ಕರ್ನಾಟಕ

karnataka

ETV Bharat / sitara

ಪರಭಾಷೆಗೆ ಡಬ್​​ ಆಗುತ್ತಿದೆ ಕನ್ನಡದ 'ನಾಗಿಣಿ 2' ಸೂಪರ್ ನ್ಯಾಚುರಲ್ ಧಾರಾವಾಹಿ - ಮಲಯಾಳಂಗೆ ಡಬ್ಬಿಂಗ್ ಆಗುತ್ತಿದೆ ನಾಗಿಣಿ 2

ವೀಕ್ಷಕರ ಮನ ಗೆದ್ದಿರುವ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿ 2 ಮಲಯಾಳಂ ಭಾಷೆಗೆ ಡಬ್ಬಿಂಗ್ ಆಗುತ್ತಿದೆ. ಶೀಘ್ರದಲ್ಲಿ ಜೀ ಕೇರಳಂನಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆ.

Nagini 2 will telecast in Zee keralam
ನಾಗಿಣಿ 2

By

Published : May 26, 2020, 4:09 PM IST

ಲಾಕ್​​ಡೌನ್​​​ ಸಮಯದಲ್ಲಿ ಒಂದಷ್ಟು ಧಾರಾವಾಹಿಗಳು ಮುಗಿದಿರುವುದು ವೀಕ್ಷಕರಿಗೆ ಬೇಸರ ತಂದಿದೆ ನಿಜ. ಆದರೆ ಇದರ ನಡುವೆ ಖ್ಯಾತ ಧಾರಾವಾಹಿಯೊಂದು ಪರಭಾಷೆಗೆ ಡಬ್ಬಿಂಗ್ ಆಗುತ್ತಿರುವುದು ಧಾರಾವಾಹಿಪ್ರಿಯರಿಗೆ ಸಂತೋಷ ನೀಡಿದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿ-2 ಇದೀಗ ಮಲಯಾಳಂ ಭಾಷೆಗೆ ಡಬ್ಬಿಂಗ್ ಆಗುತ್ತಿದೆ. 'ನಾಗಮಣಿಯ ದುರಾಸೆಗಾಗಿ ಹೊಂಚು ಹಾಕುತ್ತಿದ್ದ ಮನುಷ್ಯರು ಅದನ್ನು ಕದಿಯುವ ಆಲೋಚನೆ ಮಾಡುತ್ತಾರೆ. ಅದಕ್ಕಾಗಿ ತಂತ್ರವನ್ನು ರೂಪಿಸಿ ನಾಗಲೋಕಕ್ಕೆ ಕಾಲಿಡುವ ಮನುಷ್ಯರು ನಾಗಮಣಿಯನ್ನು ವಶಪಡಿಸಿಕೊಳ್ಳುತ್ತಾರೆ. ನಾಗಮಣಿಯನ್ನು ಕದ್ದೊಯ್ಯುವ ಸಮಯದಲ್ಲಿ ಅದರ ರಕ್ಷಣೆಗೆ ಬರುವ ಆದಿಶೇಷನನ್ನು ಅವರು ಕೊಲ್ಲುತ್ತಾರೆ.

ನಮ್ರತಾ ಗೌಡ

ಪ್ರಿಯಕರ ಆದಿಶೇಷನನ್ನು ಕೊಂದು ನಾಗಮಣಿಯನ್ನು ಕದ್ದೊಯ್ದವರ ವಿರುದ್ಧ ಸೇಡು ತೀರಿಸಿಕೊಳ್ಳಲು, ಕಳೆದ ಹೋದ ನಾಗಮಣಿಯನ್ನು ಮರಳಿ ಪಡೆಯಲು ನಾಗಕನ್ಯೆ ಶಿವಾನಿ ಮಾನವ ರೂಪದಲ್ಲಿ ಭೂಲೋಕಕ್ಕೆ ಬರುತ್ತಾಳೆ. ಆಕೆ ಹೇಗೆ ದ್ವೇಷ ಸಾಧಿಸುತ್ತಾಳೆ, ನಾಗಮಣಿಯನ್ನು ಪಡೆಯಲು ಸಫಲಲಾಗುತ್ತಾಳಾ ಎಂಬುದೇ 'ನಾಗಿಣಿ 2' ರ ಕಥಾ ಹಂದರ.

ಜಯರಾಮ್ ಕಾರ್ತಿಕ್ ( ಫೋಟೋ ಕೃಪೆ: ಜೀ ಕನ್ನಡ)

ಕನ್ನಡ ಕಿರುತೆರೆ ವೀಕ್ಷಕರ ಮನ ಸೆಳೆದಿರುವ 'ನಾಗಿಣಿ 2' ಧಾರಾವಾಹಿ ಇದೀಗ ಮಲಯಾಳಂ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಲು ತಯಾರಾಗಿದೆ. ಅಂದ ಹಾಗೆ 'ನಾಗಿಣಿ' ಎಂಬ ಹೆಸರಿನಿಂದಲೇ ಈ ಧಾರಾವಾಹಿ ಜೀ ಕೇರಳಂ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ.

ABOUT THE AUTHOR

...view details