ಉಪನಾಯಕ), ಸೀನ್ ಅಬಾಟ್, ಕ್ಯಾಮೆರಾನ್ ಗ್ರೀನ್, ಜೋಶ್ ಹೇಜಲ್​ವುಡ್​, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಮೊಯಿಸಸ್ ಹೆನ್ರಿಕ್ಸ್, ಮಾರ್ನಸ್ ಲ್ಯಾಬುಶೇನ್​, ನಥನ್ ಲಿಯಾನ್, ಮೈಕೆಲ್ ನೇಸರ್, ಜೇಮ್ಸ್ ಪ್ಯಾಟಿನ್ಸನ್, ವಿಲ್ ಪುಕೊವ್​ ಸ್ಕಿ , ಸ್ಟಿವ್​ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್.

ABOUT THE AUTHOR

...view details