ಕರ್ನಾಟಕ

karnataka

ETV Bharat / sitara

ಎಲಿಮಿನೇಶನ್ ಡೇ: ಬಿಗ್​​ ಮನೆಯಿಂದ ಈ ವಾರ ಇವರಿಬ್ಬರಲ್ಲಿ ಹೊರ ಬರೋದು ಯಾರು?

ಬಿಗ್​ಬಾಸ್​​ ಸೀಸನ್​-7ರ ಎರಡನೇ ವಾರದ ಬಳಿಕ ಯಾರು ದೊಡ್ಮನೆಯಿಂದ ಹೊರಬರಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿದೆ. ನಾಮಿನೇಟ್​ ಆದ 6 ಮಂದಿಯಲ್ಲಿ ನಾಲ್ವರು ಈಗಾಗಲೇ ಉಳಿದುಕೊಂಡಿದ್ದು, ಇನ್ನುಳಿದ ಇಬ್ಬರು ಸ್ಪರ್ಧಿಗಳಲ್ಲಿ ಯಾರು ಔಟ್​ ಆಗಲಿದ್ದಾರೆ ಎಂಬುದು ಇಂದು ತಿಳಿಯಲಿದೆ.

ಬಿಗ್​ಬಾಸ್​​ ಸೀಸನ್​-7

By

Published : Oct 27, 2019, 11:50 AM IST

Updated : Oct 27, 2019, 12:05 PM IST

ಬಿಗ್​ಬಾಸ್​​ ಸೀಸನ್​-7ನ ಮೊದಲ ವಾರ ಗುರುಲಿಂಗಸ್ವಾಮಿ ಔಟ್​ ಆಗಿದ್ದರು. ಎರಡನೇ ವಾರ 6 ಮಂದಿ ಸ್ಪರ್ಧಿಗಳು ನಾಮಿನೇಟ್​ ಆಗಿದ್ದು, ಯಾರು ಮನೆಯಿಂದ ಹೊರಬರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿ ಮೂಡಿತ್ತು.

ಪ್ರತಿ ಶನಿವಾರದಂತೆ ನಿನ್ನೆಯೂ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮವಿತ್ತು. ಈ ವೇಳೆ ಸೇಬು ಹಣ್ಣಿನ ವಿಚಾರವಾಗಿ ಜಗಳವಾಡಿದ್ದ ಮೂವರು ಕಿಚ್ಚ ಸುದೀಪ್ ಬಳಿ ಕ್ಷಮೆಯಾಚಿಸಿದರು. ಅಲ್ಲದೆ ಚಂದನ್ ಆಚಾರ್ ಅವರು ಚೈತ್ರಾ ಕೊಟ್ಟೂರು ಅವರ ಕೈ ಹಿಡಿದು ಎಳೆದಿದ್ದ ಬಗ್ಗೆ ಕಿಚ್ಚ ತರಾಟೆಗೆ ತೆಗೆದುಕೊಂಡರು. ಬಳಿಕ ಎಲಿಮಿನೇಷನ್​​ ಪ್ರಕ್ರಿಯೆ ಶುರುವಾಯಿತು. ನಾಮಿನೇಟ್​​ ಆದ ಆರು ಮಂದಿಯಲ್ಲಿ ಒಬ್ಬೊಬ್ಬರಾಗಿ ನಾಲ್ವರು ಸೇಫ್​ ಆಗಿದ್ದಾರೆ.

6 ಮಂದಿಯಲ್ಲಿ ಚೈತ್ರಾ ಕೋಟ್ಟೂರು, ದೀಪಿಕಾ ದಾಸ್, ಪ್ರಿಯಾಂಕ ಹಾಗೂ ಸುಜಾತ ಅಕ್ಷಯಾ ಸೇಫ್​ ಆಗಿದ್ದಾರೆ. ಇನ್ನು ಉಳಿದ ಇಬ್ಬರೆಂದರೆ ಚೈತ್ರ ವಾಸುದೇವನ್ ಹಾಗೂ ಚಂದನ್ ಆಚಾರ್. ಇವರಿಬ್ಬರಲ್ಲಿ ಯಾರು ಎಲಿಮಿನೇಟ್​ ಆಗಲಿದ್ದಾರೆ ಎಂಬ ಬಗ್ಗೆ ಕುತೂಹಲ ಎಲ್ಲರದ್ದಾಗಿದೆ.

Last Updated : Oct 27, 2019, 12:05 PM IST

ABOUT THE AUTHOR

...view details