ಹರಾರೆ :ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಜಿಂಬಾಬ್ವೆ ವಿರುದ್ಧದ ಕೊನೆ ಟಿ20 ಪಂದ್ಯದ ವೇಳೆ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ವೇಗವಾಗಿ 2000 ರನ್ ಬಾರಿಸಿರುವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಬಾಬರ್ ಅಜಮ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 52 ಇನ್ನಿಂಗ್ಸ್ಗಳಲ್ಲಿ 2000 ರನ್ ಪೂರೈಸಿದ್ದಾರೆ. ಇದೇ ದಾಖಲೆಯನ್ನು ವಿರಾಟ್ 56 ಇನ್ನಿಂಗ್ಸ್ಗಳಲ್ಲಿ ಪೂರೈಸಿದ್ದರು.
ಇನ್ನು, ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ (62), ಬ್ರೆಂಡನ್ ಮೆಕಲಮ್(66), ಕಿವೀಸ್ನ ಮಾರ್ಟಿನ್ ಗಪ್ಟಿಲ್(68), ಐರ್ಲೆಂಡ್ನ ಪಾಲ್ ಸ್ಟಿರ್ಲಿಂಗ್ (72) ವೇಗವಾಗಿ 2000 ರನ್ ಪೂರೈಸಿದ ದಾಖಲೆಯಲ್ಲಿ ಬಾಬರ್ ಮತ್ತು ಕೊಹ್ಲಿಯ ನಂತರದ ಸ್ಥಾನದಲ್ಲಿದ್ದಾರೆ.
ವೇಗವಾಗಿ 1000 ರನ್ ಪೂರೈಸಿದ ದಾಖಲೆ ಇಂಗ್ಲೆಂಡ್ನ ಡೇವಿಡ್ ಮಲನ್ ಹೆಸರಿನಲ್ಲಿದೆ. ಇನ್ನು, ಟಿ20 ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ 3000 ರನ್ ಪೂರೈಸಿರುವ ಏಕಮಾತ್ರ ಕ್ರಿಕೆಟಿಗನಾಗಿದ್ದಾರೆ.
ಇದನ್ನು ಓದಿ:ಟಿ - 20ಯಲ್ಲಿ ಪಾಕ್ ವಿರುದ್ಧ 19ರನ್ಗಳ ಜಯ: ಐತಿಹಾಸಿಕ ಸಾಧನೆ ಬರೆದ ಜಿಂಬಾಬ್ವೆ!