ಹೋಬಾರ್ಟ್:ಟಿ20 ವಿಶ್ವಕಪ್‌ನ 17ನೇ ಪಂದ್ಯದಲ್ಲಿ ನೆದರ್ಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ಸೋಮವಾರ (ಅಕ್ಟೋಬರ್ 24) ಹೋಬಾರ್ಟ್‌ನಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ನೆದರ್ಲೆಂಡ್ಸ್ ತಂಡ ಬಾಂಗ್ಲಾದೇಶದ ಆಟಗಾರರನ್ನು 144 ರನ್ಗಳಿಗೆ ಕಟ್ಟಿ ಹಾಕಿತ್ತು. 144 ರನ್ಗಳ ಗುರಿ ಬೆನ್ನಟ್ಟಿದ ನೆದರ್ಲೆಂಡ್ ತಂಡ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿ ಬಾಂಗ್ಲಾದೇಶ ವಿರುದ್ಧ ಸೋಲು ಕಂಡಿತು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ 144 ರನ್ ಗಳಿಸಿತು. ಈ ಪಂದ್ಯದಲ್ಲಿ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಶಾಕಿಬ್ ಅಲ್ ಹಸನ್ ಹಾಗೂ ಲಿಟನ್ ದಾಸ್ ವಿಫಲರಾದರು.
ತಂಡದ ಪರ ನಜ್ಮುಲ್ ಹೊಸೈನ್ ಶಾಂಟೊ 25 ರನ್, ಸೌಮ್ಯ ಸರ್ಕಾರ್ 14 ರನ್, ಲಿಟನ್ ದಾಸ್ 9 ರನ್, ನಾಯಕ ಶಕೀಬ್ ಅಲ್ ಹಸನ್ 7 ರನ್, ಅಫೀಫ್ ಹೊಸೈನ್ 38 ರನ್, ಯಾಸಿರ್ ಅಲಿ 3, ವಿಕೆಟ್ ಕೀಪರ್ ನೂರುಲ್ ಹಸನ್ 13 ರನ್, ತಸ್ಕಿನ್ ಅಹ್ಮದ್ 0, ಮೊಸದ್ದೆಕ್ ಹೊಸೈನ್ 20 ರನ್ ಮತ್ತು ಹಸನ್ ಮಹಮೂದ್ ಖಾತೆ ತೆಗೆಯದೇ ಅಜೇಯರಾಗಿ ಉಳಿದರು.
ನೆದರ್ಲೆಂಡ್ ಪರ ಪಾಲ್ ವ್ಯಾನ್ ಮೀಕೆರೆನ್ ಮತ್ತು ಬಾಸ್ ಡಿ ಲೀಡ್ ತಲಾ ಎರಡೆರಡು ವಿಕೆಟ್ಗಳನ್ನು ಕಬಳಿಸಿದ್ರೆ, ಟಿಮ್ ಪ್ರಿಂಗಲ್, ಶರೀಜ್ ಅಹ್ಮದ್, ಲೋಗನ್ ವ್ಯಾನ್ ಬೀಕ್, ಫ್ರೆಡ್ ಕ್ಲಾಸೆನ್ ತಲಾ ಒಂದೊಂದು ವಿಕೆಟ್ ಪಡೆದರು.
ಆರಂಭದಲ್ಲೇ ಮುಗ್ಗರಿಸಿದ ನೆದರ್ಲೆಂಡ್:ಬಾಂಗ್ಲಾದೇಶ ನೀಡಿದ ಗುರಿಯನ್ನು ಬೆನ್ನಟ್ಟಿದ ನೆದರ್ಲೆಂಡ್ ತಂಡ ಆರಂಭದಿಂದಲೇ ಕುಸಿತಕ್ಕೊಳಗಾಯಿತು. ಪವರ್ ಪ್ಲೇನಲ್ಲಿ ನಾಲ್ಕು ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡ ನೆದರ್ಲೆಂಡ್ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಕಾಲಿನ್ ಅಕರ್ಮನ್ ಒಂದೆಡೆಯಿಂದ ಬಾಂಗ್ಲಾದೇಶ ಬೌಲರ್ಗಳನ್ನು ದಂಡಿಸುತ್ತಾ ಬಂದರೆ ಇನ್ನೊಂದೆಡೆ ಇವರಿಗೆ ಸಾಥ್ ನೀಡದೇ ಆಟಗಾರರು ಪೆವಿಲಿಯನ್ ಹಾದಿ ಹಿಡಿಯುತ್ತಿದ್ದರು. ಇದರ ಮಧ್ಯಯೂ ಕಾಲಿನ್ ಅಕರ್ಮನ್ ಬಾಂಗ್ಲದೇಶ ವಿರುದ್ಧ ಅರ್ಧ ಶತಕ ಗಳಿಸಿ ಮಿಂಚಿದರು.