ಲಂಡನ್:ಮೊಣಕಾಲು ನೋವಿನಿಂದ ಬಳಲುತ್ತಿರುವ ಅಫ್ಘಾನಿಸ್ತಾನ ತಂಡದ ವಿಕೆಟ್ ಕೀಪರ್ ಮೊಹಮ್ಮದ್ ಶಾಹಜಾದ್ ವಿಶ್ವಕಪ್ನಿಂದ ಹೊರ ಬಿದ್ದಿದ್ದಾರೆ. 32 ವರ್ಷದ ಮೊಹಮ್ಮದ್ ಪಾಕಿಸ್ತಾನದ ವಿರುದ್ಧದ ವಾರ್ಮ್ ಅಪ್ ಪಂದ್ಯದಲ್ಲಿ ಗಾಯಗೊಂಡು ಹೊರ ಬಿದ್ದಿದ್ದಾರೆ.
ಅಫ್ಘಾನಿಸ್ತಾನಕ್ಕೆ ಭಾರಿ ಆಘಾತ... ಮೊಹಮ್ಮದ್ ಶಾಹಜಾದ್ ವಿಶ್ವಕಪ್ನಿಂದಲೇ ಔಟ್! - news kannada
ಅಫ್ಘಾನಿಸ್ತಾನ ತಂಡದ ವಿಕೆಟ್ ಕೀಪರ್ ಮೊಹಮ್ಮದ್ ಶಾಹಜಾದ್ ವಿಶ್ವಕಪ್ನಿಂದ ಹೊರ ಬಿದ್ದಿದ್ದಾರೆ. ಮೊಣಕಾಲು ನೋವಿನಿಂದ ಬಳಲುತ್ತಿರುವ ಅವರ ಸ್ಥಾನಕ್ಕೆ ಇಕ್ರಮ್ ಅಲಿ ಖಿಲ್ ಅವರನ್ನ ಆಯ್ಕೆ ಮಾಡಲಾಗಿದೆ.
ಮೊಹಮ್ಮದ್ ಶಾಹಜಾದ್ ಅಫ್ಘಾನ್ ತಂಡದ ಆಧಾರ ಸ್ತಂಬವಾಗಿದ್ದರು. ಅತಿ ದೊಡ್ಡ ಹಿಟ್ಗಳ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಕಳೆದ ತಿಂಗಳು ಪಾಕಿಸ್ತಾನ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮೊಹಮ್ಮದ್ ಮೊಣಕಾಲು ಗಾಯಕ್ಕೆ ಒಳಗಾಗಿದ್ದರು.
ಇದರಿಂದಾಗಿ ಅಫ್ಘಾನಿಸ್ತಾನಕ್ಕೆ ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ. 2015 ವಿಶ್ವಕಪ್ನಿಂದ ಇಲ್ಲಿವರೆಗೆ ಶಾಹಜಾದ್ 55 ಇನ್ನಿಂಗ್ಸ್ಗಳಿಂದ 1843 ರನ್ಗಳನ್ನ ಬಾರಿಸಿದ್ದಾರೆ. ಶಾಹಜಾದ್ ಗಾಯಗೊಂಡು ತಂಡದಿಂದ ಹೊರ ಬಿದ್ದಿದ್ದರಿಂದ ಅವರ ಸ್ಥಾನಕ್ಕೆ ಇಕ್ರಮ್ ಅಲಿ ಖಿಲ್ ಅವರನ್ನ ಆಯ್ಕೆ ಮಾಡಲಾಗಿದೆ. ಇದಕ್ಕೆ ಐಸಿಸಿ ಸಹ ಅನುಮೋದನೆ ನೀಡಿದೆ.