ಕರ್ನಾಟಕ

karnataka

ETV Bharat / sports

ಧೋನಿ ಮಲಗಿದ್ದಾಗ ವಿಡಿಯೋ ರೆಕಾರ್ಡ್ ಮಾಡಿದ ಗಗನಸಖಿ.. ಖಾಸಗಿತನಕ್ಕೆ ಅವಕಾಶ ಕೊಡಿ ಎಂದು ನೆಟ್ಟಿಗರಿಂದ ಆಕ್ರೋಶ

ಕ್ರಿಕೆಟ್​ ಮತ್ತು ಕ್ರಿಕೆಟ್​ ಹೊರತಾಗಿಯೂ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಭಾರತ ತಂಡ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಂದಿದ್ದಾರೆ. ವಿಮಾನದಲ್ಲಿ ಧೋನಿ ಮಲಗಿರುವಾಗ ಗಗನಸಖಿ ಒಬ್ಬರು ಗೊತ್ತಾಗದಂತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಈಗ ವೈರಲ್​ ಆಗುತ್ತಿದೆ.

Airhostess shoots video while Dhoni fast asleep,  fans vent ire
ಧೋನಿ ಮಲಗಿದ್ದಾಗ ವಿಡಿಯೋ ರೆಕಾರ್ಡ್ ಮಾಡಿದ ಗಗನಸಖಿ

By

Published : Jul 30, 2023, 7:38 PM IST

ಹೈದರಾಬಾದ್: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಅಪಾರ ಅಭಿಮಾನಿಗಳಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಪ್ರಪಂಚದಾದ್ಯಂತದ ಕ್ರೀಡಾಭಿಮಾನಿಗಳಲ್ಲದೆ.. ಇತರರೂ ಅವರನ್ನು ಆರಾಧಿಸುತ್ತಾರೆ. ಇವರನ್ನು ಕಂಡರೆ ಫೋಟೋ ಕ್ಲಿಕ್ಕಿಸಲು, ವಿಡಿಯೋ ಶೂಟ್ ಮಾಡಲು ಉತ್ಸಾಹ ತೋರುತ್ತಾರೆ. ಆದ್ದರಿಂದ, ಕೆಲವೊಮ್ಮೆ ಅವರು ತಮ್ಮ ಮಿತಿಗಳನ್ನು ದಾಟುತ್ತಾರೆ. ಈ ಹಿನ್ನೆಲೆಯಲ್ಲಿ ಧೋನಿಗೆ ಸಂಬಂಧಿಸಿದ ವಿಡಿಯೋವೊಂದು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಆ ವಿಡಿಯೋ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ಇತ್ತೀಚೆಗಷ್ಟೇ ಧೋನಿ ಪತ್ನಿ ಸಾಕ್ಷಿ ಜೊತೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಆದರೆ, ಅವರು ಮಲಗಿದ್ದಾಗ ಗಗನಸಖಿಯೊಬ್ಬರು ಧೋನಿಗೆ ತಿಳಿಯದಂತೆ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಧೋನಿ ಮಲಗಿರುವಾಗ ಅವರ ಪಕ್ಕದಲ್ಲಿ ಪತ್ನಿ ಸಾಕ್ಷಿ ಕಾಣಿಸಿಕೊಂಡಿದ್ದಾರೆ. "ಧೋನಿ ಬಂದಿದ್ದಾರೆ.. ನೋಡುತ್ತಿದ್ದಾರೆ" ಎಂದು ವಿಡಿಯೋವನ್ನು ಚಿತ್ರೀಕರಿಸಿದ ಗಗನಸಖಿ ಹೇಳುತ್ತಾರೆ. ಆದರೆ, ಇದು ಯಾವಾಗ ಮತ್ತು ಎಲ್ಲಿ ಸಂಭವಿಸಿದ್ದು ಎಂಬುದು ತಿಳಿದಿಲ್ಲ.

ತಮ್ಮ ನೆಚ್ಚಿನ ಆಟಗಾರ ಶಾಂತವಾಗಿ ಮಲಗಿರುವ ವಿಡಿಯೋ ನೋಡಿ ಹಲವರು ಸಂತಸ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ವಿಮಾನ ಸಿಬ್ಬಂದಿಯ ವರ್ತನೆಯನ್ನು ಟೀಕಿಸುತ್ತಿದ್ದಾರೆ. "ಧೋನಿಯ ಖಾಸಗಿತನವನ್ನು ಗೌರವಿಸಬೇಕು ಎಂದು ನೆಟಿಜನ್ ಹೇಳಿದ್ದಾರೆ. ಇದು ಧೋನಿ ಮತ್ತು ಸಾಕ್ಷಿ ಅವರ ಖಾಸಗಿತನದ ಮೇಲಿನ ದಾಳಿಯಂತಿದೆ. ಇದು ಸಂಪೂರ್ಣವಾಗಿ ತಪ್ಪು." ಎಂದು ಕೆಲವರು ವಿಮರ್ಶಿಸಿದ್ದಾರೆ.

ಇದನ್ನೂ ಓದಿ:MS Dhoni: ಧೋನಿಗೆ ಚಾಕಲೇಟ್ ನೀಡಿ ಸರ್ಪ್ರೈಸ್ ಕೊಟ್ಟ ಗಗನಸಖಿ.. ನಿಜಕ್ಕೂ ಸರ್ಪ್ರೈಸ್ ಆದದ್ದು ಮಾತ್ರ ಕ್ಯಾಂಡಿ ಕ್ರಶ್ ಗೇಮ್​​.. ​​

ಇತ್ತಿಚೆಗೆ ಧೋನಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಗಗನಸಖಿ ಒಬ್ಬರು ಹಿಂದಿ ಸಿನಿಮಾದ ಹಾಡಿಗೆ ರೀಲ್ಸ್​ ಮಾಡಿದ್ದರು. ಧೋನಿಗೆ ಟ್ರೇ ತುಂಬಾ ಚಾಕೋಲೇಟ್​ ನೀಡಿ ಬೇಕಾದನ್ನು ಆಯ್ಕೆ ಮಾಡಿಕೊಳ್ಳುವಂತೆ ಗಗನಸಖಿ ಹೇಳಿದ್ದರು. ಅದರಲ್ಲಿ ಒಂದನ್ನು ಕ್ಯಾಪ್ಟನ್​ ಕೂಲ್​ ತೆಗೆದುಕೊಂಡಿದ್ದರು. ಈ ವೇಳೆ ಧೋನಿ ವಿಮಾನದಲ್ಲಿ ಕ್ಯಾಂಡಿ ಕ್ರಶ್​ ಗೇಮ್​ ಆಡುತ್ತಿದ್ದುದು ಕಂಡು ಬಂದಿತ್ತು. ಇದರಿಂದ ಗೇಮ್​ ಕೆಲ ಗಂಟೆಯಲ್ಲಿ ಮಿಲಿಯನ್​ ಗಟ್ಟಲೆ ಡೌನ್​ಲೋಡ್​ ಆಗಿತ್ತು.

ಸಾಮಾಜಿಕ ಮಾಧ್ಯಮ ಬಳಕೆದಾರರು ಜವಾಬ್ದಾರಿಯುತವಾಗಿ ವರ್ತಿಸುವಂತೆ ಗಗನಸಖಿಗಳಿಗೆ ಸಲಹೆ ನೀಡಿದ್ದಾರೆ. ಇತರರ ಖಾಸಗಿತನಕ್ಕೆ ಧಕ್ಕೆಯಾಗದಂತೆ ಜಾಗೃತಿ ಮೂಡಿಸಿ ಎಂದು ಕಮೆಂಟ್ ಮಾಡಿದ್ದಾರೆ.

16ನೇ ಆವೃತ್ತಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್​ ಧೋನಿ ನಾಯಕತ್ವದಲ್ಲಿ 5ನೇ ಬಾರಿಗೆ ಐಪಿಎಲ್​ ಕಪ್​ನ್ನು ಮುಡಿಗೇರಿಸಿಕೊಂಡಿತು. ಮೊಣಕಾಲಿನ ನೋವಿನ ನಡುವೆಯೂ ಧೋನಿ ಐಪಿಎಲ್​ನಲ್ಲಿ ಆಡಿದ್ದರು. ಫೈನಲ್​ನಲ್ಲಿ ಗುಜರಾತ್​ ಜೈಂಟ್ಸ್​ ವಿರುದ್ಧ ಪಂದ್ಯ ಗೆದ್ದ ನಂತರ ಧೋನಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದರು. ಸದ್ಯ ಧೋನಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪತ್ನಿ ಸಾಕ್ಷಿ ಅವರು ಇತ್ತೀಚೆಗೆ ಹೇಳಿದ್ದರು.

ಇದನ್ನೂ ಓದಿ:Ashes 5th Test: ಬೇಸ್​ ಬಾಲ್​ ನೀತಿಯಂತೆ ಅಬ್ಬರದ ಆಟ ಆಡಿದ ಆಂಗ್ಲರು.. ಆಸ್ಟ್ರೇಲಿಯಾಕ್ಕೆ 396 ರನ್​ನ ಗುರಿ.. ಉತ್ತಮ ಆರಂಭ ಕಂಡ ಆಸಿಸ್​​

ABOUT THE AUTHOR

...view details