ಕರ್ನಾಟಕ

karnataka

ETV Bharat / sports

ವಿಂಡೀಸ್​ ವಿರುದ್ಧ ಗೆಲುವಿನ ಸಂಭ್ರಮ.. ಕ್ರಿಕೆಟಿಗರ ಜತೆ ಮೋಜು,ಮಸ್ತಿಯಲ್ಲಿ ಕೊಹ್ಲಿ ದಂಪತಿ! - ಭಾರತ-ವೆಸ್ಟ್ ಇಂಡೀಸ್​

ಆತಿಥೇಯ ವೆಸ್ಟ್​ ಇಂಡೀಸ್​ ವಿರುದ್ಧ ಮೊದಲ ಟೆಸ್ಟ್​ನಲ್ಲಿ ಬ್ಯಾಟಿಂಗ್-ಬೌಲಿಂಗ್​ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿದ ಭಾರತ ತಂಡ 318 ರನ್​ಗಳ ದಾಖಲೆಯ ಜಯ ಸಾಧಿಸಿತ್ತು.

Kohli and company

By

Published : Aug 27, 2019, 1:21 PM IST

ಆ್ಯಂಟಿಗುವಾ: ವೆಸ್ಟ್​ ಇಂಡೀಸ್​ ವಿರುದ್ಧ ಮೊದಲ ಟೆಸ್ಟ್​ ಗೆದ್ದ ಖುಷಿಯಲ್ಲಿರುವ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಸಹ ಆಟಗಾರರು ಹಾಗೂ ಪತ್ನಿ ಜೊತೆ ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ.

ಆತಿಥೇಯ ವೆಸ್ಟ್​ ಇಂಡೀಸ್​ ವಿರುದ್ಧ ಮೊದಲ ಟೆಸ್ಟ್​ನಲ್ಲಿ ಬ್ಯಾಟಿಂಗ್-ಬೌಲಿಂಗ್​ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿದ ಭಾರತ ತಂಡ 318 ರನ್​ಗಳ ದಾಖಲೆಯ ಜಯ ಸಾಧಿಸಿತ್ತು.

ಇದೇ ಖುಷಿಯಲ್ಲಿ ನಾಯಕ ವಿರಾಟ್‌ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ, ಕರ್ನಾಟಕ ಆಟಗಾರರಾದ ಮಯಾಂಕ್​ ಅಗರ್​ವಾಲ್​, ಕೆ ಎಲ್​ ರಾಹುಲ್​, ಆರ್.ಅಶ್ವಿನ್​ ಅವರೊಂದಿಗೆ ಬೋಟಿಂಗ್, ಸ್ವಿಮ್ಮಿಂಗ್​ ನಡೆಸುತ್ತಾ ಗೆಲುವಿನ ಸಂಭ್ರಮ ಆಚರಿಸುತ್ತಿದ್ದಾರೆ. ಈ ಫೋಟೋಗಳನ್ನು ಕನ್ನಡಿಗ ಕೆ ಎಲ್​ ರಾಹುಲ್​ ತಮ್ಮ ಟ್ವಿಟರ್​, ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಟಿ20 ಸರಣಿಯ ವೇಳೆ ರೋಹಿತ್​ ಶರ್ಮಾ, ಶ್ರೇಯಸ್​ ಅಯ್ಯರ್​, ರಿಷಭ್​ ಪಂತ್​, ಖಲೀಲ್​ ಅಹ್ಮದ್​, ಕುಲ್ದೀಪ್​ ಯಾದವ್​ ಇದೇ ರೀತಿ ಬೀಚ್​ನಲ್ಲಿ ಸೇರಿ ಎಂಜಾಯ್ ಮಾಡಿದ್ದರು. ಇದೀಗ ಈ ಐದು ಜನ ಇಂದು ವಿಂಡೀಸ್​ ಪ್ರವಾಸವನ್ನು ಸಖತ್​​ ಮೋಜು-ಮಸ್ತಿಯಲ್ಲಿ ಕಳೆಯುತ್ತಿದ್ದಾರೆ. ಮೊದಲ ಟೆಸ್ಟ್​ಗೂ ಮುನ್ನ ಕೊಹ್ಲಿ ಎಲ್ಲಾ ಆಟಗಾರರೊಂದಿಗೆ ಬೀಚ್​ನಲ್ಲಿ ತೆಗೆದ ಫೋಟೋವೊಂದನ್ನು ಶೇರ್​ ಮಾಡಿದ್ದರು.

ABOUT THE AUTHOR

...view details