ದುಬೈ :2022ರ ಕಾಮನ್ವೆಲ್ತ್ ಗೇಮ್ಸ್ ಅರ್ಹತಾ ಟೂರ್ನಿ ಗೆದ್ದ ಶ್ರೀಲಂಕಾ ತಂಡ 8ನೇ ತಂಡವಾಗಿ ಬಹು ತಂಡಗಳ ಟೂರ್ನಿಗೆ ಅರ್ಹತೆ ಪಡೆದಿದೆ. ಈ ಮೂಲಕ ಕ್ರಿಕೆಟ್ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ತಂಡಗಳನ್ನು ಖಚಿತಪಡಿಸಿದ ಮೊದಲ ಕ್ರೀಡೆಯಾಗಿದೆ.
ಕಳೆದ ವಾರ ಕೌಲಾಲಂಪುರದಲ್ಲಿ 5 ದೇಶಗಳ ನಡುವೆ ನಡೆದ ಅರ್ಹತಾ ಟೂರ್ನಾಮೆಂಟ್ನಲ್ಲಿ ಶ್ರೀಲಂಕಾ ಮಹಿಳಾ ತಂಡ ಗೆಲ್ಲುತ್ತಿದ್ದಂತೆ ಟೂರ್ನಿಯಲ್ಲಿ ಭಾಗವಹಿಸಲು ಅನುಮೋದನೆ ಪಡೆದುಕೊಂಡಿದೆ ಎಂದು ಐಸಿಸಿ ಮತ್ತು ಕಾಮನ್ವೆಲ್ತ್ ಫೆಡೆರೇಶನ್ 8 ತಂಡಗಳು ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿವೆ ಎಂದು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.
ಕಾಮನ್ವೆಲ್ತ್ ಗೇಮ್ಸ್ಗೆ ಆಸ್ಟ್ರೇಲಿಯಾ, ಬಾರ್ಬಡೊಸ್, ಇಂಗ್ಲೆಂಡ್, ಇಂಡಿಯಾ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳು ಈಗಾಗಲೇ ನೇರ ಅರ್ಹತೆ ಪಡೆದಿದ್ದವು.
ಬಹು ಕ್ರೀಡೆಗಳ ಈ ಸ್ಪರ್ಧೆಯಲ್ಲಿ ಕ್ರಿಕೆಟ್ ಭಾಗವಹಿಸುತ್ತಿರುವುದು ಇದು 2ನೇ ಬಾರಿಯಾಗಿದೆ. 1998ರಲ್ಲಿ ಕೌಲಾಲಂಪುರದಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಪುರುಷ ತಂಡಗಳು ಭಾಗವಹಿಸಿದ್ದವು. ಶಾನ್ ಪೊಲಕ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ ಸ್ಟೀವ್ ನೇತೃತ್ವದ ಆಸ್ಟ್ರೇಲಿಯಾ ತಂಡವನ್ನು 4 ವಿಕೆಟ್ಗಳಿಂದ ಮಣಿಸಿ ಚಿನ್ನದ ಪದಕ ಪಡೆದಿತ್ತು.