ಮುಂಬೈ: ಡ್ರೀಮ್ ಇಲೆವೆನ್ ಐಪಿಎಲ್ನಲ್ಲಿ ಪ್ರಾಯೋಜಕತ್ವ ಪಡೆದಿರುವ ಎಲ್ಲಾ ಕಂಪನಿಗಳು ಇಂದಿನಿಂದ ಆರಂಭವಾಗಲಿರುವ ವುಮೆನ್ಸ್ ಟಿ-20 ಚಾಲೆಂಜ್ ಟೂರ್ನಮೆಂಟ್ನಲ್ಲೂ ಮುಂದುವರೆಯಲು ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಂಡಿವೆ.
ಡ್ರೀಮ್ 11 ಐಪಿಎಲ್ನ ಎಲ್ಲಾ ಪ್ರಾಯೋಜಕರು ಬಿಸಿಸಿಐ ಜೊತೆಗಿನ ಪಾಲುದಾರಿಕೆಯನ್ನು 2020 ಜಿಯೋ ವುಮೆನ್ಸ್ ಟಿ-20 ಚಾಲೆಂಜ್ಗೆ ವಿಸ್ತರಿಸಿಕೊಂಡಿದ್ದಾರೆ. ಡ್ರೀಮ್ 11, ಟಾಟಾ ಆಲ್ಟ್ರೊಜ್, ಅನ್ಅಕಾಡೆಮಿ, ಪೇಟಿಎಂ ಮತ್ತು ಸಿಯೆಟ್ ಇವೆಲ್ಲವೂ ಜಿಯೋ ಮಹಿಳೆಯರ ಟಿ-20 ಚಾಲೆಂಜ್‌ನ ಅಧಿಕೃತ ಪ್ರಾಯೋಜಕರಾಗಿ ಮಾರ್ಪಟ್ಟಿವೆ ಎಂದು ಐಪಿಎಲ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ಮಾತನಾಡಿರುವ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್, ಜಿಯೋ ವುಮೆನ್ಸ್ ಟಿ-20 ಚಾಲೆಂಜ್ ಮೂಲಕ ಮಹಿಳಾ ಐಪಿಎಲ್ಗೆ ದಾರಿ ಮಾಡಿಕೊಡಲು ಮತ್ತು ಕ್ರಿಕೆಟ್ನಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಆಶಿಸುತ್ತೇವೆ. ಡ್ರೀಮ್ 11 ಐಪಿಎಲ್ನ ನಮ್ಮ ಪಾಲುದಾರರು ಜಿಯೋ ಮಹಿಳೆಯರ ಟಿ-20 ಚಾಲೆಂಜ್ಗಾಗಿ ನಮ್ಮೊಂದಿಗೆ ಸಹಿ ಹಾಕಿರುವುದು ಭಾರತದಲ್ಲಿ ಮಹಿಳೆಯರ ಆಟದ ಬೆಳವಣಿಗೆಗೆ ಸಾಕ್ಷಿಯಾಗಿದೆ. ಯುವತಿಯರನ್ನು ಕ್ರೀಡೆಗೆ ಪ್ರೇರೇಪಿಸಲು ಪಾಲುದಾರರ ನಿರಂತರ ಬೆಂಬಲಕ್ಕೆ ನಾವು ಧನ್ಯವಾದ ಅರ್ಪಿಸುತ್ತೇವೆ ಎಂದು ತಿಳಿಸಿದ್ದಾರೆ.
ಪಂದ್ಯದಲ್ಲಿ ಪವರ್ ಪ್ಲೇನಲ್ಲಿ ಉತ್ತಮ ಪ್ರದರ್ಶನ ತೋರಿದವರಿಗೆ, ಹೆಚ್ಚು ಸಿಕ್ಸರ್, ಹೆಚ್ಚು ಡ್ರೀಮ್ ಇಲೆವೆನ್ ಪಾಯಿಂಟ್ ಪಡೆದವರಿಗೆ, ಉತ್ತಮ ಸ್ಟ್ರೈಕ್ ರೇಟ್ ಪಡೆಯವವರಿಗೆ ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ತಲಾ ಒಂದು ಲಕ್ಷ ರೂಪಾಯಿ ಹಾಗೂ ಟ್ರೋಫಿಗಳನ್ನು ನೀಡಲಾಗುತ್ತದೆ.