ಅಹ್ಮದಾಬಾದ್: ಅಕ್ಷರ್ ಪಟೇಲ್ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಆಂಗ್ಲರನ್ನು ಕೇವಲ 112 ರನ್ಗಳಿಗೆ ಕಟ್ಟಿಹಾಕಿದ್ದ ಭಾರತ ತಂಡ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ 99 ರನ್ ಗಳಿಸಿ ಅಹರ್ನಿಶಿ ಟೆಸ್ಟ್ನಲ್ಲಿ ಮೊದಲ ದಿನ ಪ್ರಾಬಲ್ಯ ಸಾಧಿಸಿದೆ.
ಅಹ್ಮದಾಬಾದ್ನ ನವೀಕರಣಗೊಂಡಿರುವ ನರೇದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಆರಂಭದಿಂದಲೂ ಭಾರತದ ಬೌಲಿಂಗ್ ದಾಳಿಗೆ ಪ್ರತ್ಯುತ್ತರ ನೀಡಲು ಸಾಧ್ಯವಾಗಲಿಲ್ಲ. ಪಂದ್ಯ ಆರಂಭವಾದ 3ನೇ ಓವರ್ನಲ್ಲಿ 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಇಶಾಂತ್ ಶರ್ಮಾ, ಡೊಮೆನಿಕ್ ಸಿಬ್ಲೀ(0) ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ ಮೇಲುಗೈ ತಂದುಕೊಟ್ಟರು.
ಆದರೆ ನಂತರ ದಾಳಿಗಿಳಿದ ಸ್ಪಿನ್ನರ್ಗಳಾದ ಅಕ್ಷರ್ ಪಟೇಲ್ ಹಾಗೂ ಅಶ್ವಿನ್ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳನ್ನು ಕ್ರೀಸ್ನಲ್ಲಿ ನೆಲೆಯೂರದಂತೆ ಮಾಡಿದರು.ಅಕ್ಷರ್ ಪಟೇಲ್ 38 ರನ್ ನೀಡಿ 6 ವಿಕೆಟ್ ಪಡೆದರೆ, ಆರ್.ಅಶ್ವಿನ್ 26 ರನ್ ನೀಡಿ 3 ವಿಕೆಟ್ ಪಡೆದು ಆಂಗ್ಲರ ತಂಡವನ್ನು ಕೇವಲ 112 ರನ್ಗಳಿಗೆ ಆಲೌಟ್ ಆಗುವಂತೆ ಮಾಡಿದರು.