ಮುಂಬೈ: ನ್ಯೂಜಿಲ್ಯಾಂಡ್ ತಂಡವನ್ನು ಕೇವಲ 62 ರನ್ಗಳಿಗೆ ಆಲೌಟ್ ಮಾಡಿರುವ ಭಾರತ 2ನೇ ಇನ್ನಿಂಗ್ಸ್ನಲ್ಲಿ ವಿಕೆಟ್ ನಷ್ಟವಿಲ್ಲದೆ 69 ರನ್ಗಳಿಸುವ ಮೂಲಕ ಅತ್ಯುತ್ತಮ ಆರಂಭ ಪಡೆದಿದೆ. ಮೊದಲ ಇನ್ನಿಂಗ್ಸ್ನ 263 ರನ್ಗಳ ಮುನ್ನಡೆ ಸೇರಿದಂತೆ ಒಟ್ಟಾರೆ 332 ರನ್ಗಳ ಬೃಹತ್ ಮುನ್ನಡೆ ಸಾಧಿಸಿದೆ.
ಮೊದಲ ದಿನ 4 ವಿಕೆಟ್ ಕಳೆದುಕೊಂಡು 221 ರನ್ಗಳಿಸಿದ್ದ ಭಾರತ ಶನಿವಾರ ಆ ಮೊತ್ತವನ್ನು 325ಕ್ಕೇರಿಸಿ ಆಲೌಟ್ ಆಯಿತು. ಮಯಾಂಕ್ ಅಗರ್ವಾಲ್ 150 ಮತ್ತು ಅಕ್ಷರ್ ಪಟೇಲ್ 52 ರನ್ಗಳಿಸಿದ್ದರು. ನ್ಯೂಜಿಲ್ಯಾಂಡ್ ಪರ ಭಾರತೀಯ ಮೂಲದ ಅಜಾಜ್ ಪಟೇಲ್ ವಿಶ್ವದಾಖಲೆಯ 10 ವಿಕೆಟ್ ಪಡೆದಿದ್ದರು.
ಭಾರತದಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಕಿವೀಸ್ ಆಲೌಟ್
325 ರನ್ಗಳನ್ನು ಹಿಂಬಾಲಿಸಿ ನ್ಯೂಜಿಲ್ಯಾಂಡ್ ತಂಡ ಕೇವಲ 28.1 ಓವರ್ಗಳಲ್ಲಿ 62 ರನ್ಗಳಿಗೆ ಸರ್ವಪತನಕಂಡಿತು. ಈ ಮೂಲಕ ಭಾರತದ ನೆಲದಲ್ಲಿ ಅತ್ಯಂತ ಕಡಿಮೆ ಮೊತ್ತ ದಾಖಲಿಸಿತು. ಕೈಲ್ ಜೇಮಿಸನ್(17) ಮತ್ತು ಟಾಮ್ ಲೇಥಮ್(10) ಮಾತ್ರ ಎರಡಂಕಿ ಮೊತ್ತ ದಾಖಲಿಸಿದರು.