ದುಬೈ:ಅಬುಧಾಬಿ ಟಿ-10 ಲೀಗ್ನ ಪಂದ್ಯವೊಂದರಲ್ಲಿ ಇಂಗ್ಲೆಂಡ್ ತಂಡದ ಆಲ್ರೌಂಡರ್ ಮೊಯಿನ್ ಅಲಿ ಅರ್ಭಟಿಸಿದ್ದಾರೆ. ಕೇವಲ 23 ಎಸೆತಗಳಲ್ಲಿ ಅಜೇಯ 77ರನ್ಗಳಿಕೆ ಮಾಡಿದ್ದು, ಇದರಲ್ಲಿ ದಾಖಲೆಯ 9 ಸಿಕ್ಸರ್ ಹಾಗೂ 3 ಬೌಂಡರಿ ಸೇರಿಕೊಂಡಿವೆ.
ನಾರ್ಥರ್ನ್ ವಾರಿಯರ್ಸ್ ಹಾಗೂ ಟೀಂ ಅಬುಧಾಬಿ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಬುಧಾಬಿ ತಂಡ ನಿಗದಿತ 10 ಓವರ್ಗಳಲ್ಲಿ 6 ವಿಕೆಟ್ನಷ್ಟಕ್ಕೆ 154ರನ್ಗಳಿಕೆ ಮಾಡಿತು. ಈ ತಂಡದ ಪರ ಕಾಲಿನ್ ಇನ್ಗ್ರಾಮ್ 25 ಎಸೆತಗಳಲ್ಲಿ 61ರನ್ಗಳಿಕೆ ಮಾಡಿದರು.
ಸ್ಪರ್ಧಾತ್ಮಕ 146ರನ್ಗಳ ಗುರಿ ಬೆನ್ನತ್ತಿದ್ದ ನಾರ್ಥರ್ನ್ ವಾರಿಯರ್ಸ್ ಆರಂಭದಿಂದಲೂ ಅಬ್ಬರಿಸಿತು. ಆರಂಭಿಕರಾಗಿ ಕಣಕ್ಕಿಳಿದ ಲಿವಿಸ್ ಹಾಗೂ ಮೊಯಿನ್ ಅಲಿ ಎದುರಾಳಿ ಪ್ಲೇಯರ್ಸ್ಗಳನ್ನ ಬೆಂಡತ್ತಿದ್ದರು. ಪರಿಣಾಮ ತಂಡ ಯಾವುದೇ ವಿಕೆಟ್ನಷ್ಟವಿಲ್ಲದೇ 9.1 ಓವರ್ಗಳಲ್ಲಿ 146ರನ್ಗಳಿಕೆ ಮಾಡಿ,ಗೆಲುವಿನ ನಗೆ ಬೀರಿತು. ತಂಡದ ಪರ ಮೊಯಿನ್ ಅಲಿ 23 ಎಸೆತಗಳಲ್ಲಿ 9 ಸಿಕ್ಸರ್, 3 ಬೌಂಡರಿ ಸೇರಿ 77ರನ್ಗಳಿಕೆ ಮಾಡಿದ್ರೆ, ಲಿವಿಸ್ 32 ಎಸೆತಗಳಲ್ಲಿ 6 ಸಿಕ್ಸರ್, 4 ಬೌಂಡರಿ ಸೇರಿ 65ರನ್ಗಳಿಸಿದರು.
ಟಿ-10 ಲೀಗ್ನಲ್ಲೇ ಮೊಯಿನ್ ಅಲಿ ವೇಗವಾಗಿ 50ರನ್, ವೈಯಕ್ತಿಕ ಗರಿಷ್ಠ ರನ್, ಅತಿದೊಡ್ಡ ಜೊತೆಯಾಟ ಹಾಗೂ ಅತಿ ಹೆಚ್ಚು ಸಿಕ್ಸರ್ ಸಿಡಿಸಿರುವ ದಾಖಲೆ ನಿರ್ಮಾಣ ಮಾಡಿದ್ದಾರೆ.