ಹೈದರಾಬಾದ್ :ಗೋಪಿಚಂದ್ ಅಕಾಡೆಮಿಯಿಂದ ಡಬಲ್ಸ್ ಕ್ಯಾಂಪ್ನ ತೆಗೆಯಬೇಕು ಎಂಬ ಮಾಜಿ ಡಬಲ್ಸ್ ಆಟಗಾರ್ತಿ ಜ್ವಾಲಾ ಗುಟ್ಟ ಅವರ ಸಲಹೆಗೆ ತಿರುಗೇಟು ನೀಡಿರುವ ಭಾರತದ ಮುಖ್ಯ ಕೋಚ್ ಪುಲ್ಲೇಲ ಗೋಪಿ ಚಂದ್, ಕಳೆದ 10 ವರ್ಷಗಳ ಅಂಕಿ-ಅಂಶಗಳನ್ನು ಪರೀಕ್ಷಿಸಿ ಎಂದು ಹೇಳಿದ್ದಾರೆ.
ಶುಕ್ರವಾರ ತಮಿಳುನಾಡು ಬ್ಯಾಡ್ಮಿಂಟನ್ ಸೂಪರ್ ಲೀಗ್ಗೆ ಚಾಲನೆ ನೀಡಿದ್ದ ಗುಟ್ಟಾ ಈ ಹೇಳಿಕೆ ನೀಡಿದ್ದರು. ಆದರೆ, ಇದಕ್ಕೆ ಈಟಿವಿ ಭಾರತದ ಜೊತೆ ಮಾತನಾಡಿರುವ ಗೋಪಿಚಂದ್, "ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಏನೂ ಇಲ್ಲ. ಕಳೆದ 10 ವರ್ಷಗಳ ರಾಷ್ಟ್ರೀಯ ಆಟಗಾರರ ಫಲಿತಾಂಶಗಳನ್ನ ದಯವಿಟ್ಟು ಪರಿಶೀಲಿಸಿ" ಎಂದು ತಿರುಗೇಟು ನೀಡಿದ್ದಾರೆ.
ಡಬಲ್ಸ್ ವಿಭಾಗದಲ್ಲಿ ಚೀನಾದಲ್ಲಿ 4 ರಿಂದ 5 ಜೋಡಿ ಇರುತ್ತವೆ, ನಮ್ಮ ಬಳಿ ಕೇವಲ ಒಂದೇ ಜೋಡಿ, ನಮ್ಮಲ್ಲಿ ಹೆಚ್ಚು ಜೋಡಿಗಳನ್ನು ತಯಾರು ಮಾಡಲು ಏಕೆ ಸಾಧ್ಯವಾಗುತ್ತಿಲ್ಲ? ಈ ಬಗ್ಗೆ ನಾನು ಸಾಕಷ್ಟು ವರ್ಷಗಳಿಂದ ಹೇಳುತ್ತಾ ಬರುತ್ತಿದ್ದೇನೆ. ಇದರ ಬಗ್ಗೆ ನಾವು ರಾಷ್ಟ್ರೀಯ ಕೋಚ್ಗೆ ಪ್ರಶ್ನೆ ಮಾಡಬೇಕು ಎಂದು ಗುಟ್ಟಾ ಕಿಡಿಕಾರಿದ್ದರು.
ಆದರೆ, ಸಾಕಷ್ಟು ಸಿಂಗಲ್ಸ್ ಆಟಗಾರರನ್ನು ಗೋಪಿಚಂದ್ ತಯಾರು ಮಾಡಿದ್ದಾರೆ ಎಂದು ಜ್ವಾಲಾ ಒಪ್ಪಿಕೊಂಡಿದ್ದಲ್ಲದೆ, ಅದಕ್ಕೆ ಸಂಪೂರ್ಣ ಕ್ರೆಡಿಟ್ ನೀಡಿದ್ದರು. ಆದರೆ, ಡಬಲ್ಸ್ನಲ್ಲಿ ಅವರ ಸಾಧನೆ ಶೂನ್ಯ. ಹಾಗಾಗಿ, ಅವರ ಅಕಾಡೆಮಿಯಿಂದ ಡಬಲ್ಸ್ ಕ್ಯಾಂಪ್ ತೆಗೆದು ಹಾಕಬೇಕು ಎಂದು ಹೇಳಿದ್ದರು.
ಇದನ್ನು ಓದಿ:ಭಾರತದ ಸೋಲನ್ನು ಟ್ರೋಲ್ ಮಾಡಿದ ಮೈಜಲ್ ವಾನ್ಗೆ ತಿರುಗೇಟು ನೀಡಿದ ವಾಸೀಮ್ ಜಾಫರ್