ಬರ್ಮಿಂಗ್ಹ್ಯಾಮ್(ಲಂಡನ್) :ಕಾಮನ್ವೆಲ್ತ್ ಗೇಮ್ಸ್ ಭಾರತ ಮತ್ತು ಪಾಕಿಸ್ತಾನ ವನಿತೆಯರ ಮುಖಾಮುಖಿಯಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಪಾಕ್ ವನಿತೆಯರು ನೀಡಿದ್ದ ಸುಲಭ ಮೊತ್ತವನ್ನು ಭಾರತ ತಂಡ 11.4 ಓವರ್ಗಳಲ್ಲೇ 2 ವಿಕೆಟ್ ನಷ್ಟದಿಂದ ಜಯ ಸಾಧಿಸಿದೆ. ಈ ಮೂಲಕ ಕಾಮನ್ ವೆಲ್ತ್ನ ಎ ಗುಂಪಿನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಅಲ್ಪ ಮೊತ್ತಕ್ಕೆ ಕುಸಿತ ಕಂಡಿತು. ಮಳೆಯ ಕಾರಣ ಒಂದು ಗಂಟೆ ತಡವಾಗಿ ಆರಂಭವಾದ ಪಂದ್ಯದಲ್ಲಿ ಪಾಕಿಸ್ತಾನವನ್ನು ಭಾರತೀಯ ಬೌಲರ್ಗಳು ಕಾಡಿದರು. ಪಾಕಿಸ್ತಾನ 18 ಓವರ್ಗೆ 99ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೊತ್ತವನ್ನು ಭಾರತ ತಂಡದ 11.4 ಓವರ್ನಲ್ಲಿ 102 ರನ್ಗೆ 2 ವಿಕೇಟ್ ಕೆಳೆದುಕೊಂಡು ಸರಳವಾಗಿ ಗೆದ್ದುಕೊಂಡಿತು.
ಉಪ ನಾಯಕಿ ಸ್ಮೃತಿ ಮಂದಾನ ಅವರ ಅದ್ಭುತ ಅರ್ಧ ಶತಕದ ನೆರವಿನಿಂದ ತಂಡ ಸುಲಭ ಜಯ ಸಾಧಿಸಿತು. ಮಂದಾನ ಅವರು 42 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ನಿಂದ ಅಜೇಯ 63 ರನ್ ಗಳಿಸಿದರು. ಅವರೊಂದಿಗೆ ಆರಂಭಿಕರಾಗಿ ಬಂದ ಶಫಾಲಿ ವರ್ಮಾ 50ರನ್ಗಳ ಜೊತೆಯಾಟಕ್ಕೆ ನೆರವಾದರು. ಹೆಚ್ಚು ಮಂದಾನ ಕ್ರಿಸ್ನಲ್ಲಿದ್ದ ಕಾರಣ 9 ಎಸೆತಗಳಲ್ಲಿ ಚುರುಕಾದ 16 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಶಫಾಲಿ ವಿಕೆಟ್ ನಂತರ ಬಂದ ಸಬ್ಬಿನೇನಿ ಮೇಘನಾ (14), ಜೆಮಿಮಾ ರೋಡ್ರಿಗಸ್ (2) ಮಂದಾನಗೆ ಸಾಥ್ ನೀಡಿದರು. ಪಾಕಿಸ್ತಾನದ ಪರ ಒಮೈಮಾ ಸೊಹೈಲ್ ಮತ್ತು ತುಬಾ ಹಸನ್ ತಲಾ ಒಂದು ವಿಕೆಟ್ ಪಡೆದರು.