'ಹರಹರ ಮಹಾದೇವ ' ಧಾರಾವಾಹಿ ಮೂಲಕ ಹೆಸರು ಪಡೆದ ವಿನಯ್ ಗೌಡ ಕಿರುತೆರೆಗೆ ಬಂದಿದ್ದು 'ಚಿಟ್ಟೆ ಹೆಜ್ಜೆ ' ಧಾರಾವಾಹಿಯ ಪುಟ್ಟ ಪಾತ್ರದಲ್ಲಿ ನಟಿಸುವ ಮೂಲಕ. ಅವರು ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿದ್ದು 'ಅಂಬಾರಿ' ಧಾರಾವಾಹಿಯಲ್ಲಿ.
'ಹರಹರ ಮಹಾದೇವ' ಖ್ಯಾತಿಯ ವಿನಯ್ ಗೌಡ 'ಸಿಐಡಿ ಕರ್ನಾಟಕ ' ಸೇರಿ ಇನ್ನಿತರ ಧಾರಾವಾಹಿಗಳಲ್ಲಿ ನಟಿಸಿರುವ ವಿನಯ್ ಗೌಡ ಅವರಿಗೆ 'ಹರಹರ ಮಹಾದೇವ ' ಧಾರಾವಾಹಿ ಸಾಕಷ್ಟು ಖ್ಯಾತಿ ತಂದು ನೀಡಿತು. ಈ ಧಾರಾವಾಹಿಯಲ್ಲಿ ಮಹಾದೇವನಾಗಿ ನಟಿಸಿರುವ ವಿನಯ್ ಗೌಡ ನಂತರ 'ಜೈ ಹನುಮಾನ್ ' ಧಾರಾವಾಹಿಯ ರಾವಣನಾಗಿ, 'ಉಘೇ ಉಘೇ ಮಾದೇಶ್ವರ ' ಧಾರಾವಾಹಿಯ ಶ್ರವಣ ಚಕ್ರವರ್ತಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ.
'ಹರಹರ ಮಹಾದೇವ' ಖ್ಯಾತಿಯ ವಿನಯ್ ಗೌಡ ಪೌರಾಣಿಕ ಪಾತ್ರದಲ್ಲಿ ನಟಿಸುವುದು ನಿಜಕ್ಕೂ ತುಂಬಾ ಕಷ್ಟದ ಕೆಲಸ. ಜೀವಂತಿಕೆಯಿದ್ದರೆ ಮಾತ್ರ ಪಾತ್ರ ಸೊಗಸಾಗಿ ಮೂಡಿ ಬರಲು ಸಾಧ್ಯ. ಒಂದು ಹಂತದಲ್ಲಿ ಪರಕಾಯ ಪ್ರವೇಶ ಆದಾಗಲೇ ಪೌರಾಣಿಕ ಪಾತ್ರಕ್ಕೆ ತೂಕ ಬರುತ್ತದೆ ಎಂದು ಹೇಳುತ್ತಾರೆ ವಿನಯ್. ಅಲ್ಲದೆ ಪೌರಾಣಿಕ ಪಾತ್ರದಲ್ಲಿ ನಟಿಸುವಾಗ ಎದುರಾದ ಸವಾಲುಗಳ ಬಗ್ಗೆ ಕೂಡಾ ವಿನಯ್ ಕಿರುತೆರೆ ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ.
'ಹರಹರ ಮಹಾದೇವ' ಖ್ಯಾತಿಯ ವಿನಯ್ ಗೌಡ 'ಹರಹರ ಮಹಾದೇವ ' ಧಾರಾವಾಹಿಯ ಶಿವ ನಾನು ನಟಿಸಿದ ಮೊದಲ ಪೌರಾಣಿಕ ಧಾರಾವಾಹಿ. ಶಿವನ ಪಾತ್ರಕ್ಕೆ ಜೀವ ತುಂಬಲು ನಿಜಕ್ಕೂ ಕಷ್ಟ. ಆದರೆ ಸರಿಯಾದ ಹೋಂವರ್ಕ್ ಮಾಡಿಕೊಂಡ ಕಾರಣ ಅಭಿನಯಿಸಲು ಅಷ್ಟೊಂದು ಕಷ್ಟವಾಗಲಿಲ್ಲ ಎನ್ನುವ ವಿನಯ್ ಅವರಿಗೆ ಎದುರಾದದ್ದು ಒಂದೇ ಸಮಸ್ಯೆ, ಅದು ಟ್ಯಾಟೂ. ವಿನಯ್ ಅವರ ದೇಹದ ತುಂಬಾ ಟ್ಯಾಟೂಗಳು ಇದ್ದವು. ಶಿವನ ಪಾತ್ರದಲ್ಲಿ ನಟಿಸುವಾಗ ನನ್ನ ದೇಹದಲ್ಲಿನ ಟ್ಯಾಟೂಗಳು ಕಾಣದಂತೆ ಮೇಕಪ್ ಮಾಡಬೇಕಾಗಿತ್ತು. ಅದೇ ಕಾರಣದಿಂದ ಶೂಟಿಂಗ್ ಆರಂಭವಾಗುವ ಎರಡು ಗಂಟೆ ಮೊದಲೇ ವಿನಯ್ ಮೇಕಪ್ ಮಾಡಿಸಿಕೊಳ್ಳುತ್ತಿದ್ದರು.
'ಹರಹರ ಮಹಾದೇವ' ಖ್ಯಾತಿಯ ವಿನಯ್ ಗೌಡ ಮೊದಲಿಗೆ ಮೈಮೇಲಿರುವ ಟ್ಯಾಟೂಗಳು ಕಾಣದಂತೆ ಮೇಕಪ್ ಮಾಡಿ ನಂತರ ಶಿವನ ಪಾತ್ರಕ್ಕೆ ಬೇಕಾದ ಮೇಕಪ್ ಮಾಡಿಸಿಕೊಳ್ಳುತ್ತಿದೆ ಎಂದು ಆ ದಿನಗಳ ಬಗ್ಗೆ ಹೇಳುತ್ತಾರೆ ವಿನಯ್ ಗೌಡ. ಪೌರಾಣಿಕ ಪಾತ್ರ ಮಾಡುವುದಾದರೆ ದೇಹದ ತೂಕ ತುಂಬಾನೇ ಮುಖ್ಯ. ದೇಹದ ತೂಕವನ್ನು ಕಾಪಾಡಿಕೊಳ್ಳುವುದು ಕೂಡಾ ಒಂದು ಸಾಹಸದ ವಿಚಾರ. ಶಿವನ ಪಾತ್ರ ಮಾಡುವಾಗ 20 ಕೆಜಿ ತೂಕ ಇಳಿಸಿಕೊಂಡಿದ್ದ ವಿನಯ್, ನಂತರ 'ಜೈ ಹನುಮಾನ್ ' ರಾವಣನ ಪಾತ್ರಕ್ಕೆ ಮತ್ತೆ ತೂಕ ಹೆಚ್ಚಿಸಿಕೊಂಡರು.
'ಹರಹರ ಮಹಾದೇವ' ಖ್ಯಾತಿಯ ವಿನಯ್ ಗೌಡ ಎಲ್ಲಕ್ಕಿಂತಲೂ ಕಷ್ಟವಾದ ಸವಾಲ್ ಅಂದರೆ ಡಯಟ್. ಶೂಟಿಂಗ್ ಎಂದ ಮೇಲೆ ಅದು ಕೇವಲ ಒಂದೇ ಕಡೆ ನಡೆಯುವುದಿಲ್ಲ. ಹರಹರ ಮಹಾದೇವ ಧಾರಾವಾಹಿಯ ಶೂಟಿಂಗ್ ಮುಂಬೈಯಲ್ಲಿ ನಡೆದರೆ, ಜೈ ಹನುಮಾನ್ ಧಾರಾವಾಹಿಯ ಶೂಟಿಂಗ್ ಗುಜರಾತ್ನಲ್ಲಿ ನಡೆಯುತ್ತಿತ್ತು. ನಮ್ಮ ಆಹಾರ ಪದ್ಧತಿಗೂ ಉತ್ತರ ಭಾರತದ ಆಹಾರ ಪದ್ಧತಿಗೂ ವ್ಯತ್ಯಾಸ ಇದೆ. ಆಹಾರದ ವಿಚಾರದಲ್ಲಿ ಮೊದಲು ಕಷ್ಟವಾದರೂ ನಂತರ ಅಭ್ಯಾಸವಾಯಿತು ಎನ್ನುವ ವಿನಯ್ ಗೌಡ ಹರಹರ ಮಹಾದೇವ ನಾಗಿ ಅಭಿನಯಿಸುವಾಗ ಮಾಂಸಾಹಾರ ತ್ಯಜಿಸಿದ್ದರು.
'ಹರಹರ ಮಹಾದೇವ' ಖ್ಯಾತಿಯ ವಿನಯ್ ಗೌಡ ಶೂಟಿಂಗ್ ಸಮಯದಲ್ಲಿ ಕಲಾವಿದರು ಅನೇಕ ದಿನಗಳ ಕಾಲ ಕುಟುಂಬದವರಿಂದ ದೂರ ಉಳಿಯಬೇಕು. ಅದರಂತೆ ನಾನು 'ಹರಹರ ಮಹಾದೇವ ' ಧಾರಾವಾಹಿಯಲ್ಲಿ ನಟಿಸುವಾಗ ಸುಮಾರು 3-4 ವರ್ಷಗಳ ಕಾಲ ಮುಂಬೈನಲ್ಲಿ ಇದ್ದೆ. ತಿಂಗಳಿಗೆ 2-3 ದಿನಗಳು ಮಾತ್ರ ಮನೆಯವರೊಂದಿಗೆ ಕಾಲ ಕಳೆಯುವ ಅವಕಾಶ ದೊರೆಯುತ್ತಿತ್ತು. ಆ ವೇಳೆ ಫ್ಯಾಮಿಲಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೆ ಎನ್ನುತ್ತಾರೆ ವಿನಯ್ ಗೌಡ.