ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್ಮನ್ ಎಬಿಡಿ ವಿಲಿಯರ್ಸ್ 14ನೇ ಆವೃತ್ತಿಯ ಐಪಿಎಲ್ಗಾಗಿ ಚೆನ್ನೈಗೆ ಬಂದಿಳಿದಿದ್ದು, ಆರ್ಸಿಬಿಯ ಬಯೋಬಬಲ್ ಸೇರಿಕೊಂಡಿದ್ದಾರೆ.
"ಬ್ರೇಕಿಂಗ್ ದ ಇಂಟರ್ನೆಟ್, ಆಕಾಶ ನೌಕೆ ಲ್ಯಾಂಡ್ ಆಗಿದೆ. ಎಬಿಡಿ ವಿಲಿಯರ್ಸ್ ಚೆನ್ನೈನಲ್ಲಿರುವ ಆರ್ಸಿಬಿ ಬಬಲ್ ಸೇರಿಕೊಂಡಿದ್ದಾರೆ" ಎಂದು ಆರ್ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.
ಬೆಂಗಳೂರು ಮೂಲದ ಫ್ರಾಂಚೈಸಿ ಕಳೆದ ಐಪಿಎಲ್ನಲ್ಲಿ ಪ್ಲೇ ಆಫ್ ತಲುಪಿತ್ತಾದರೂ, ನಾಕೌಟ್ ಗೆಮ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡಿತ್ತು. ಈ ಬಾರಿ ಮ್ಯಾಕ್ಸ್ವೆಲ್, ಫಿನ್ ಅಲೆನ್, ಕೈಲ್ ಜೆಮೀಸನ್ ಮತ್ತು ಡೇನಿಯಲ್ ಕ್ರಿಸ್ಚಿಯನ್ ಅಂತಹ ಸ್ಟಾರ್ ಆಟಗಾರರು ಆರ್ಸಿಬಿ ಸೇರಿದ್ದು ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವ ಕನಸಿನಲ್ಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೆ ಮರಳಲು ತುಂಬಾ ಸಂತೋಷವಾಗುತ್ತಿದೆ. ಕಳೆದ ಆವೃತ್ತಿಯ ಆವೇಗವನ್ನು ಮುಂದುವರಿಸಿಕೊಂಡು ಹೋಗಲು ಉತ್ಸುಕನಾಗಿದ್ದೇನೆ. ನಮ್ಮ ಹುಡುಗರನ್ನು ನೋಡಲು ಕಾಯುತ್ತಿದ್ದೇನೆ ಎಂದು ಆರ್ಸಿಬಿ ವೆಬ್ಸೈಟ್ಗೆ ವಿಲಿಯರ್ಸ್ ತಿಳಿಸಿದ್ದಾರೆ.
ಇದನ್ನೂ ಓದಿ:ಹೆಜಲ್ವುಡ್ ಹೋದ್ರೆ ತೊಂದ್ರೆಯಿಲ್ಲ, ಈ ವೇಗಿ ಅವರ ಸ್ಥಾನ ತುಂಬ್ತಾರೆ: ಬ್ರಾಡ್ ಹಾಗ್