ಕರ್ನಾಟಕ

karnataka

ETV Bharat / sports

ಕೇವಲ ಒಂದು ಗಂಟೆ ಮಾತ್ರ ಅಭ್ಯಾಸ, ಕೋಚ್​ ಭೇಟಿಗೆ ಅವಕಾಶವಿಲ್ಲ: BWF ವಿರುದ್ಧ ಸೈನಾ ಆಕ್ರೋಶ

ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಮಾರ್ಚ್​ ತಿಂಗಳು ಅಂತಿಮವಾಗಿದೆ. ಇಷ್ಟರಲ್ಲಿ ತಾವು ಸರಿಯಾದ ಮಾರ್ಗದರ್ಶನ ಹಾಗೂ ತರಬೇತಿ ಪಡೆಯಲಾಗದಿದ್ದರೆ ಅದು ಪ್ರದರ್ಶನದ ಮೇಲೆ ಪರಿಣಾಮ ಬೀರಲಿದೆ ಎಂಬುದು ಸೈನಾ ಅಸಮಾಧಾನಕ್ಕೆ ಕಾರಣವಾಗಿದೆ.

ಸೈನಾ ನೆಹ್ವಾಲ್​
ಸೈನಾ ನೆಹ್ವಾಲ್​

By

Published : Jan 5, 2021, 9:37 PM IST

ಬ್ಯಾಂಕಾಕ್​:ಬಯೋ ಬಬಲ್​ನ ಕೋವಿಡ್-19 ಪ್ರೋಟೋಕಾಲ್​ಗಳ ಭಾಗವಾಗಿ BWF ವಿಧಿಸಿರುವ ನಿರ್ಬಂಧಗಳ ಬಗ್ಗೆ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್​ ಅಸಮಾಧಾನ ಹೊರಹಾಕಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಮಾರ್ಚ್​ ತಿಂಗಳು ಅಂತಿಮವಾಗಿದೆ. ಇಷ್ಟರಲ್ಲಿ ಸರಿಯಾದ ಮಾರ್ಗದರ್ಶನ ಹಾಗೂ ತರಬೇತಿ ಪಡೆಯಲಾಗದಿದ್ದರೆ ಅದು ಪ್ರದರ್ಶನದ ಮೇಲೆ ಪರಿಣಾಮ ಬೀರಲಿದೆ ಎಂಬುದು ಸೈನಾ ಅಸಮಾಧಾನಕ್ಕೆ ಕಾರಣವಾಗಿದೆ.

"ಕೋವಿಡ್​ ಟೆಸ್ಟ್​ನಲ್ಲಿ ನೆಗೆಟಿವ್​ ಪಡೆದಿದ್ದರೂ ಇಡೀ ಪ್ರವಾಸದಲ್ಲಿ ಫಿಸಿಯೋ ಮತ್ತು ಕೋಚ್​ಗಳನ್ನು ಭೇಟಿ ಮಾಡಲು ಅವಕಾಶವಿಲ್ಲವೇ? ಅವರಿಲ್ಲದೆ ನಾವು 3ರಿಂದ 4 ವಾರ ಹೇಗೆ ನಿರ್ವಹಣೆ ಮಾಡಬೇಕು?" ಎಂದು ಥಾಯ್ಲೆಂಡ್​ ಓಪನ್ ಟೂರ್ನಿಗೂ ಮುನ್ನ ತಾವೆದುರಿಸುತ್ತಿರುವ ಸಮಸ್ಯೆಗಳನ್ನು ಟ್ವೀಟ್​​ ಮೂಲಕ ಹೊರಹಾಕಿದ್ದಾರೆ.

ಮಾಜಿ ನಂಬರ್​ ಒನ್​ ಆಟಗಾರರಾಗಿರುವ ಸೈನಾ ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಬಿಡಬ್ಲ್ಯೂಎಫ್​ ಸಂಪರ್ಕಿಸಲು ಪ್ರಯತ್ನಿಸಿದರಾದರೂ, ಯಾರು ಸಿಗಲಿಲ್ಲವೆಂದು ಅವರು ಹೇಳಿದ್ದಾರೆ.

"ಇಡೀ ತಂಡ ಕೇವಲ ಒಂದು ಗಂಟೆ ಅಭ್ಯಾಸ ಮಾಡುವುದು ಹೇಗೆ? ಜೊತೆಗೆ ಜಿಮ್​ ಸಮಯ ಕೂಡ ಅದೇ ವೇಳೆಯಲ್ಲಿ ನಿಗದಿ ಮಾಡಲಾಗಿದೆ. ಮಾರ್ಚ್​ ತಿಂಗಳು ಒಲಿಂಪಿಕ್​ ಅರ್ಹತಾ ಅವಧಿ ಎಂದು ಪರಿಗಣಿಸಿ ನೋಡಿದರೆ ಇಲ್ಲಿನ ಪರಿಸ್ಥಿತಿ ಸಾಕಷ್ಟು ಉತ್ತಮವಾಗಿಲ್ಲ" ಎಂದು ಮತ್ತೊಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಅಲ್ಲದೆ ನಾವು ಫಿಸಿಯೋ ಮತ್ತು ತರಬೇತುದಾರರಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇವೆ. ಅವರು ನಮಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದಾದರೆ ಈ ವಿಚಾರವನ್ನು ನೀವು ನಮಗೆ ಮೊದಲೇ ಏಕೆ ಹೇಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ABOUT THE AUTHOR

...view details