ವಾಷಿಂಗ್ಟನ್ :ಸ್ಟ್ರೀಮಿಂಗ್ ದೈತ್ಯ ನೆಟ್ ಫ್ಲಿಕ್ಸ್ ಇನ್ಮುಂದೆ ರಷ್ಯಾದ ಯಾವುದೇ ವಿಷಯವಸ್ತುಗಳನ್ನು ಪ್ರಸಾರ ಮಾಡುವುದಿಲ್ಲ ಎಂದು ಹೇಳಿದೆ. ಉಕ್ರೇನ್ ಮೇಲಿನ ರಷ್ಯಾದ ದಾಳಿಯನ್ನು ಖಂಡಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದೆ. ಅಲ್ಲದೆ ನೆಟ್ ಫ್ಲಿಕ್ಸ್ ರಷ್ಯಾದೊಂದಿಗೆ ಹೊಂದಿದ್ದ ಎಲ್ಲಾ ಭವಿಷ್ಯದ ಯೋಜನೆಗಳನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ನೆಟ್ ಫ್ಲಿಕ್ಸ್ ಹೊಂದಿದ್ದ ರಷ್ಯಾದ ನಾಲ್ಕು ಯೋಜನೆಗಳಲ್ಲಿ, ದಶಾ ಝುಕ್ ನಿರ್ದೇಶಿಸಿದ ಕ್ರೈಮ್ ಥ್ರಿಲ್ಲರ್ ಸರಣಿಯನ್ನು ಒಳಗೊಂಡ ಎಲ್ಲಾ ಯೋಜನೆಗಳನ್ನು ತಡೆಹಿಡಿದಿದೆ. ಕಳೆದ ವರ್ಷ ಅನ್ನಾ ಕೆ ಚಿತ್ರೀಕರಣದ ನಂತರ 1990 ಚಿತ್ರದ ಸರಣಿಯು ರಷ್ಯಾದಲ್ಲಿ ಚಿತ್ರೀಕರಣಗೊಂಡ ನೆಟ್ಫ್ಲಿಕ್ಸ್ನ ಎರಡನೇ ಮೂಲ ಸರಣಿಯ ಚಿತ್ರವಾಗಿದೆ.