ಕರ್ನಾಟಕ

karnataka

ETV Bharat / sports

ಎಬಿಡಿ ಹೊಡಿ ಬಡಿ ಆಟದ ಅದ್ಭುತ ವಿಡಿಯೋ.. ಅಭಿಮಾನಿ ಕೆಲಸಕ್ಕೆ ಸೆಲ್ಯೂಟ್​ ಹೊಡೆದ ಮಿ. 360! - ಎಬಿಡಿ ಹೊಡಿಬಡಿ ಆಟದ ವಿಡಿಯೋ

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಎಬಿಡಿ ಹೊಡಿಬಡಿ ಆಟದ ವಿಡಿಯೋ ತುಣುಕೊಂದನ್ನು ಅವರ ಅಭಿಮಾನಿ ಟ್ವೀಟ್ ಮಾಡಿದ್ದು, ಇದಕ್ಕೆ ಡಿವಿಲಿಯರ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

AB de Villiers
AB de Villiers

By

Published : Jul 23, 2022, 9:46 PM IST

ದಕ್ಷಿಣ ಆಫ್ರಿಕಾದ ಮಾಜಿ ಸ್ಟಾರ್​​ ಆಟಗಾರ ಎಬಿ ಡಿವಿಲಿಯರ್ಸ್​ ಆಧುನಿಕ ಕ್ರಿಕೆಟ್​ನ ಶ್ರೇಷ್ಠ ಬ್ಯಾಟರ್​​​ಗಳಲ್ಲಿ ಒಬ್ಬರು. ಮೂರು ಮಾದರಿ ಕ್ರಿಕೆಟ್​​​ನಲ್ಲಿ ಸರಾಗವಾಗಿ ಹೊಂದಿಕೊಂಡು ಬ್ಯಾಟಿಂಗ್ ಮಾಡ್ತಿದ್ದ ಈ ಪ್ಲೇಯರ್​​ ಟೆಸ್ಟ್, ಏಕದಿನ ಕ್ರಿಕೆಟ್​​ನಲ್ಲಿ 50+ ಹಾಗೂ ಟಿ-20ಯಲ್ಲಿ 135ರ ಸ್ಟ್ರೇಕ್​ ರೇಟ್​​ನೊಂದಿಗೆ ಬ್ಯಾಟ್​ ಬೀಸುತ್ತಿದ್ದರು.

ಈ ಪ್ಲೇಯರ್​​ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಕಳೆದ ವರ್ಷದಿಂದ ಐಪಿಎಲ್​​ನಿಂದಲೂ ದೂರ ಸರಿದಿದ್ದಾರೆ. ಆದರೂ, ಈ ಪ್ಲೇಯರ್​ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೇ ಉಳಿದುಕೊಂಡಿದ್ದಾರೆ. ಸದ್ಯ ಅಭಿಮಾನಿಯೊಬ್ಬ ಅವರಿಗೋಸ್ಕರ ವಿಶೇಷ ವಿಡಿಯೋ ತಯಾರಿಸಿದ್ದಾರೆ.

ಮೈದಾನದಲ್ಲಿ ವಿವಿಧ ಭಂಗಿಗಳಲ್ಲಿ ಸರಾಗವಾಗಿ ಬ್ಯಾಟ್​ ಬೀಸುತ್ತಿದ್ದ ಎಬಿಡಿ, ಐಪಿಎಲ್​​ನಲ್ಲೂ ಮಿಂಚು ಹರಿಸಿದ್ದಾರೆ. ಆರ್​ಸಿಬಿ ಪರ ಕಣಕ್ಕಿಳಿಯುತ್ತಿದ್ದ ಈ ಪ್ಲೇಯರ್​ ಎಲ್ಲ ಕೋನಗಳಿಂದಲೂ ಬ್ಯಾಟಿಂಗ್ ಮಾಡ್ತಿದ್ದರು. ಹೀಗಾಗಿ, ಮಿ. 360 ಎಂಬ ಹೆಸರು ಸಹ ಗಳಿಸಿದ್ದಾರೆ.

ಇದನ್ನೂ ಓದಿರಿ:ಮುಂದಿನ ವರ್ಷದ ಐಪಿಎಲ್​​ನಲ್ಲಿ ಆರ್​ಸಿಬಿ ತಂಡಕ್ಕೆ ಮರಳಲಿದ್ದೇನೆ.. ಖಚಿತ ಪಡಿಸಿದ ಎಬಿ ಡಿವಿಲಿಯರ್ಸ್​

ಐಪಿಎಲ್​​ನಲ್ಲಿ ವಿವಿಧ ಭಂಗಿಗಳಲ್ಲಿ ಇವರು ಬ್ಯಾಟ್​ ಬೀಸಿರುವ ಅನೇಕ ತುಣುಕು ಒಟ್ಟಿಗೆ ಸೇರಿಸಿ, ಅಭಿಮಾನಿಯೊಬ್ಬ ವಿಡಿಯೋ ಮಾಡಿದ್ದಾರೆ. ಸದ್ಯ ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ಇದಕ್ಕೆ ಖುದ್ದಾಗಿ ಎಬಿಡಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ತುಂಬಾ ಚೆನ್ನಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಎಬಿಡಿ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಿದ್ದು, ಕಳೆದ ವರ್ಷ ಐಪಿಎಲ್​​ನಿಂದಲೂ ದೂರ ಉಳಿದಿದ್ದಾರೆ. ಇದೀಗ ಮುಂದಿನ ವರ್ಷದ ಐಪಿಎಲ್​​ನಲ್ಲಿ ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ABOUT THE AUTHOR

...view details