ಸಿಡ್ನಿ: ಬ್ರಿಸ್ಬೇನ್‌ನಲ್ಲಿ ಹೊಸದಾಗಿ ಮೂರು ದಿನಗಳ ಲಾಕ್‌ಡೌನ್ ಘೋಷಣೆ ಮಾಡಲಾಗಿದ್ದು, ಜನವರಿ 15 ರಿಂದ ಕ್ವೀನ್ಸ್‌ಲ್ಯಾಂಡ್ ರಾಜ್ಯ ರಾಜಧಾನಿಯಲ್ಲಿ ಭಾರತ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನು ನಡೆಸಲು ಪ್ರಯತ್ನಿಸುತ್ತಿರುವ ಕ್ರಿಕೆಟ್ ಆಸ್ಟ್ರೇಲಿಯಾವನ್ನು ತೊಂದರೆಗೆ ಸಿಲುಕಿಸಿದೆ.
ಭಾರತ ಮತ್ತು ಆಸ್ಟ್ರೇಲಿಯಾದ ಉನ್ನತ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಕಠಿಣವಾದ ಕ್ವಾರಂಟೈನ್ ನಿಯಮಗಳನ್ನು ಸಡಿಲಿಸುವ ಕುರಿತು ಚರ್ಚೆಯಲ್ಲಿ ತೊಡಗಿರುವ 24 ಗಂಟೆಗಳ ನಂತರ ಲಾಕ್‌ಡೌನ್ ಘೋಷಿಸಲಾಗಿದೆ.
"ಮುಂದಿನ ವಾರ ಗಬ್ಬಾದಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ, ಬ್ರಿಸ್ಬೇನ್‌ನಲ್ಲಿ ಮೂರು ದಿನಗಳ ಲಾಕ್‌ಡೌನ್ ಪರಿಣಾಮ ನಿರ್ಧರಿಸಲು ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳು ತುರ್ತಾಗಿ ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ಪಂದ್ಯ ನಡೆಯುವುದು ಅನುಮಾನವಾಗಿತ್ತು. ಏಕೆಂದರೆ ಕಠಿಣ ಜೈವಿಕ ಭದ್ರತಾ ನಿರ್ಬಂಧಗಳಿಗೆ ಭಾರತ ಹಿಂಜರಿಯುತ್ತದೆ" ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಗುರುವಾರ, ಬಿಸಿಸಿಐ ಬ್ರಿಸ್ಬೇನ್‌ನ ಕಠಿಣ ಕ್ವಾರಂಟೈನ್ ಪ್ರೋಟೋಕಾಲ್‌ನಲ್ಲಿ ವಿನಾಯಿತಿ ಕೋರಿ ಕ್ರಿಕೆಟ್ ಆಸ್ಟ್ರೇಲಿಯಾಗೆ ಪತ್ರ ಬರೆದು, ಪ್ರವಾಸದ ಆರಂಭದಲ್ಲಿ ಒಪ್ಪಿದ ಕಟ್ಟುನಿಟ್ಟಾದ ಕ್ವಾರಂಟೈನ್ ನಿಯಮವನ್ನು ಈಗಾಗಲೇ ಆಟಗಾರರು ಪೂರೈಸಿದ್ದಾರೆ ಎಂದು ನೆನಪಿಸಿದೆ.
ಬ್ರಿಸ್ಬೇನ್‌ನಲ್ಲಿನ ಸಂಪರ್ಕ ತಡೆಯ ನಿಯಮಗಳ ಪ್ರಕಾರ, ದಿನದ ಆಟ ಮುಗಿನ ನಂತರ ಆಟಗಾರರು ತಮ್ಮ ಹೋಟೆಲ್ ಕೋಣೆ ಬಿಟ್ಟು ಹೊರಬರುವಂತಿಲ್ಲ.