ಲೀಡ್ಸ್:ಇಂಗ್ಲೆಂಡ್ ತಂಡ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರ ಏಕಾಂಗಿ ಹೋರಾಟದಿಂದ ಆಸ್ಟ್ರೇಲಿಯಾ ತಂಡವನ್ನು ಒಂದು ವಿಕೆಟ್ನಿಂದ ಮಣಿಸಿ ಆ್ಯಶಸ್ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ.
ಈ ಪಂದ್ಯ ಟೆಸ್ಟ್ ಇತಿಹಾಸದಲ್ಲಿ ಕಂಡುಬಂದಿರುವ ಅದ್ಭುತ ಪಂದ್ಯ. ಹೌದು, ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 67 ರನ್ಗಳಿಗೆ ಆಲೌಟ್ ಆಗಿ ಸೋಲುವ ಸುಳಿಗೆ ಸಿಲುಕಿತ್ತು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ನೀಡಿದ್ದ 359 ರನ್ಗಳ ಗುರಿಯನ್ನು 9 ವಿಕೆಟ್ ಕಳೆದುಕೊಂಡು ತಲುಪಿದ ಇಂಗ್ಲೆಂಡ್ ಐತಿಹಾಸಿಕ ಸಾಧನೆಗೆ ಪಾತ್ರವಾಯಿತು.
ಈ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ ಬೆನ್ಸ್ಟೋಕ್ಸ್ ಕೊನೆಯ ವಿಕೆಟ್ ಜೊತೆಯಾಟದಲ್ಲಿ 76 ರನ್ ಸೇರಿಸಿ ಸೋಲುತ್ತಿದ್ದ ಪಂದ್ಯವನ್ನು ಇಂಗ್ಲೆಂಡ್ ತಂಡಕ್ಕೆ ದಕ್ಕಿಸಿಕೊಟ್ಟರು. 219 ಎಸೆತಗಳೆಲ್ಲವನ್ನು ಎದುರಿಸಿದ ಸ್ಟೋಕ್ಸ್ 8 ಸಿಕ್ಸರ್ ಹಾಗೂ 11 ಬೌಂಡರಿ ಸಹಿತ 135 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಮೊದಲ ಇನ್ನಿಂಗ್ಸ್ನಲ್ಲಿ ಕಡಿಮೆ ಮೊತ್ತಕ್ಕೆ ಆಲೌಟ್ ಆದರೂ ಪಂದ್ಯವನ್ನು ಗೆದ್ದ 4 ನೇ ತಂಡ ಎಂಬ ದಾಖಲೆಗೆ ಇಂಗ್ಲೆಂಡ್ ಪಾತ್ರವಾಗಿದೆ. ಇದೇ ರೀತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದರೂ ಗೆದ್ದ ಮೂರು ಪಂದ್ಯಗಳ ವಿವರ ಇಲ್ಲಿದೆ.
1)1886ರಲ್ಲಿ ಇಂಗ್ಲೆಂಡ್ ಇದೇ ಆಸ್ಟ್ರೇಲಿಯಾ ತಂಡದ ಎದುರು ಮೊದಲ ಇನ್ನಿಂಗ್ಸ್ನಲ್ಲಿ 45 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಆಸೀಸ್ 119 ರನ್ಗಳಿಗೆ ಆಲೌಟ್ ಆದರೆ, ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ನಲ್ಲಿ 184 ರನ್ ಗಳಿಸಿ 111 ರನ್ಗಳ ಟಾರ್ಗೆಟ್ ನೀಡಿತ್ತು. ಆದರೆ ಆಸ್ಟ್ರೇಲಿಯಾ 97 ರನ್ಗಳಿಗೆ ಆಲೌಟ್ ಆಗುವ ಮೂಲಕ 13 ರನ್ಗಳ ಸೋಲನುಭವಿಸಿತು.
2) 1888ರಲ್ಲಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 116 ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 60 ರನ್ಗಳಿಗೆ ಆಲೌಟ್ ಆಗಿತ್ತು. ಆದರೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 53 ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 62 ರನ್ಗಳಿಗೆ ಆಲೌಟ್ ಆಗಿ, 123 ರನ್ಗಳ ಟಾರ್ಗೆಟ್ ತಲುಪಲಾಗದೇ 61 ರನ್ಗಳ ಸೋಲನುಭವಿಸಿತ್ತು.
3) 1882 ರಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ನಲ್ಲಿ 63 ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 122 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 101 ರನ್ ಗಳಿಸಿ 38 ರನ್ಗಳ ಮುನ್ನಡೆ ಪಡೆದರೂ ಎರಡನೇ ಇನ್ನಿಂಗ್ಸ್ನಲ್ಲಿ 84 ರನ್ಗಳನ್ನು ಚೇಸ್ ಮಾಡಲಾಗದೆ 7 ರನ್ಗಳ ಸೋಲನುಭವಿಸಿತ್ತು.
ಇದೀಗ 67ಕ್ಕೆ ಆಲೌಟ್ ಆಗಿದ್ದ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ನಲ್ಲಿ 359 ರನ್ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ತಲುಪುವ ಮೂಲಕ ಇತಿಹಾಸ ನಿರ್ಮಿಸಿದೆ.