ಕರ್ನಾಟಕ

karnataka

ETV Bharat / sports

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​: 20 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಬಿಸಿಸಿಐ, ಯಾರಿಗೆಲ್ಲ ಚಾನ್ಸ್​? - ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿ

ನ್ಯೂಜಿಲ್ಯಾಂಡ್​ ವಿರುದ್ಧದ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಹಾಗೂ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗಾಗಿ ಟೀಂ ಇಂಡಿಯಾ ಪ್ರಕಟಗೊಂಡಿದೆ.

India squad
India squad

By

Published : May 7, 2021, 7:27 PM IST

Updated : May 7, 2021, 8:11 PM IST

ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್​ ಟೂರ್ನಿ ರದ್ದಾಗುತ್ತಿದ್ದಂತೆ ಟೀಂ ಇಂಡಿಯಾ ಇದೀಗ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯಕ್ಕೆ ಸಜ್ಜುಗೊಳ್ಳುತ್ತಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ಮಂಡಳಿ ಕೊಹ್ಲಿ ನೇತೃತ್ವದ ಬಲಿಷ್ಠ ತಂಡ ಪ್ರಕಟಿಸಿದೆ.

20 ಸದಸ್ಯರನ್ನೊಳಗೊಂಡ ಬಲಿಷ್ಠ ತಂಡ ಪ್ರಕಟಿಸಲಾಗಿದ್ದು, ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್ ಫೈನಲ್ ಹಾಗೂ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ತಂಡ ಭಾಗಿಯಾಗಲಿದೆ.

ಸೌಥ್​ಆ್ಯಂಪ್ಟ್​​ನಲ್ಲಿ ಜೂನ್​ 18ರಿಂದ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ ಆರಂಭಗೊಳ್ಳಲಿದ್ದು, ಕೆಲವೊಂದು ಪ್ರಮುಖ ಪ್ಲೇಯರ್ಸ್ ತಂಡ ಸೇರಿಕೊಂಡಿದ್ದಾರೆ. ಆಲ್​ರೌಂಡರ್​ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಜತೆಗೆ ಉಮೇಶ್​ ಯಾದವ್​ ಕಮ್​ಬ್ಯಾಕ್​ ಮಾಡಿದ್ದಾರೆ. ಟೆಸ್ಟ್​ ಚಾಂಪಿಯನ್​ಶಿಪ್​ ಮುಕ್ತಾಯಗೊಂಡ ಬಳಿಕ ಇಂಗ್ಲೆಂಡ್​ನಲ್ಲಿ ಆಗಸ್ಟ್​​ 4ರಿಂದ ಸೆಪ್ಟೆಂಬರ್​ 14ರವರೆಗೆ ಐದು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಭಾಗಿಯಾಗಲಿದೆ.

ವಿಶೇಷ ಎಂದರೆ ಟೂರ್ನಿಯಿಂದ ಹಾರ್ದಿಕ್ ಪಾಂಡ್ಯ, ಪೃಥ್ವಿ ಶಾ ಹಾಗೂ ಕುಲ್ದೀಪ್​ ಯಾದವ್ ಹಾಗೂ ಭುವನೇಶ್ವರ್​ ಕುಮಾರ್​​​ ಹೊರಗುಳಿದಿದ್ದಾರೆ. ಶಿಖರ್​ ಧವನ್​ಗೂ ಮನೆ ಹಾಕಿಲ್ಲ.

ಟೀಂ ಇಂಡಿಯಾ: ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ಅಜಿಂಕ್ಯ ರಹಾನೆ, ರೋಹಿತ್​ ಶರ್ಮಾ, ಶುಭಮನ್​ ಗಿಲ್​, ಮಯಾಂಕ್​ ಅಗರವಾಲ್​, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ರಿಷಭ್​ ಪಂತ್​, ಆರ್​.ಅಶ್ವಿನ್​, ರವೀಂದ್ರ ಜಡೇಜಾ, ಅಕ್ಸರ್​ ಪಟೇಲ್, ವಾಷಿಂಗ್ಟನ್​ ಸುಂದರ್, ಜಸ್​ಪ್ರೀತ್ ಬುಮ್ರಾ, ಇಶಾಂತ್​ ಶರ್ಮಾ, ಮೊಹಮ್ಮದ್​ ಶಮಿ, ಮೊಹಮ್ಮದ್ ಸಿರಾಜ್​, ಶಾರ್ದೂಲ್​ ಠಾಕೂರ್​, ಉಮೇಶ್​ ಯಾದವ್​

ಸ್ಟ್ಯಾಂಡ್​ ಬೈ ಪ್ಲೇಯರ್ಸ್​: ಅಭಿಮನ್ಯು ಈಶ್ವರನ್​, ಪ್ರಸಿದ್ಧ ಕೃಷ್ಣ, ಆವೇಶ್ ಖಾನ್​, ಅರ್ಜಾನ್​ ನಾಗ್ವಾಸವಲ್ಲ ತಂಡದೊಂದಿಗೆ ಇರಲಿದ್ದಾರೆ. ಇನ್ನು ಕನ್ನಡಿಗ ಕೆ.ಎಲ್​ ರಾಹುಲ್​ ಹಾಗೂ ವೃದ್ಧಿಮಾನ್​ ಸಾಹಾ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಕಾರಣ ತದನಂತರ ಫಿಟ್ನೇಸ್ ಪರೀಕ್ಷೆ ಪಾಸ್​ ಮಾಡಿದ್ರೆ ಟೂರ್ನಿಯಲ್ಲಿ ಭಾಗಿಯಾಗಲು ಅವಕಾಶ ಪಡೆದುಕೊಳ್ಳಲಿದ್ದಾರೆ.

Last Updated : May 7, 2021, 8:11 PM IST

ABOUT THE AUTHOR

...view details