ಝೀ ಕನ್ನಡ ವಾಹಿನಿಯಲ್ಲಿ ಪ್ರತಿ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಕೋಟ್ಯಂತರ ವೀಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗಷ್ಟೇ ಕಾರ್ಯಕ್ರಮದ ಸೀಸನ್ 3 ಆರಂಭವಾಗಿದೆ.
'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ಮತ್ತೆ ಹಾಜರಾದ ಕ್ರೇಜಿ ಕ್ವೀನ್ ರಕ್ಷಿತ - ನವರಸನಾಯಕ ಜಗ್ಗೇಶ್
ಜ್ವರದಿಂದ ಬಳಲುತ್ತಿದ್ದ ರಕ್ಷಿತ ಕಳೆದ ವಾರ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಇದೀಗ ರಕ್ಷಿತ ಮತ್ತೆ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ವಾಪಸ್ ಬಂದಿದ್ದಾರೆ.
ಕಾರ್ಯಕ್ರಮದ ಮೂವರು ತೀರ್ಪುಗಾರರಲ್ಲಿ ಕ್ರೇಜಿಕ್ವೀನ್ ರಕ್ಷಿತ ಕೂಡಾ ಒಬ್ಬರು. ಇದೀಗ ಕಾರ್ಯಕ್ರಮಕ್ಕೆ ಅವರು ಮತ್ತೆ ವಾಪಸಾಗಿದ್ದಾರೆ. ಕಳೆದ ವಾರ ಅನಾರೋಗ್ಯದ ನಿಮಿತ್ತ ರಕ್ಷಿತ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಅವರ ಬದಲಿಗೆ ಗೋಲ್ಡನ್ ಸ್ಟಾರ್ ಗಣೇಶ್ ಬಂದಿದ್ದು ಪ್ರತಿಯೊಂದು ಹಾಸ್ಯವನ್ನು ಎಂಜಾಯ್ ಮಾಡಿದ್ದರು. ಜ್ವರದಿಂದ ಬಳಲುತ್ತಿದ್ದ ರಕ್ಷಿತ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಈ ವಾರ ಮತ್ತೆ ಅವರು ತಮ್ಮ ಸ್ಥಾನಕ್ಕೆ ವಾಪಸಾಗಿದ್ದಾರೆ. ರಕ್ಷಿತ ಜೊತೆಗೆ ನಿರ್ದೇಶಕ ಯೋಗರಾಜ್ ಭಟ್, ನವರಸನಾಯಕ ಜಗ್ಗೇಶ್ ತೀರ್ಪುಗಾರರಾಗಿ ಕಳೆದ ಎರಡು ಸಂಚಿಕೆಗಳಿಂದಲೂ ಕಾಣಿಸಿಕೊಂಡಿದ್ದಾರೆ. ಮಾಸ್ಟರ್ ಆನಂದ್ ಈ ಕಾರ್ಯಕ್ರಮದ ನಿರೂಪಣೆ ಹೊಣೆ ಹೊತ್ತಿದ್ದಾರೆ.