ಕರ್ನಾಟಕ

karnataka

ETV Bharat / sports

ವೃದ್ಧಿಮಾನ್​ ಸಹಾಗೆ ಪತ್ರಕರ್ತನಿಂದ ಬೆದರಿಕೆ, ಹೆಸರು ಬಹಿರಂಗಪಡಿಸುವಂತೆ ಬಿಸಿಸಿಐ ಸೂಚನೆ

ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿಗೆ ವೃದ್ಧಿಮಾನ್ ಸಹಾರನ್ನು ತಂಡದಿಂದ ಕೈಬಿಟ್ಟ ನಂತರ ಪತ್ರಕರ್ತನೊಬ್ಬ ತಮಗೆ ಸಂದರ್ಶನ ನೀಡುವಂತೆ ಬೇಡಿಕೆಯಿಟ್ಟಿದ್ದು, ಅದಕ್ಕೆ ಒಪ್ಪದಿದ್ದಾಗ ಹಲವಾರು ಸಂದೇಶಗಳನ್ನು ಕಳುಹಿಸಿ ಕ್ರಿಕೆಟಿಗನ ಕೆರಿಯರ್​ಗೆ​ ತೊಂದರೆ ಮಾಡುವ ರೀತಿಯಲ್ಲಿ ಸರಣಿ ಸಂದೇಶಗಳನ್ನು ಕಳುಹಿಸಿದ್ದಾರೆ..

Wriddhiman saha
ವೃದ್ಧಿಮಾನ್​ ಸಹಾ

By

Published : Feb 21, 2022, 5:29 PM IST

Updated : Feb 21, 2022, 5:38 PM IST

ಮುಂಬೈ :ಭಾರತ ತಂಡದ ವಿಕೆಟ್ ಕೀಪರ್​ ವೃದ್ಧಿಮಾನ್​ ಸಹಾ ಅವರಿಗೆ ಬೆದರಿಗೆಯೊಡ್ಡಿರುವ ಪತ್ರಕರ್ತನ ವಿರುದ್ಧ ಕ್ರಮಕ್ಕೆ ಬೋರ್ಡ್​ ಸಿದ್ಧವಿದೆ. ಆತನ ಹೆಸರನ್ನು ಬಹಿರಂಗಗೊಳಿಸಲು ಬಿಸಿಸಿಐ ಸೂಚಿಸಿದೆ.

ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿಗೆ ವೃದ್ಧಿಮಾನ್ ಸಹಾರನ್ನು ತಂಡದಿಂದ ಕೈಬಿಟ್ಟ ನಂತರ ಪತ್ರಕರ್ತನೊಬ್ಬ ತಮಗೆ ಸಂದರ್ಶನ ನೀಡುವಂತೆ ಬೇಡಿಕೆಯಿಟ್ಟಿದ್ದು, ಅದಕ್ಕೆ ಒಪ್ಪದಿದ್ದಾಗ ಹಲವಾರು ಸಂದೇಶಗಳನ್ನು ಕಳುಹಿಸಿ ಕ್ರಿಕೆಟಿಗನ ಕೆರಿಯರ್​ಗೆ​ ತೊಂದರೆ ಮಾಡುವ ರೀತಿಯಲ್ಲಿ ಸರಣಿ ಸಂದೇಶಗಳನ್ನು ಕಳುಹಿಸಿದ್ದಾರೆ.

"ನನ್ನ ಜೊತೆಗೆ ಒಂದು ಸಂದರ್ಶನ ಮಾಡಿ, ಒಳ್ಳೆಯದಾಗುತ್ತದೆ, ನೀವು ಎಲ್ಲರಿಗೂ ಸಂದರ್ಶನ ನೀಡಲು ಬಯಸಿದರೆ, ನಾನೇನು ಬಲವಂತ ಮಾಡುವುದಿಲ್ಲ. ಅವರು(ಆಯ್ಕೆ ಸಮಿತಿ) ಅತ್ಯುತ್ತಮವಾದ ಒಬ್ಬ ವಿಕೆಟ್ ಕೀಪರ್ ಆಯ್ಕೆ ಮಾಡಿದ್ದಾರೆ.

ನೀವು ಅತ್ಯುತ್ತಮವಲ್ಲದ 11 ಪತ್ರಕರ್ತರನ್ನು ಆಯ್ಕೆ ಮಾಡಿಕೊಂಡಿರುವುದು ನನ್ನ ಪ್ರಕಾರ ಉತ್ತಮ ನಿರ್ಧಾರವಲ್ಲ. ನೀವು ನಿಮಗೆ ಯಾರು ಸಹಾಯ ಮಾಡಬಲ್ಲರೋ ಅವರನ್ನು ಆಯ್ಕೆ ಮಾಡಿ" ಎಂದು ವಾಟ್ಸಪ್​ ಮೂಲಕ ಸರಣಿ ಸಂದೇಶ ಕಳಹಿಸಿದ್ದಾರೆ.

ಆದರೆ, ಅವರ ಕರೆಯನ್ನು ಸಹಾ ಸ್ವೀಕರಿಸದ್ದಕ್ಕೆ ಕೋಪಗೊಂಡಿರುವ ಆ 'ಜರ್ನಲಿಸ್ಟ್' " ನೀವು ನನಗೆ ಕರೆ ಮಾಡಿಲ್ಲ, ಇನ್ನು ಯಾವತ್ತೂ ನಾನು ನಿಮ್ಮ ಸಂದರ್ಶನ ಮಾಡುವುದಿಲ್ಲ. ಈ ಅವಮಾನವನ್ನು ನಾನು ಸಾಮಾನ್ಯ ಎಂದು ಪರಿಗಣಿಸುವುದಿಲ್ಲ. ನಾನು ಇದನ್ನು ನೆನಪಿನಲ್ಲಿಟ್ಟುಕೊಂಡಿರುತ್ತೇನೆ. ಇದು ನೀವು ಮಾಡಬೇಕಾದ ಕೆಲಸವಾಗಿರಲಿಲ್ಲ" ಎಂದು ಕೋಪದಿಂದ ಸಂದೇಶ ಕಳುಹಿಸಿದ್ದಾರೆ.

ಈ ಸಂದೇಶಗಳ ಸ್ಕ್ರೀನ್​ ಶಾಟ್​ ತೆಗೆದಿದ್ದ ವೃದ್ಧಿಮಾನ್ ಸಹಾ "ಭಾರತೀಯ ಕ್ರಿಕೆಟ್​ಗೆ ನಾನು ಇಷ್ಟೆಲ್ಲಾ ಕೊಡುಗೆ ನೀಡಿದ್ದರೂ, ಗೌರವಾನ್ವಿತ ಪತ್ರಕರ್ತ ಎನಿಸಿಕೊಂಡಿರುವ ವ್ಯಕ್ತಿಯಿಂದ ಇದನ್ನು ಎದುರಿಸಿದ್ದೇನೆ. ಪತ್ರಿಕೋದ್ಯಮ ಎತ್ತ ಸಾಗುತ್ತಿದೆ" ಎಂದು ಟ್ವೀಟ್​ ಮಾಡಿಕೊಂಡಿದ್ದರು.

ಇದು ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಪ್ರಗ್ಯಾನ್ ಓಝಾ, ಹರ್ಭಹಜನ್ ಸಿಂಗ್, ರವಿಶಾಸ್ತ್ರಿ, ವೆಂಕಟೇಶ್ ಪ್ರಸಾದ್, ಆರ್​ಪಿ ಸಿಂಗ್ ಸೇರಿದಂತೆ ಹಲವಾರು ಕ್ರಿಕೆಟಿಗರು ಕಿಡಿ ಕಾರಿದ್ದು, ಆತನ ಹೆಸರನ್ನು ಬಹಿರಂಗಪಡಿಸಿ ಕ್ರಿಕೆಟ್​ ವಲಯದಿಂದ ಆತನನ್ನು ಬಹಿಷ್ಕರಿಸುವಂತೆ ಮಾಡೋಣ ಎಂದು ಅಸಮಧಾನ ವ್ಯಕ್ತಪಡಿಸಿದ್ದರು.

ಇದೀಗ ಎಚ್ಚೆತ್ತುಕೊಂಡಿರುವ ಬಿಸಿಸಿಐ ವೃದ್ಧಿಮಾನ್ ಸಹಾ ಅವರಿಗೆ ತಮಗೆ ಬೆದರಿಕೆಯೊಡ್ಡಿರುವ ಆ ವ್ಯಕ್ತಿಯ ಹೆಸರನ್ನು ಬಹಿರಂಗ ಪಡಿಸಲು ಸೂಚಿಸಿದೆ. ಸಹಾ ಭಾರತ ತಂಡದ ಗುತ್ತಿಗೆಯಲ್ಲಿರುವ ಕ್ರಿಕೆಟಿಗ, ಮಂಡಳಿ ತನ್ನ ಆಟಗಾರನನ್ನು ಯಾವುದೇ ವಿಚಾರದಲ್ಲಿ ನಿರಾಸೆಗೊಳಿಸಲು ಬಿಡುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಸಹಾ ಹೇಳಿಕೆಯಿಂದ ನೋವಾಗಿಲ್ಲ, ಅವರ ಮೇಲೆ ಅಪಾರ ಗೌರವವಿದೆ: ರಾಹುಲ್ ದ್ರಾವಿಡ್​

Last Updated : Feb 21, 2022, 5:38 PM IST

ABOUT THE AUTHOR

...view details