ಬೆಂಗಳೂರು :ಅಂಡರ್-19 ವಿಶ್ವಕಪ್ನಲ್ಲಿ ಟೂರ್ನಿಶ್ರೇಷ್ಠ ಪ್ರಶಸ್ತಿ ಪಡೆದಿದ್ದ ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್ ಡೆವಾಲ್ಡ್ ಬ್ರೇವಿಸ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 3 ಕೋಟಿ ರೂ.ಗಳಿಗೆ ಖರೀದಿಸಿದೆ.
ಬ್ರೇವಿಸ್ ಅಂಡರ್-19 ವಿಶ್ವಕಪ್ನಲ್ಲಿ 6 ಪಂದ್ಯಗಳಿಂದ 84.33ರ ಸರಾಸರಿ ಮತ್ತು 90.20 ಸ್ಟ್ರೈಕ್ರೇಟ್ನಲ್ಲಿ 506 ರನ್ ಗಳಿಸಿ ಟೂರ್ನಿಯಲ್ಲಿ ಗರಿಷ್ಠ ಸ್ಕೋರರ್ ಆಗಿದ್ದರು. ಬೌಲಿಂಗ್ನಲ್ಲಿ ತಂಡಕ್ಕೆ ನೆರವಾಗಿದ್ದ ಅವರು 7 ವಿಕೆಟ್ ಕೂಡ ಪಡೆದಿದ್ದರು.
ಎಬಿಡಿ ವಿಲಿಯರ್ಸ್ರಂತೆ 360 ಡಿಗ್ರಿಯಲ್ಲಿ ಬ್ಯಾಟಿಂಗ್ ಮಾಡಬಲ್ಲ ಯುವ ಬ್ಯಾಟರ್ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಳು ಸ್ಪರ್ಧೆ ನಡೆಸಿದವಾದರೂ ಯುವ ಬ್ಯಾಟರ್ರನ್ನು ಮುಂಬೈ ಖರೀದಿಸುವಲ್ಲಿ ಯಶಸ್ವಿಯಾಯಿತು.