ಕರ್ನಾಟಕ

karnataka

ETV Bharat / sitara

ರಿಯಾಲಿಟಿ ಶೋನಲ್ಲಿ ತಮ್ಮ ನೋವನ್ನು ಹಂಚಿಕೊಂಡ ಲೇಡಿ ಗೆಟಪ್ ಕಲಾವಿದರು...!

ನಮ್ಮ ಲೇಡಿ ಗೆಟಪ್ ಕೇವಲ ಕಾರ್ಯಕ್ರಮಕ್ಕೆ ಮಾತ್ರ ಸೀಮಿತ, ನಾವು ಪುರುಷರು ಎಂದು ಜನರ ಮನಸ್ಸಿಗೆ ಬರಬೇಕು. ಹೆಣ್ಣಿನ ವೇಷ ಧರಿಸಿ ಧರಿಸಿ ನಮ್ಮನ್ನು ಜನರು ಹೆಣ್ಣಿನಂತೆ ನೋಡುತ್ತಾರೆ ಎಂದು ಜಬರ್ದಸ್ತ್ ಹಾಗೂ ಎಕ್ಸ್ಟ್ರಾ ಜಬರ್ದಸ್ತ್ ಕಲಾವಿದರು ಕ್ಯಾಷ್ ಕಾರ್ಯಕ್ರಮದಲ್ಲಿ ನೋವು ಹಂಚಿಕೊಂಡಿದ್ದಾರೆ.

Jabardast lady get up Artist
ಲೇಡಿ ಗೆಟಪ್ ಕಲಾವಿದರು

By

Published : Nov 23, 2020, 6:59 AM IST

ಕನ್ನಡದಲ್ಲಿ 'ಕಾಮಿಡಿ ಕಿಲಾಡಿಗಳು' ಹೇಗೆ ಫೇಮಸ್ ಆಗಿದೆಯೋ ತೆಲುಗಿನಲ್ಲಿ ಕೂಡಾ 'ಜಬರ್ದಸ್ತ್'​, 'ಎಕ್ಸ್ಟ್ರಾ ಜಬರ್ದಸ್ತ್' ಕೂಡಾ ಅಷ್ಟೇ ಫೇಮಸ್. 2013 ರಲ್ಲಿ ಜಬರ್ದಸ್ತ್ ಹಾಗೂ 2014 ರಲ್ಲಿ ಎಕ್ಸ್ಟ್ರಾ ಜಬರ್ದಸ್ತ್ ಆರಂಭವಾಯ್ತು. ಅಲ್ಲಿಂದ ಇಲ್ಲಿವರೆಗೂ ಜಬರ್ದಸ್ತ್ ಕಾರ್ಯಕ್ರಮವನ್ನು ಅನುಸೂಯ ಭಾರಧ್ವಾಜ್​​​, ಎಕ್ಸ್ಟ್ರಾ ಜಬರ್ದಸ್ತ್ ಕಾರ್ಯಕ್ರಮವನ್ನು ರಶ್ಮಿ ನಡೆಸಿಕೊಡುತ್ತಿದ್ದಾರೆ. ಖ್ಯಾತ ನಟಿ ರೋಜಾ ಕಾರ್ಯಕ್ರಮದ ಜಡ್ಜ್​ ಆಗಿದ್ದಾರೆ.

ಈ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಈ ಎರಡೂ ಕಾರ್ಯಕ್ರಮಗಳಲ್ಲೂ ಬಹಳ ವರ್ಷಗಳಿಂದ ಕೆಲವು ಮಂದಿ ಲೇಡಿ ಗೆಟಪ್ ಧರಿಸುತ್ತಾ ಬಂದಿದ್ದಾರೆ. ಇವರೆಲ್ಲಾ ಎಷ್ಟರ ಮಟ್ಟಿಗೆ ಫೇಮಸ್ ಎಂದರೆ ತಮ್ಮ ವರ್ಜಿನಲ್ ಗೆಟಪ್​​ನಲ್ಲಿ ಬಂದರೂ ಪ್ರೇಕ್ಷಕರು ಇವರನ್ನು ಕಂಡುಹಿಡಿಯಲು ಆಗದೇ ಇರುವಷ್ಟು ಫೇಮಸ್. ಇವರನ್ನೆಲ್ಲಾ ಲೇಡಿ ಗೆಟಪ್​​​ನಲ್ಲಿ ನೋಡಿ ನೋಡಿ ಬಹುತೇಕ ಎಲ್ಲರಿಗೂ ಇವರ ವರ್ಜಿನಲ್ ಮುಖ ತಿಳಿದೇ ಇಲ್ಲ. ಆದರೆ ನಿರೂಪಕಿ ಸುಮ ನಡೆಸಿಕೊಡುವ ಕ್ಯಾಷ್ ಶೋನಲ್ಲಿ ಈ ಕಲಾವಿದರೆಲ್ಲಾ ತಮ್ಮ ವರ್ಜಿನಲ್ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಜನರು ನಮ್ಮನ್ನು ಹೇಗೆ ಸ್ವೀಕರಿಸಿದ್ದಾರೆ ಎಂಬುದನ್ನೂ ಹೇಳಿಕೊಂಡಿದ್ದಾರೆ.

ತನ್ಮಯ್, ಶಾಂತಿ ಸ್ವರೂಪ್, ಪಾವನಿ, ಮೋಹನ್, ವಿನೋದಿನಿ ಹಾಗೂ ಇನ್ನಿತರರು ಜಬರ್ದಸ್ತ್, ಎಕ್ಸ್ಟ್ರಾ ಜಬರ್ದಸ್ತ್ ಶೋನಲ್ಲಿ ಸೀರೆ ಉಟ್ಟು, ಆಭರಣ ತೊಟ್ಟು, ಹೆಣ್ಣಿನಂತೆ ಮೇಕಪ್ ಮಾಡಿಕೊಂಡು ಜನರನ್ನು ರಂಜಿಸುತ್ತಿದ್ದಾರೆ. ಆದರೆ ಇವರನ್ನು ಜನರು ಹೆಣ್ಣಾಗೇ ಸ್ವೀರಿಸಿದ್ದಾರೆ. ಇವರು ವರ್ಜಿನಲ್ ಗೆಟಪ್​​ನಲ್ಲಿ ಇದ್ದರೂ ಬಹಳಷ್ಟು ಜನರು ಇವರನ್ನೆಲ್ಲಾ ನೋಡುವ ರೀತಿಯೇ ಬೇರೆ. ಕ್ಯಾಷ್ ಕಾರ್ಯಕ್ರಮದಲ್ಲಿ ಇವರ ವೈಯಕ್ತಿಕ ಜೀವನದ ಬಗ್ಗೆ ಕೇಳಿದಾಗ ಈ ಕಲಾವಿದರು ತಮ್ಮ ನೋವು ಹಂಚಿಕೊಂಡಿದ್ದಾರೆ.

ನಾವು ಹೆಣ್ಣಿನ ವೇಷ ತೊಡುವುದರಿಂದ ಜನರು ನಮ್ಮನ್ನು ಹಾಗೇ ನೋಡುತ್ತಾರೆ. ಮದುವೆ ವಿಚಾರಕ್ಕೆ ಬಂದರೆ ಹೆಣ್ಣು ಕೊಡಲು ಯಾರೂ ಮುಂದೆ ಬರುವುದಿಲ್ಲ. ಆದರೆ ನಾವು ಕಲಾರಾಧಕರು. ಹೊಟ್ಟೆ ತುಂಬಿಸಿಕೊಳ್ಳಲು ಬೇರೆ ದಾರಿ ಇಲ್ಲ. ನಮ್ಮ ಕುಟುಂಬವನ್ನು ನಾವು ಇದೇ ದುಡ್ಡಿನಿಂದ ಪೋಷಿಸುತ್ತಿದ್ದೇವೆ. ನಾವೂ ಕೂಡಾ ಪುರುಷರು, ನಮ್ಮ ವೇಷ ಕೇವಲ ಕಾರ್ಯಕ್ರಮಕ್ಕೆ ಮಾತ್ರ ಸೀಮಿತ ಎಂಬ ವಿಚಾರ ಜನರ ಮನಸ್ಸಿನಲ್ಲಿ ಬರುವವರೆಗೂ ನಮಗೆ ಮದುವೆ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿ ಗುರುವಾರ ಜಬರ್ದಸ್ತ್ ಹಾಗೂ ಶುಕ್ರವಾರ ಎಕ್ಸ್ಟ್ರಾ ಜಬರ್ದಸ್ತ್ ಪ್ರಸಾರವಾಗುತ್ತಿದೆ.

ABOUT THE AUTHOR

...view details