ಕರ್ನಾಟಕ

karnataka

ETV Bharat / sports

'IPL ಆದಾಯದ ಶೇ.10ರಷ್ಟು ₹700-800 ಕೋಟಿ ಕೋವಿಡ್‌ ತಡೆಗೆ ಬಿಸಿಸಿಐ ನೀಡಲಿ.. ಲಲಿತ್ ಮೋದಿ - ಐಪಿಎಲ್​ನ ಶೇಕಡಾ 10 ರಷ್ಟು ಆದಾಯ

ಶೇ.10ರಷ್ಟನ್ನು ದೇಣಿಗೆ ನೀಡಲು ಬಿಸಿಸಿಐ ಬಯಸಿದರೆ ಸುಮಾರು 700 ರಿಂದ 800 ಕೋಟಿ ರೂಪಾಯಿಗಳಾಗಲಿದೆ. ನೀವೇ ಊಹಿಸಿಕೊಳ್ಳಿ ಇಷ್ಟು ಹಣದಿಂದ ಎಷ್ಟು ರೋಗಿಗಳ ಪುನಶ್ಚೇತನಗೊಳಿಸಬಹುದು..

ಲಲಿತ್ ಮೋದಿ
ಲಲಿತ್ ಮೋದಿ

By

Published : May 2, 2021, 5:41 PM IST

ನವದೆಹಲಿ :ಭಾರತದಲ್ಲಿ ಕೊರೊನಾ ವೈರಸ್​ನಿಂದ ಊಹಿಸಲಾಗದ ಬಿಕ್ಕಟ್ಟಿನಲ್ಲಿ ಸಿಲುಕಿದ್ದರೂ ಕ್ರಿಕೆಟಿಗರು ಯಾವುದನ್ನೂ ಲೆಕ್ಕಿಸದೇ ಐಪಿಎಲ್ ಹೇಗೆ ಆಡುತ್ತಿದ್ದಾರೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಪ್ರಕರಣ ದಾಖಲಾಗುತ್ತಿವೆ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ಅಲ್ಲದೆ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಕೊರತೆ ಉಂಟಾಗಿದ್ದು, ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗದೆ ಸಾವನ್ನಪ್ಪುತ್ತಿರುವುದು ದುರದೃಷ್ಟಕರ.

ಆದರೆ, ಈ ಸಂದರ್ಭದಲ್ಲೂ ಐಪಿಎಲ್ ಆಟಗಾರರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಇರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಲಲಿತ್ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಸಂತ್ರಸ್ತರಿಗೆ ಮತ್ತು ತಮಗೆ ಆಧಾರವಾಗಿದ್ದವರನ್ನು ಕಳೆದುಕೊಂಡ ಕುಟುಂಬಗಳ ಪುನರ್ವಸತಿಗಾಗಿ ಬಿಸಿಸಿಐ ತನ್ನ ಐಪಿಎಲ್ ಗಳಿಕೆಯ ಕನಿಷ್ಠ ಶೇ.10ರಷ್ಟು ಹಣವನ್ನು ನೀಡುವುದಾಗಿ ಪ್ರತಿಜ್ಞೆ ಮಾಡಬೇಕು.

ಭಾರತದಲ್ಲಿ ಕ್ರಿಕೆಟ್ ಆಟವನ್ನು ಅಷ್ಟು ದೊಡ್ಡದಾಗಿಸಿರುವುದು ಅಭಿಮಾನಿಗಳು. ಅವರ ನೋವಿಗೆ ಮತ್ತು ರಾಷ್ಟ್ರಕ್ಕೆ ಹಿಂದಿರುಗಿಸುವ ಸಮಯ ಇದಾಗಿದೆ" ಎಂದು ಲಲಿತ ಮೋದಿ ಮಿಡ್​-ಡೇ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಶೇ.10ರಷ್ಟನ್ನು ದೇಣಿಗೆ ನೀಡಲು ಬಿಸಿಸಿಐ ಬಯಸಿದರೆ ಸುಮಾರು 700 ರಿಂದ 800 ಕೋಟಿ ರೂಪಾಯಿಗಳಾಗಲಿದೆ. ನೀವೇ ಊಹಿಸಿಕೊಳ್ಳಿ ಇಷ್ಟು ಹಣದಿಂದ ಎಷ್ಟು ರೋಗಿಗಳ ಪುನಶ್ಚೇತನಗೊಳಿಸಬಹುದು ಎಂದು ಮೋದಿ ಹೇಳಿದ್ದಾರೆ.

ಇದನ್ನು ಓದಿ:ಕೋವಿಡ್ ಹೋರಾಟಕ್ಕೆ ಪಾಂಡ್ಯ ಬ್ರದರ್ಸ್ ಸಾಥ್​: ಗ್ರಾಮೀಣ ಪ್ರದೇಶಕ್ಕೆ 200 ಆಕ್ಸಿಜನ್ ಕಾನ್ಸಂಟ್ರೇಟರ್ಸ್ ನೆರವು

ABOUT THE AUTHOR

...view details