ಆರು ವರ್ಷ ವಯಸ್ಸಿನ ಈ ನೃತ್ಯಗಾರ್ತಿ ನಿನ್ನೆ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾಳೆ. ಶೋನ ಆರಂಭದಿಂದಲೂ ಅದ್ಭುತ ಪ್ರದರ್ಶನದ ಮೂಲಕ ವೀಕ್ಷಕರ ಮನಗೆದ್ದಿದ್ದ ಈ ಬಾಲೆ, ಫೈನಲ್ ಹಂತದಲ್ಲಿ ಅಧಿಕ ವೋಟ್ಗಳನ್ನು ಬಾಚಿಕೊಂಡು ವಿಜಯದ ಮಾಲೆ ಧರಿಸಿದ್ದಾಳೆ. ಈಕೆಯ ಡಾನ್ಸ್ಗೆ ಫಿದಾ ಆಗಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಈ ಪೋರಿಯ ಕಾಲಿಗೆ ಮುತ್ತು ನೀಡಿದ್ದ ವಿಶೇಷ ಪ್ರಸಂಗ ಇತ್ತೀಚೆಗೆ ನಡೆದಿತ್ತು.
ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ... ಬಾಲೆಯ ಕಾಲಿಗೆ ಮುತ್ತಿಕ್ಕಿದ ನಟಿ ಶಿಲ್ಪಾ ಶೆಟ್ಟಿ - ಬೆಂಗಾಲಿ ಬಾಲೆ
ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೂಪರ್ ಡಾನ್ಸರ್' ಸೀಸನ್ 3ರಲ್ಲಿ ಬೆಂಗಾಲಿ ಬಾಲೆ ರುಪ್ಸಾ ವಿಜೇತೆಯಾಗಿದ್ದಾಳೆ.
ಚಿತ್ರಕೃಪೆ : ಸೋನಿ ಟ್ವಿಟ್ಟರ್
ಇನ್ನು ವಾಹಿನಿ ವಿನ್ನರ್ ರುಪ್ಸಾಗೆ 15 ಲಕ್ಷ ರೂ. ಹಾಗೂ ಆಕೆಯ ಗುರು ನಿಶಾಂತ್ ಭಟ್ಗೆ 5 ಲಕ್ಷ ರೂ.ಚೆಕ್ ನೀಡಿ ಗೌರವಿಸಿದೆ. ರನ್ನರ್ ಅಪ್ ಮುಂಬೈ ಮೂಲದ ಸ್ಪರ್ಧಿ ತೇಜಸ್ ವರ್ಮಾ ಸೇರಿದಂತೆ ಫೈನಲ್ ತಲುಪಿದ್ದ ಐದು ಸ್ಪರ್ಧಿಗಳಿಗೆ ತಲಾ 1ಲಕ್ಷ ರೂ. ನೀಡಲಾಯಿತು.