ಕರ್ನಾಟಕ

karnataka

ETV Bharat / sitara

ಬಿಗ್​​ ಬಾಸ್​​ ಮನೆಯಲ್ಲಿ ಬಿಗ್​​ ಬದಲಾವಣೆ... ಹೀಗೂ ಆಗುತ್ತಾ? ಹೌದು ಸ್ವಾಮಿ!

ದಯವಿಟ್ಟು ಇದನ್ನು ದುರಹಂಕಾರ ಎಂದು ತಿಳಿಯಬೇಡಿ. ನನಗೆ ಇಲ್ಲಿರಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳು ಹೇಗೆ ಎಂಬುದು ಕೂಡ ಊಹಿಸಲು ಆಗುತ್ತಿಲ್ಲ. ಇದು ನನಗೆ ಸರಿಯಾದ ವೇದಿಕೆ ಅಲ್ಲ. ಮನೆಯವರನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾನು ಹೋಗುತ್ತೇನೆ. ಅನ್ಯಥಾ ಭಾವಿಸಬೇಡಿ ಎಂದು ವೈಜಯಂತಿ ಮನೆಯಿಂದ ಹೊರ ಬಂದರು.

vyjayanti-adiga-eliminate-from-big-boss-kannada
ಬಿಗ್​​ ಬಾಸ್​​

By

Published : Apr 11, 2021, 10:45 PM IST

ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವೈಲ್ಡ್ ಕಾರ್ಡ್ ಮೂಲಕ ಬಿಗ್​ ಹೌಸ್​​ಗೆ ಎಂಟ್ರಿ ಕೊಟ್ಟಿದ್ದ ಅತಿಥಿಯೊಬ್ಬರು ಕೇವಲ ಮೂರೇ ಮೂರು ದಿನಕ್ಕೆ ಮನೆಯಿಂದ ಹೊರ ಬಂದ ಸಂಗತಿ 'ಸಂಡೇ ವಿತ್ ಸುದೀಪ್' ಎಪಿಸೋಡ್​ನಲ್ಲಿ ನಡೆದಿದೆ.

ಮೊನ್ನೆಯಷ್ಟೇ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆ ಪ್ರವೇಶಿಸಿದ್ದ 'ಅಮ್ಮಚಿ ಎಂಬ ನೆನಪು' ಸಿನಿಮಾ ನಾಯಕಿ ವೈಜಯಂತಿ ಅಡಿಗ ಮನೆಯಿಂದ ಹೊರ ಬಂದಿದ್ದಾರೆ. ಇಂದು ನಡೆದ ಎಲಿಮಿನೇಷನ್ ಸುತ್ತಿನಲ್ಲಿ ಶುಭಾ ಪೂಂಜಾ, ರಾಜೀವ್ ಪ್ರಶಾಂತ್, ದಿವ್ಯ ಸುರೇಶ್ ಹಾಗೂ ಶಮಂತ್ ಇದ್ದರು. ಮೊದಲಿಗೆ ಶುಭಾ ಪೂಂಜಾ ಹಾಗೂ ರಾಜೀವ್ ಸೇಫ್ ಆದರು. ನಂತರ ಸುದೀಪ್, ಈ ವಾರ ಇಬ್ಬರು ಅಥವಾ ಒಬ್ಬರ ಎಲಿಮಿನೇಷನ್ ಎಂಬ ಪ್ರಶ್ನೆಯನ್ನು ಮನೆಯ ಸದಸ್ಯರ ಮುಂದಿಟ್ಟರು. ಕೆಲವರು ನೋ ಎಲಿಮಿನೇಷನ್ ಎಂದರೆ, ಕೆಲವರು ಒಬ್ಬರೇ ಎಂದರು.

ಹೊರ ಹೋಗಲು ಬಯಸುವ ಸ್ಪರ್ಧಿ ಯಾರು ಎಂದಾಗ ಮನೆಯ ಅನೇಕ ಸದಸ್ಯರು ಶಮಂತ್​ಗೆ ಹೆಚ್ಚಿನ ಅವಕಾಶಗಳು ಸಿಕ್ಕರೂ ಸರಿಯಾಗಿ ಬಳಸಿಕೊಂಡಿಲ್ಲ. ಹೀಗಾಗಿ ಮನೆಯಿಂದ ಹೊರಹೋಗಲಿ ಎಂದರು.‌ ಅಂತಿಮವಾಗಿ ಪ್ರಶಾಂತ್ ಸೇಫ್ ಆಗಿ ಶಮಂತ್ ಎಲಿಮಿನೇಟ್ ಆದರು. ಆದರೆ, ಅಲ್ಲಿ ನಡೆದಿದ್ದೇ ಬೇರೆ. ಕಳೆದ ಮೂರು ದಿನಗಳ ಹಿಂದೆ ಬಂದಿದ್ದ ವೈಜಯಂತಿ ಅಡಿಗ ಅವರು ಪದೇ ಪದೆ ಮನೆಯಿಂದ ಹೊರ ಹೋಗುವ ಮಾತನಾಡುತ್ತಿದ್ದರು. ಹೀಗಾಗಿ, ಸುದೀಪ್ ಅವರು ವೈಜಯಂತಿ ಅವರನ್ನು ಕೇಳಿದರು. ನೀವು ಮನೆಯಿಂದ ಹೊರ ಹೋಗಬೇಕಾದರೆ ಹೋಗಬಹುದು. ನೀವು ಮನೆಯಿಂದ ಹೊರ ಹೋದರೆ, ಶಮಂತ್ ಮನೆಯಲ್ಲಿ ಉಳಿದುಕೊಳ್ಳಲಿದ್ದಾರೆ ಎಂದರು.

ಎರಡು ನಿಮಿಷ ಕಾಲಾವಕಾಶ ನೀಡಿ ಯೋಚಿಸಿ ನಿರ್ಧಾರ ತಿಳಿಸಿ ಎಂದು ಸುದೀಪ್ ಹೇಳಿದರು. ಎರಡು ನಿಮಿಷ ಕಳೆದ ನಂತರ ವೈಜಯಂತಿ, ನಾನು ಮನೆಯಿಂದ ಹೊರ ಹೋಗುತ್ತೇನೆ ಎಂದರು. ಇದಕ್ಕೆ ಮನೆಯಲ್ಲಿನ ಸದಸ್ಯರು ಅಚ್ಚರಿ ವ್ಯಕ್ತಪಡಿಸಿದರು. 'ದಯವಿಟ್ಟು ಇದನ್ನು ದುರಹಂಕಾರ ಎಂದು ತಿಳಿಯಬೇಡಿ. ನನಗೆ ಇಲ್ಲಿರಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳು ಹೇಗೆ ಎಂಬುದು ಕೂಡ ಊಹಿಸಲು ಆಗುತ್ತಿಲ್ಲ. ಇದು ನನಗೆ ಸರಿಯಾದ ವೇದಿಕೆ ಅಲ್ಲ. ಮನೆಯವರನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾನು ಹೋಗುತ್ತೇನೆ. ಅನ್ಯಥಾ ಭಾವಿಸಬೇಡಿ' ಎಂದು ವೈಜಯಂತಿ ಮನೆಯಿಂದ ಹೊರ ಬಂದರು.

ಇದಕ್ಕೆ ಸುದೀಪ್ ಪ್ರತಿಕ್ರಿಯಿಸಿ ಏಳು ದಿನಗಳ ಕಾಲ ಇದ್ದು ಇಲ್ಲಿಗೆ ಬಂದು ಮೂರು ದಿನಕ್ಕೆ ಹೋಗುತ್ತಿದ್ದೀರಿ. ಇನ್ನೊಬ್ಬರ ಅವಕಾಶವನ್ನು ನೀವು ಕಿತ್ತುಕೊಂಡಂತಾಗಿದೆ ಎಂದು ನೇರವಾಗಿ ವೈಜಯಂತಿ ಅವರಿಗೆ ಹೇಳಿದರು. ಒಟ್ಟಾರೆ ಶಮಂತ್ ಮೊದಲ ಹಾಗೂ ಎರಡನೇ ವಾರ ಕ್ಯಾಪ್ಟನ್ ಆದಾಗಿನಿಂದಲೂ ಆರನೇ ವಾರದವರೆಗೂ ಒಂದಿಲ್ಲೊಂದು ಕಾರಣದಿಂದಾಗಿ ಸೇಫ್ ಆಗುತ್ತಲೇ ಇದ್ದಾರೆ. ಆದರೆ, ಮುಂದಿನ ವಾರ ಸೇಫ್ ಆಗಲು ಯಾವುದೇ ಕಾರಣಗಳು ಇಲ್ಲ ಎಂಬುದನ್ನು ನೇರವಾಗಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details