ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ನಡ ಕೋಗಿಲೆ' ಇದೀಗ ಸೂಪರ್ ಸೀಸನ್ ಆಗಿ ಬರುತ್ತಿದ್ದು, ಇದೇ ಆಗಸ್ಟ್ 31 ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.
ಪ್ರಶಸ್ತಿಯಿಂದ ಜಸ್ಟ್ ಮಿಸ್ ಆದವರಿಗೆ ಮತ್ತೆ ಅವಕಾಶ.. ಬರ್ತಿದೆ 'ಕನ್ನಡ ಕೋಗಿಲೆ ಸೂಪರ್ ಸೀಸನ್'
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ನಡ ಕೋಗಿಲೆ' ಇದೀಗ ಸೂಪರ್ ಸೀಸನ್ ಆಗಿ ಬರುತ್ತಿದ್ದು, ಇದೇ ಅಗಸ್ಟ್ 31 ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.
ಎರಡನೇ ಸೀಸನ್ ಮುಗಿಯುತ್ತಿದ್ದಂತೆ ಸೂಪರ್ ಸೀಸನ್ ಶುರುವಾಗುತ್ತಿದೆ. ವಿಶೇಷವೆಂದ್ರೆ ಈ ಶೋನಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಕಳೆದ ಶೋಗಳಲ್ಲಿ ಕೂದಲೆಳೆಯ ಅಂತರದಲ್ಲಿ ಗೆಲುವನ್ನು ಕಳೆದುಕೊಂಡವರು. ಹೀಗಾಗಿ ಅಂತಹ 14 ಮಂದಿಗೆ ಮತ್ತೆ ಪ್ರಶಸ್ತಿ ಗೆಲ್ಲುವ ಅವಕಾಶ ಒದಗಿಸುವ ಕಾರ್ಯಕ್ರಮ ಇದಾಗಿದೆ.
ಕನ್ನಡ ಕೋಗಿಲೆ ಮೊದಲ ಸೀಸನ್ನ ಫೈನಲಿಸ್ಟ್ಗಳಾದ ಪುತ್ತೂರಿನ ಅಖಿಲಾ ಪಜಿಮಣ್ಣು ಮತ್ತು ರಾಯಚೂರಿನ ಕರಿಬಸವ ಹಾಗೂ ಎರಡನೇ ಸೀಸನ್ ರನ್ನರ್ಸ್ ಶಿವಮೊಗ್ಗದ ಪಾರ್ಥ ಚಿರಂತನ್ ಹಾಗೂ ಬೆಂಗಳೂರಿನ ನೀತೂ ಸುಬ್ರಮಣ್ಯಂ ಅವರಿಗೆ ಪ್ರಶಸ್ತಿ ಗೆಲ್ಲಲು ಮತ್ತೊಂದು ಅವಕಾಶ ಸಿಕ್ಕಿದೆ. ಹಾಗೆಯೇ ಬೇರೆ ಬೇರೆ ಶೋಗಳಲ್ಲಿ ಪ್ರಶಸ್ತಿ ಪಡೆಯಲು ಸಾಧ್ಯವಾಗದ ಮನೋಜವಂ ಆತ್ರೇಯ, ಮಂಡ್ಯದ ಪುರುಷೋತ್ತಮ, ಬೆಂಗಳೂರಿನ ಸ್ಪರ್ಶ ಆರ್.ಕೆ, ಬೆಳಗಾವಿಯ ನಿಹಾರಿಕಾ, ಮೈಸೂರಿನ ನಿತಿನ್ ರಾಜಾರಾಂ ಶಾಸ್ತ್ರಿ, ಅಂಕೋಲದ ದರ್ಶಿನಿ ಶೆಟ್ಟಿ, ಗುಲ್ಬರ್ಗದ ಅನಂತರಾಜ್ ಮಿಸ್ತ್ರಿ, ಸಿದ್ದಾಪುರದ ಅರುಂಧತಿ ವಸಿಷ್ಠ, ಮುಂಬೈನ ಅದಿತಿ ಖಂಡೆಗಳ ಮತ್ತು ಮಂಗಳೂರಿನ ತನುಷ್ ರಾಜ್ ಈ ಸೀಸನ್ ಸ್ಪರ್ಧಿಗಳಾಗಿದ್ದಾರೆ.