ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​ ತಂಡದ ನಾಯಕತ್ವಕ್ಕೆ ಈತನೇ ಸೂಕ್ತ : ಆಲ್​ರೌಂಡರ್​ ಪರ ವಾನ್, ಹುಸೇನ್ ಬ್ಯಾಟಿಂಗ್ - ಇಂಗ್ಲೆಂಡ್ ನಾಯಕತ್ವಕ್ಕೆ ಬೆನ್​ ಸ್ಟೋಕ್ಸ್ ಸೂಕ್ತ

ಇಂಗ್ಲೆಂಡ್ ತಂಡದ ನಾಯಕತ್ವಕ್ಕೆ ಆತನನ್ನು ಬಿಟ್ಟು ತಂಡದಲ್ಲಿರುವ ಬೇರೆ ಯಾರನ್ನು ನಾನು ನೋಡುತ್ತಿಲ್ಲ. ಬೆನ್​ ಸ್ಟೋಕ್ಸ್​ ಮಾತ್ರ ಆ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯ. ಅವರಿಗೆ ಒಳ್ಳೆಯ ಕ್ರಿಕೆಟ್​ ಜ್ಞಾನವಿದೆ. ಅದಕ್ಕಾಗಿ ಅವರು ಎಲ್ಲವನ್ನು ನೀಡಲು ಸಜ್ಜಾಗಿದ್ದಾರೆ. ಅವರು ಖಂಡಿತವಾಗಿಯೂ ತಮ್ಮ ಸುತ್ತಲಿನ ಆಟಗಾರರಿಂದ ಗೌರವವನ್ನು ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ..

Ben Stokes Is Obvious Choice To Lead England Test Team
ಬೆನ್​ ಸ್ಟೋಕ್ಸ್​ ಇಂಗ್ಲೆಂಡ್ ನಾಯಕ

By

Published : Apr 16, 2022, 4:47 PM IST

ಮುಂಬೈ :ಸಾಲು ಸಾಲು ಸರಣಿ ಸೋಲುಗಳ ಬಳಿಕ ಜೋ ರೂಟ್​ ಇಂಗ್ಲೆಂಡ್ ತಂಡದ ನಾಯಕತ್ವವನ್ನು ತ್ಯಜಿಸಿದ್ದಾರೆ. ಇದೀಗ ಆಂಗ್ಲರ ಮುಂದಿನ ನಾಯಕ ಯಾರು ಎಂಬ ಕುತೂಹಲ ಕ್ರಿಕೆಟ್​ ವಲಯದಲ್ಲಿ ಬಿಸಿ ಚರ್ಚೆಯಾಗಿದೆ. ಇಂಗ್ಲೆಂಡ್ ಮಾಜಿ ನಾಯಕರೆಲ್ಲ ಪ್ರಸ್ತುತ ಉಪನಾಯಕನಾಗಿರುವ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಮ್ಯಾನೇಜ್​ಮೆಂಟ್​ ಮುಂದಿರುವ ಸ್ಪಷ್ಟವಾದ ಆಯ್ಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್ ಭಾರತದ ವಿರುದ್ಧ 2 ಸರಣಿ, ಆ್ಯಶಸ್​ನಲ್ಲಿ 0-4 ಮತ್ತು ವೆಸ್ಟ್​ ಇಂಡೀಸ್ ವಿರುದ್ಧ 0-1ರಲ್ಲಿ ಸರಣಿಯನ್ನು ಕಳೆದುಕೊಂಡಿತ್ತು. ಇಂಗ್ಲೆಂಡ್ ತಂಡದ ನಾಯಕತ್ವಕ್ಕೆ ಆತನನ್ನು ಬಿಟ್ಟು ತಂಡದಲ್ಲಿರುವ ಬೇರೆ ಯಾರನ್ನು ನಾನು ನೋಡುತ್ತಿಲ್ಲ. ಬೆನ್​ ಸ್ಟೋಕ್ಸ್​ ಮಾತ್ರ, ಆ ಸ್ಥಾನವನ್ನು ಪಡೆದುಕೊಳ್ಳಲು ಅವರಿಗೆ ಸಾಧ್ಯ. ಅವರಿಗೆ ಒಳ್ಳೆಯ ಕ್ರಿಕೆಟ್​ ಜ್ಞಾನವಿದೆ. ಅದಕ್ಕಾಗಿ ಅವರು ಎಲ್ಲವನ್ನು ನೀಡಲು ಸಜ್ಜಾಗಿದ್ದಾರೆ. ಅವರು ಖಂಡಿತವಾಗಿಯೂ ತಮ್ಮ ಸುತ್ತಲಿನ ಆಟಗಾರರಿಂದ ಗೌರವವನ್ನು ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ.

ಇನ್ನು 1999ರಿಂದ 2003ರವರೆಗೆ ಇಂಗ್ಲೆಂಡ ತಂಡವನ್ನು ಮುನ್ನಡೆಸಿದ್ದ ನಾಸಿರ್ ಹುಸೇನ್ ಕೂಡ ಬೆನ್​ ಸ್ಟೋಕ್ಸ್​ಗೆ ಬೆಂಬಲ ಸೂಚಿಸಿದ್ದಾರೆ. "ನನಗೆ ಬೆನ್​ಸ್ಟೋಕ್ಸ್ ಸ್ಪಷ್ಟ ಅಭ್ಯರ್ಥಿಯಾಗಿದ್ದಾರೆ. ಅವರು ಕ್ರಿಕೆಟರ್ ಆಗಿ ಕೆಲವು ಅದ್ಭುತವಾದದನ್ನು ಈಗಾಗಲೇ ಸಾಧಿಸಿದ್ದಾರೆ ಮತ್ತು ಅವರು ಅತ್ಯುತ್ತಮ ಕ್ರಿಕೆಟ್​​ ಜ್ಞಾನವನ್ನು ಹೊಂದಿದ್ದಾರೆ. ಅದನ್ನು ಅವರು ವಿಶ್ವಕಪ್ ಫೈನಲ್​ನಲ್ಲಿ ತೋರಿಸಿದ್ದಾರೆ, ಹೆಡಿಂಗ್ಲೆಯಲ್ಲೂ ತೋರಿಸಿದ್ದಾರೆ.. ಜೋ ರೂಟ್​ ಅನುಪಸ್ಥಿತಿಯಲ್ಲಿ ಹಂಗಾಮಿಯಾಗಿ ತಂಡವನ್ನು ಮುನ್ನಡೆಸಿದಾಗಲೂ ತೋರಿಸಿಕೊಟ್ಟಿದ್ದಾರೆ" ಎಂದು ಸ್ಕೈ ಸ್ಪೋರ್ಟ್ಸ್​ಗೆ ಹೇಳಿದ್ದಾರೆ.

ಕೆಲವು ಜನರು ಓ... ಬೆನ್​ ಸ್ಟೋಕ್ಸ್​, ಫ್ಲಿಂಟಾಫ್ ಮತ್ತು ಬಾಥಮ್​ಗೆ ಏನಾಯಿತು ಅಂತಾ ನಿಮಗೆ ಗೊತ್ತಿಲ್ಲವೇ? ಎಂದು ಹೇಳುತ್ತಾರೆ. ಆದರೆ, ಬೆನ್​ ಸ್ಟೋಕ್ಸ್​ ಅವರು ಫ್ಲಿಂಟಾಫ್ ಅಲ್ಲ ಅಥವಾ ಬಾಥಮ್​ ಅಲ್ಲ, ಬೇರೆ ಜನರು ಏನು ಮಾಡಿದ್ದಾರೆ ಎನ್ನುವುದರ ಆಧಾರದ ಮೇಲೆ ಸ್ಟೋಕ್ಸ್​​ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಾರದು ಎಂದು ತಿಳಿಸಿದ್ದಾರೆ.

ಆದಾಗ್ಯೂ ಹುಸೇನ್, ಒಂದು ವೇಳೆ ಸ್ಟೋಕ್ಸ್ ನಾಯಕತ್ವವನ್ನು ವಹಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲದಿದ್ದರೆ, ಸ್ಟುವರ್ಟ್ ಬ್ರಾಡ್​ರನ್ನು ಸೀಮಿತ ಅವಧಿಗೆ ನಾಯಕತ್ವ ನೀಡಬಹುದು. ಏಕೆಂದರೆ, ಅವರಿಗೂ ಒಳ್ಳೆಯ ಕ್ರಿಕೆಟ್​ ಬ್ರೈನ್ ಇದೆ. ಆತನು ನೈಜ ಫೈಟರ್​, ನೈಜ ಸ್ಪರ್ಧಾಳು. ಆಸ್ಟ್ರೇಲಿಯಾ ತಂಡವನ್ನು ಪ್ಯಾಟ್​ ಕಮಿನ್ಸ್ ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಕೆಲವು ಸಮಯದವರೆಗೆ ಬ್ರಾಡ್​​ರನ್ನು ಆ ಸ್ಥಾನದಲ್ಲಿ ನೋಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಸರಣಿ ಸೋಲುಗಳ ಬಳಿಕ ಇಂಗ್ಲೆಂಡ್ ಟೆಸ್ಟ್​ ನಾಯಕತ್ವದಿಂದ ಕೆಳಗಿಳಿದ ಜೋ ರೂಟ್

ABOUT THE AUTHOR

...view details