'ರೈಡರ್' ಸ್ಯಾಂಡಲ್ವುಡ್ನ ಯುವರಾಜ ನಿಖಿಲ್ ಕುಮಾರಸ್ವಾಮಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ. ಕನ್ನಡ ಅಲ್ಲದೇ ಟಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಕ್ರೇಜ್ ಹುಟ್ಟು ಹಾಕಿರುವ ಈ ಸಿನಿಮಾದ ಆಫೀಶಿಯಲ್ 'ಟ್ರೈಲರ್' ಅನಾವರಣಗೊಂಡಿದೆ.
ನಿಖಿಲ್ ಈ ಸಿನಿಮಾದಲ್ಲಿ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿ ಕಾಣಿಸಿದ್ದಾರೆ. ಕಮರ್ಷಿಯಲ್ ಸಿನಿಮಾಗೆ ಬೇಕಾಗುವ ಎಲ್ಲಾ ರೀತಿಯ ಎಲಿಮೆಂಟ್ಸ್‌ನ ರೈಡರ್ ಚಿತ್ರದ ಟ್ರೈಲರ್ ಒಳಗೊಂಡಿದೆ.
ಮಾಸ್ ಎಂಟ್ರಿ, ವಾಹ್ ಎನಿಸುವ ಭರ್ಜರಿ ಆ್ಯಕ್ಷನ್ ದೃಶ್ಯಗಳಲ್ಲಿ ನಿಖಿಲ್ ಸಖತ್ತಾಗಿ ಸ್ಟಂಟ್ಸ್ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ನಿಖಿಲ್ ಎದುರಿಗೆ, ಕೆಜಿಎಫ್ ಖ್ಯಾತಿಯ ಗರುಡ ರಾಮ್ ಖಡಕ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಟ್ರೈಲರ್ನಲ್ಲಿ ನಿಖಿಲ್ ಹಾಗೂ ಗರುಡ ರಾಮ್ ಡೈಲಾಗ್‌ಗಳು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿವೆ.
ಹೊಡಿದ್ರೆ ಆನೆನೇ ಹೊಡಿಬೇಕು, ಕೆಡವಿದರೆ ಬೆಟ್ಟನೇ ಕೆಡವಬೇಕು. ಆನೆ ಹೊಡಿಯೋಕೆ ಒಂದು ಬುಲೆಟ್, ಬೆಟ್ಟ ಹೊಡಿಯೋಕೆ ಡೈನಾಮೈಟ್ ಇಂತಹ ಪಂಚಿಂಗ್ ಡೈಲಾಗ್‌ಗಳು ಟ್ರೈಲರ್ನಲ್ಲಿವೆ.
ನಿಖಿಲ್ ಜತೆ ನಾಯಕಿ ಕಾಶ್ಮೀರಿ ಪರ್ದೇಸಿ ಲವ್ ಕೆಮಿಸ್ಟ್ರಿ ಬೊಂಬಾಟ್ ಆಗಿ ವರ್ಕ್‌ಔಟ್ ಆಗಿದೆ. ಲವ್ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್ ಟ್ರೈಲರ್‌ನಲ್ಲಿದೆ. ಇನ್ನು ಈ ಚಿತ್ರದಲ್ಲಿ ಮತ್ತೊಬ್ಬ ನಾಯಕಿಯಾಗಿ ಅನುಷಾ ರೈ ಗಮನ ಸೆಳೆಯುತ್ತಾರೆ.