ಕರ್ನಾಟಕ

karnataka

ETV Bharat / sports

ವೃತ್ತಿ ಜೀವನದಲ್ಲಿ 867 ಓವರ್​ಗಳ ನಂತರ ಮೊದಲ ನೋ ಬಾಲ್; ಅದ್ರಲ್ಲೂ ಬಿತ್ತು ವಿಕೆಟ್! - 867 Overs

ಕ್ರಿಕೆಟ್​ನಲ್ಲಿ ಬೌಲರ್​ ನೋಬಾಲ್​ ಎಸೆಯುವುದು ಸರ್ವೇ ಸಾಮಾನ್ಯ. ಆದರೆ ಕ್ರಿಸ್​ ವೋಕ್ಸ್​ ತಮ್ಮ ಟೆಸ್ಟ್​ ಕರಿಯರ್​ನಲ್ಲಿ ಬರೋಬ್ಬರಿ 867 ಓವರ್​ಗಳ ನಂತರ ನೋಬಾಲ್​ ಎಸೆದಿದ್ದಾರೆ. ಆದರೆ ಇಷ್ಟು ವರ್ಷಗಳಲ್ಲಿ ನೋಬಾಲ್​ ಎಸೆಯದೇ ಬೌಲಿಂಗ್​ ಮಾಡಿದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.

Chris Woakes

By

Published : Sep 17, 2019, 10:40 PM IST

ಲಂಡನ್​:ಪ್ರತಿಷ್ಟಿತ ಆ್ಯಶಸ್​ ಸರಣಿಯಲ್ಲಿ ಇಂಗ್ಲೆಂಡ್​ನ ಕ್ರಿಸ್​ ವೋಕ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬರೋಬ್ಬರಿ 867 ಓವರ್​ಗಳ ನಂತರ ಮೊದಲ ನೋಬಾಲ್​ ಎಸೆದಿದ್ದಾರೆ!

ಮೊದಲ ನೋಬಾಲ್​ನಲ್ಲೆ ವಿಕೆಟ್​!

ದುರಾದೃಷ್ಟ ಅಂದರೆ, ಇದೇ ಇರಬೇಕು! ವೃತ್ತಿ ಜೀವನದಲ್ಲಿ ಒಮ್ಮೆಯೂ ಗೆರೆದಾಟದ ವೋಕ್ಸ್​ ಆ್ಯಶಸ್​ ಸರಣಿಯ 5ನೇ ಟೆಸ್ಟ್​ನ ಕೊನೆಯ ಇನ್ನಿಂಗ್ಸ್​ನಲ್ಲಿ ಕ್ರೀಸ್​ ಗೆರೆದಾಟಿ ಬೌಲಿಂಗ್ ಮಾಡಿದ್ದರು. ಆ ಎಸೆತದಲ್ಲಿ ಎದುರಾಳಿ ತಂಡದ ಬ್ಯಾಟ್ಸ್​ಮನ್​ ಮಿಚೆಲ್​ ಮಾರ್ಷ್​ ಕ್ಯಾಚ್​ ಔಟ್​ ಆಗಿದ್ದರು. ಇನ್ನೇನು ಗೆಲುವಿನ ಸನಿಹದಲ್ಲಿದ್ದ ಇಂಗ್ಲೆಂಡ್​ ಉತ್ತಮ ಜೊತೆಯಾಟ ಮುರಿದ ಖುಷಿಯಲ್ಲಿದ್ದರು. ಆದ್ರೆ, ಟಿವಿ ಅಂಪೈರ್​ ಆ ಎಸೆತವನ್ನು ನೋಬಾಲ್​ ಎಂದು ಘೋಷಿಸಿದ್ರು. ಇದು ವೋಕ್ಸ್‌ಗೆ ನಿರಾಶೆ ತಂದಿದೆ.

ಆದರೂ ಸ್ಟುವರ್ಟ್​ ಬ್ರಾಡ್​ ಹಾಗೂ ಜಾಕ್​ ಲೀಚ್​ ತಲಾ 4 ವಿಕೆಟ್​ ಪಡೆದು ಇಂಗ್ಲೆಂಡ್​ಗೆ 135 ರನ್​ಗಳ ಗೆಲುವು ತಂದುಕೊಟ್ಟರು. ಅಲ್ಲದೆ ಸರಣಿಯನ್ನು 2-2 ರಲ್ಲಿ ಸಮಬಲ ಸಾಧಿಸಲು ನೆರವಾದರು.

ABOUT THE AUTHOR

...view details