ಕರ್ನಾಟಕ

karnataka

ETV Bharat / sports

ಕೆ. ಗೌತಮ್​ ಸೇರಿ 7 ಕನ್ನಡಿಗರು ಪಂಜಾಬ್​ಗೆ​... ಕರ್ನಾಟಕದ ಅಭಿಮಾನಿಗಳ ಬೆಂಬಲ ಯಾರಿಗೆ? - ರಾಜಸ್ಥಾನ ರಾಯಲ್ಸ್​ ಗೌತಮ್​

ಬುಧವಾರ ರಾಜಸ್ಥಾನ ರಾಯಲ್ಸ್​ ಆಲ್​ರೌಂಡರ್​ ಕೆ. ಗೌತಮ್​ರನ್ನು ಪಂಜಾಬ್​ಗೆ ಮಾರಾಟ ಮಾಡಿ, ಅಂಕಿತ್ ರಜಪೂತ್​ರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಇದೀಗ ಗೌತಮ್​ ಪಂಜಾಬ್​ ಸೇರಿದ 5 ನೇ ಕ್ರಿಕೆಟ್​ ಆಟಗಾರನಾದರು. ಕೋಚ್​ ಸೇರಿದಂತೆ 7 ಕನ್ನಡಿಗರು ಮುಂದಿನ ಐಪಿಎಲ್​ನಲ್ಲಿ ಕಿಂಗ್ಸ್​ ಇಲೆವೆನ್​ ಪ್ರಾಂಚೈಸಿ ಪರ ಪ್ರದರ್ಶನ ತೋರಲು ಸಿದ್ಧವಾಗಿದ್ದಾರೆ.

karnataka players kxIp

By

Published : Nov 14, 2019, 1:21 PM IST

ಮುಂಬೈ: 2020ರ ಐಪಿಎಲ್​ ಆವೃತ್ತಿಗೆ ಡಿಸೆಂಬರ್​ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಇದಕ್ಕೂ ಮುನ್ನ ಪ್ರಾಂಚೈಸಿಗಳು ಕೆಲವು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಹಾಗೂ ತಂಡದಿಂದ ಕೈಬಿಡುವುದಕ್ಕೆ ನವೆಂಬರ್ 14 ಕೊನೆಯ ದಿನಾಂಕವಾಗಿದ್ದರಿಂದ ಕೆಲವು ಆಟಗಾರರನ್ನು ಪ್ರಾಂಚೈಸಿಗಳು ಬೇರೆ ತಂಡಗಳಿಗೆ ಬಿಟ್ಟುಕೊಟ್ಟಿದ್ದಾರೆ.

ಬುಧವಾರ ರಾಜಸ್ಥಾನ ರಾಯಲ್ಸ್​ ಆಲ್​ರೌಂಡರ್​ ಕೆ. ಗೌತಮ್​ರನ್ನು ಪಂಜಾಬ್​ಗೆ ಮಾರಾಟ ಮಾಡಿ, ಅಂಕಿತ್ ರಜಪೂತ್​ರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಇದೀಗ ಗೌತಮ್​ ಪಂಜಾಬ್​ ಸೇರಿದ 5 ನೇ ಕ್ರಿಕೆಟ್​ ಆಟಗಾರನಾದರು. ಕೋಚ್​ ಸೇರಿದಂತೆ 7 ಕನ್ನಡಿಗರು ಮುಂದಿನ ಐಪಿಎಲ್​ನಲ್ಲಿ ಕಿಂಗ್ಸ್​ ಇಲೆವೆನ್​ ಪ್ರಾಂಚೈಸಿ ಪರ ಪ್ರದರ್ಶನ ತೋರಲು ಸಿದ್ಧವಾಗಿದ್ದಾರೆ.

ಕೃಷ್ಣಪ್ಪ ಗೌತಮ್

ಕರ್ನಾಟಕದ ಮಂಚೂಣಿ ಬ್ಯಾಟ್ಸ್​ಮನ್​ಗಳಾದ ಮಯಾಂಕ್​ ಅಗರ್​ವಾಲ್​, ಕರುಣ್​ ನಾಯರ್​, ಕೆ ಎಲ್​ ರಾಹುಲ್​ ಈ ಮೊದಲು ತಂಡದಲ್ಲಿದ್ದರು. ಕೆಲವು ದಿನಗಳ ಹಿಂದೆ ಅನಿಲ್​ ಕುಂಬ್ಳೆಯನ್ನು ಕೋಚ್​ ಆಗಿ, ಸುನಿಲ್​ ಜೋಷಿಯನ್ನು ಬೌಲಿಂಗ್​ ಕೋಚ್​ ಆಗಿ ಪಂಜಾಬ್​ ತಂಡ ಆಯ್ಕೆ ಮಾಡಿಕೊಂಡಿದೆ.

ಇದೀಗ ನಾಯಕರಾಗಿದ್ದ ಅಶ್ವಿನ್​ ಡೆಲ್ಲಿ ಕ್ಯಾಪಿಟಲ್ ಗೆ ವರ್ಗಾವಣೆಗೊಂಡಿದ್ದಾರೆ. ಡೆಲ್ಲಿಯಿಂದ ಜಗದೀಶ್​ ಸುಚಿತ್​ ರನ್ನು ಪಂಜಾಬ್​ ಪಡೆದಿತ್ತು. ನಿನ್ನೆ ಮತ್ತೆ ಆಲ್​ರೌಂಡರ್​ ಕೆ ಗೌತಮ್​ರನ್ನು ಕೂಡ ಪ್ರೀತಿ ಜಿಂಟಾ ಪಡೆ ಖರೀದಿಸಿ ತಮ್ಮ ತಂಡದಲ್ಲಿ ಅರ್ಧ ಕನ್ನಡಿಗರನ್ನೇ ತುಂಬಿಸಿಕೊಂಡಿದೆ.

ಇದೀಗ ಕರ್ನಾಟಕ ಅಭಿಮಾನಿಗಳು ಕನ್ನಡಿಗರಿರುವ ಪಂಜಾಬ್​ಗೆ ಬೆಂಬಲ ನೀಡುತ್ತಾರೋ ಅಥವಾ ಕರ್ನಾಟಕದ ಪ್ರಾಂಚೈಸಿ ಆರ್​ಸಿಬಿಗೆ ಬೆಂಬಲ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಆರ್​ಸಿಬಿ ತಂಡದಲ್ಲಿ​ ಯುವ ಬ್ಯಾಟ್ಸ್​ಮನ್​ ದೇವದತ್​ ಪಡಿಕ್ಕಲ್​ ಅವರು ಮಾತ್ರ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ ಆಟಗಾರನಾಗಿದ್ದಾರೆ.

ABOUT THE AUTHOR

...view details