ಬಿಡುವಿನ ಸಮಯದಲ್ಲಿ ಸೆಲಬ್ರಿಟಿಗಳು ವಿದೇಶ ಅಥವಾ ಇತರ ರಾಜ್ಯಗಳಿಗೆ ಟ್ರಿಪ್ ಹೋಗುವುದು ಸಾಮಾನ್ಯ. ಇದೀಗ ಕಿರುತೆರೆ ನಟ ಶಿಶಿರ್ ಶಾಸ್ತ್ರಿ ತಂಗಿ ದೀಪಾ ಜಗದೀಶ್ ಹಾಗೂ ಸ್ನೇಹಿತರೊಂದಿಗೆ ಮಹಾರಾಷ್ಟ್ರದ ಅಂಬೋಲಿಗೆ ತೆರಳಿ ಎಂಜಾಯ್ ಮಾಡಿ ಬಂದಿದ್ದಾರೆ.
ಸುಂದರ ಪ್ರಕೃತಿಯ ನಡುವೆ ಶಿಶಿರ್ ಶಾಸ್ತ್ರಿ ಕುಲವಧು, ಸೇವಂತಿ ಹಾಗೂ ಪ್ರೇಮಲೋಕ ಧಾರಾವಾಹಿಗಳ ಮೂಲಕ ಗಮನ ಸೆಳೆದಿರುವ ಶಿಶಿರ್ ಶಾಸ್ತ್ರಿ, ಅಂಬೋಲಿ ಜಲಪಾತದ ಬಳಿ ತೆಗೆದ ಫೋಟೋಗಳ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ನಮ್ಮ ರೆಕ್ಕೆಗಳು ಹಾರಲು ಮರೆತಾಗ ನಮ್ಮನ್ನು ಮೇಲಕ್ಕೆ ಎತ್ತುವ ದೇವದೂತರೇ ಸಹೋದರಿಯರು " ಎಂದು ಬರೆದುಕೊಂಡಿದ್ದಾರೆ.
ದೀಪಾ ಜಗದೀಶ್, ಶಿಶಿರ್ ಶಾಸ್ತ್ರಿ ಲಾಕ್ ಡೌನ್ ನಡುವೆ ಸರ್ಕಾರ ಶೂಟಿಂಗ್ ನಡೆಸಲು ಅನುಮತಿ ನೀಡಿದಾಗ ಕಲಾವಿದರು ಬಿಡುವಿಲ್ಲದೆ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು. ಈಗ ಮತ್ತೆ ಶೂಟಿಂಗ್ಗೆ ವಿರಾಮ ಪಡೆದಿರುವ ಶಿಶಿರ್ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಸುಂದರ ಪ್ರಕೃತಿಯ ನಡುವೆ ಕಾಲ ಕಳೆಯಲು ಬಯಸುತ್ತಾರೆ. ಇತ್ತೀಚೆಗೆ ನಟರಾದ ರಕ್ಷ್ , ಚಂದನ್ ಕುಮಾರ್ , ಅನಿರುದ್ದ್ ಜತ್ಕರ್, ವಿಜಯಲಕ್ಷ್ಮಿ ಸಿಂಗ್ ಕುಟುಂಬ, ಕವಿತ ಗೌಡ ಹಾಗೂ ಇನ್ನಿತರರು ಟ್ರಿಪ್ ಹೋಗಿ ಬಂದಿದ್ದರು. ಇದೀಗ ಶಿಶಿರ್ ಕೂಡಾ ಸುಂದರ ಜಲಪಾತದ ನಡುವೆ ಎಲ್ಲಾ ಒತ್ತಡಗಳನ್ನು ಮರೆತು ಖುಷಿಯಿಂದ ಕಾಲ ಕಳೆದು ಬಂದಿದ್ದಾರೆ.
'ಸೇವಂತಿ' ಧಾರಾವಾಹಿಯಲ್ಲಿ ದೀಪಿಕಾ ಜೊತೆ ನಟಿಸುತ್ತಿರುವ ಶಿಶಿರ್, ಇದಕ್ಕೂ ಮುನ್ನ ಅವರೊಂದಿಗೆ 'ಕುಲವಧು' ಧಾರಾವಾಹಿಯಲ್ಲಿ ನಟಿಸಿದ್ದರು. 'ಪ್ರೇಮಲೋಕ' ಧಾರಾವಾಹಿಯಲ್ಲಿ ನೆನಪು ಕಳೆದುಕೊಂಡಿರುವ ಸುಧೀರ್ ಪಾತ್ರದಲ್ಲಿ ನಟಿಸಿದ್ದಾರೆ. ಎಲ್ಎಲ್ಬಿ, ಬಿಲ್ಗೇಟ್ಸ್ ಸಿನಿಮಾಗಳಲ್ಲಿ ಕೂಡಾ ಶಿಶಿರ್ ನಟಿಸಿದ್ದಾರೆ. 'ಅಲೆವ ಮೋಡ' ಎಂಬ ಸಿನಿಮಾದಲ್ಲಿ ಶಿಶಿರ್ ನಟಿಸುತ್ತಿದ್ದು ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.
ಸಹೋದರಿ, ಸ್ನೇಹಿತನೊಂದಿಗೆ ಶಿಶಿರ್ ಶಾಸ್ತ್ರಿ