ಕರ್ನಾಟಕ

karnataka

ETV Bharat / sports

ಶೀಘ್ರದಲ್ಲಿ ಕೊಹ್ಲಿಯಿಂದ ಒಂದು ದೊಡ್ಡ ಶತಕ ಹೊರ ಬರಲಿದೆ : ಬಾಲ್ಯದ ಕೋಚ್ ರಾಜ್​ಕುಮಾರ್ ಶರ್ಮಾ - ವಿರಾಟ್ ಕೊಹ್ಲಿ ಕೋಚ್​

ನನಗೆ ಸಂಪೂರ್ಣ ನಂಬಿಕೆಯಿದೆ. ಯಾಕೆಂದರೆ, ನಾನು ಕೊಹ್ಲಿಯನ್ನು ಚಿಕ್ಕಂದಿನಿಂದಲೂ ನೋಡುತ್ತಿದ್ದೇನೆ. ಆತ ಸವಾಲುಗಳನ್ನು ಪ್ರೀತಿಸುತ್ತಾನೆ. ಆದ್ದರಿಂದ ಅವರಿಗೆ ಇದೊಂದು ಒಳ್ಳೆಯ ಚಾಲೆಂಜ್​. ಮುಂದಿನ ಪಂದ್ಯಗಳಲ್ಲಿ ನಾವು ಅತ್ಯುತ್ತಮ ಸ್ಪರ್ಧೆಯನ್ನು ನೋಡಲಿದ್ದೇವೆ..

Rajkumar Sharma on Virat Kohli
ಕೊಹ್ಲಿ ಬಾಲ್ಯದ ಕೋಚ್ ರಾಜ್​ಕುಮಾರ್ ಶರ್ಮಾ

By

Published : Aug 23, 2021, 5:13 PM IST

ನವದೆಹಲಿ :ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಸರಣಿಯಲ್ಲಿ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿಯಿಂದ ಆದಷ್ಟು ಬೇಗ ಒಂದು ದೊಡ್ಡ ಶತಕ ಬರಲಿದೆ ಎಂದು ಅವರ ಬಾಲ್ಯದ ಕೋಚ್​ ರಾಜ್​ಕುಮಾರ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2019ರ ನವೆಂಬರ್​ನಿಂದ ಕೊಹ್ಲಿ ಈವರೆಗೂ ಯಾವುದೇ ಮಾದರಿಯಲ್ಲೂ ಶತಕ ಬಾರಿಸಿಲ್ಲ. ಅಲ್ಲದೆ ಕಳೆದ 2 ಟೆಸ್ಟ್​ನಲ್ಲಿ ಮೂರು ಇನ್ನಿಂಗ್ಸ್​ಗಳಿಂದ ಅವರು ಕೇವಲ 62 ರನ್​ಗಳಿಸಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿರುವ ಜೋ ರೂಟ್​ 2 ಟೆಸ್ಟ್​ ಪಂದ್ಯಗಳಿಂದ 386 ರನ್​ ಗಳಿಸಿದ್ದಾರೆ.

ದೆಹಲಿ ಪುರುಷರ ತಂಡದ ಮುಖ್ಯ ಕೋಚ್ ಆಗಿರುವ ಶರ್ಮಾ, ತಾವೂ ಇತ್ತೀಚೆಗೆ ಕೊಹ್ಲಿ ಜೊತೆ ಮಾತನಾಡಿದ್ದು, ಭಾರತೀಯ ಕಪ್ತಾನನಿಂದ ಆದಷ್ಟು ಬೇಗ ಒಂದು ದೊಡ್ಡ ಶತಕ ಬರಲಿದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.

ಆತನನ್ನು ಪ್ರೇರೇಪಿಸುವ ಅವಶ್ಯಕತೆಯಿದೆ ಎಂದು ನನಗೆ ಅನಿಸುವುದಿಲ್ಲ. ಯಾಕೆಂದರೆ, ಆತ ಈಗಾಗಲೇ ಹೆಚ್ಚು ಪ್ರೇರಣೆ ಹೊಂದಿದ್ದಾರೆ. ಕಳೆದ ಪಂದ್ಯದ ನಂತರವೂ ನಾನು ಅವರೊಂದಿಗೆ ಮಾತನಾಡಿದಾಗ, ಅವರು ತುಂಬಾ ಉತ್ಸುಕರಾಗಿದ್ದರು ಮತ್ತು ಪಂದ್ಯ ಗೆದ್ದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದರು.

ಆದರೆ, ಅವರು ತಮ್ಮ ರನ್ ಗಳಿಕೆ ಬಗ್ಗೆ ಹೆಚ್ಚು ಚಿಂತಿಸುತ್ತಿಲ್ಲ. ಶೀಘ್ರದಲ್ಲೇ ಅವರಿಂದ ಒಂದು ದೊಡ್ಡ ಶತಕ ಬರಲಿದೆ" ಎಂಬ ವಿಶ್ವಾಸ ನನಗಿದೆ ಎಂದು ಶರ್ಮಾ ಇಂಡಿಯಾ ನ್ಯೂಸ್‌ಗೆ ಹೇಳಿದ್ದಾರೆ. ಜೋ ರೂಟ್​ ರನ್​ಗಳಿಸುವುದರಲ್ಲಿ ವಿರಾಟ್​ ಕೊಹ್ಲಿಗೆ ಸವಾಲೆಸೆಯುತ್ತಿದ್ದಾರಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ಶರ್ಮಾ, ಜೋ ರೂಟ್​ ಅವರನ್ನು ಚೇಸ್​ ಮಾಡುವುದು ವಿರಾಟ್​ ಕೊಹ್ಲಿಗೆ ಚಾಲೆಂಜ್ ಎಂದು ಹೇಳುತ್ತೇನೆ​.

ನನಗೆ ಸಂಪೂರ್ಣ ನಂಬಿಕೆಯಿದೆ. ಯಾಕೆಂದರೆ, ನಾನು ಕೊಹ್ಲಿಯನ್ನು ಚಿಕ್ಕಂದಿನಿಂದಲೂ ನೋಡುತ್ತಿದ್ದೇನೆ. ಆತ ಸವಾಲುಗಳನ್ನು ಪ್ರೀತಿಸುತ್ತಾನೆ. ಆದ್ದರಿಂದ ಅವರಿಗೆ ಇದೊಂದು ಒಳ್ಳೆಯ ಚಾಲೆಂಜ್​.

ಮುಂದಿನ ಪಂದ್ಯಗಳಲ್ಲಿ ನಾವು ಅತ್ಯುತ್ತಮ ಸ್ಪರ್ಧೆಯನ್ನು ನೋಡಲಿದ್ದೇವೆ ಎಂದು ತಿಳಿಸಿದ್ದಾರೆ. ಇಂಗ್ಲೆಂಡ್ ಮತ್ತು ಭಾರತದ ನಡುವೆ ಹೆಡಿಂಗ್ಲೆಯ ಲೀಡ್ಸ್ ಮೈದಾನದಲ್ಲಿ 3ನೇ ಟೆಸ್ಟ್​ ಪಂದ್ಯ ಬುಧವಾರದಿಂದ ಆರಂಭವಾಗಲಿದೆ.

ಇದನ್ನು ಓದಿ : 'ಕೊಹ್ಲಿಯನ್ನು ಮೆಚ್ಚುತ್ತೇನೆ.. ಆದ್ರೆ, ಅವರ ಆಕ್ರಮಣಕಾರಿ ಮನೋಭಾವ ಇತಿಮಿತಿಯಲ್ಲಿರಬೇಕು..'

ABOUT THE AUTHOR

...view details