ಕರ್ನಾಟಕ

karnataka

ETV Bharat / sitara

ಪುನೀತ್ ಫೋಟೋ ಮುಂದೆ ಶಾಂಪೇನ್​​​ ಬಾಟಲ್ ಓಪನ್..'ಏಕ್ ಲವ್ ಯಾ' ಚಿತ್ರತಂಡದಿಂದ ಪ್ರಮಾದ: ಅಭಿಮಾನಿಗಳ ಆಕ್ರೋಶ - ಏಕ್ ಲವ್ ಯಾ' ಸಿನಿಮಾದ 3ನೇ ಹಾಡು ಬಿಡುಗಡೆ

ಶಾಂಪೇನ್​ ಬಾಟಲ್ ಓಪನ್ ಮಾಡುವ ಮೂಲಕ 'ಏಕ್ ಲವ್ ಯಾ' (Ek Love Ya) ಸಿನಿಮಾದ 3ನೇ ಹಾಡನ್ನು ಬಿಡುಗಡೆ ಮಾಡಲಾಯಿತು. ಆದರೆ ಡಾ.ರಾಜ್​​ಕುಮಾರ್ ಆದರ್ಶಗಳನ್ನ ಪಾಲಿಸುತ್ತಿದ್ದ, ಕೋಟ್ಯಂತರ ಅಭಿಮಾನಿಗಳ ಮನೆ ಮಗನಾಗಿದ್ದ ಪುನೀತ್ ರಾಜ್‍ಕುಮಾರ್ (Ek Love Ya) ಫೋಟೋ ಮುಂದೆ ನಿರ್ಮಾಪಕಿ ರಕ್ಷಿತಾ ಪ್ರೇಮ್ ಶಾಂಪೇನ್​​​​ ಬಾಟಲ್​​ ಓಪನ್ ಮಾಡಿರುವುದು ದೊಡ್ಡ ಪ್ರಮಾದಕ್ಕೆ ಕಾರಣವಾಗಿದೆ.

Appu Fans outrage against 'Ek Love Ya' movie team
ಶಾಂಪಿಯನ್ ಬಾಟಲ್ ಓಪನ್ ಮಾಡುವ ಮೂಲಕ 'ಏಕ್ ಲವ್ ಯಾ' ಸಿನಿಮಾದ 3ನೇ ಹಾಡು ಬಿಡುಗಡೆ

By

Published : Nov 13, 2021, 12:08 PM IST

Updated : Nov 13, 2021, 12:24 PM IST

ಸ್ಯಾಂಡಲ್​ವುಡ್​​ನ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ (Puneet Rajkumar) ನಿಧನರಾಗಿ 16 ದಿನಗಳು ಕಳೆಯುತ್ತಿದೆ. ಆದರೆ, ಚಿತ್ರರಂಗದ ನಗು ಮುಖದ ರಾಜಕುಮಾರನಾಗಿದ್ದ, ಅಪ್ಪುಇಲ್ಲ ಎಂಬ ನೋವು ಇಂದಿಗೂ ಕಾಡುತ್ತಿದೆ.

ಶಾಂಪೇನ್​​ ಬಾಟಲ್ ಓಪನ್ ಮಾಡುವ ಮೂಲಕ 'ಏಕ್ ಲವ್ ಯಾ' ಸಿನಿಮಾದ 3ನೇ ಹಾಡು ಬಿಡುಗಡೆ

ಯಾವುದೇ ಸಿನಿಮಾದ ಮಾಧ್ಯಮಗೋಷ್ಠಿಯಲ್ಲಿ ಪುನೀತ್ ರಾಜ್‍ಕುಮಾರ್ (Puneet Rajkumar) ಅವರನ್ನ ನೆನಪಿಸಿಕೊಳ್ಳುವ ಮೂಲಕ ಕೆಲಸಗಳನ್ನು ಪ್ರಾರಂಭಿಸಲಾಗುತ್ತಿದೆ. ಅದೇ ರೀತಿ ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ ರಕ್ಷಿತಾ ಪ್ರೇಮ್ ನಿರ್ಮಾಣದ, ರಕ್ಷಿತಾ ಸಹೋದರ ರಾಣ ಅಭಿನಯದ 'ಏಕ್ ಲವ್ ಯಾ' (Ek Love Ya) ಸಿನಿಮಾದ 3ನೇ ಹಾಡನ್ನ ಬಿಡುಗಡೆ ಮಾಡಲಾಯಿತು.

ಈ ಕಾರ್ಯಕ್ರಮ ಆರಂಭಕ್ಕೂ ಮುಂಚೆ ಏಕ್ ಲವ್ ಯಾ (Ek Love Ya) ಚಿತ್ರತಂಡ ಅಪ್ಪು ಭಾವಚಿತ್ರ ಇಟ್ಟು ನಮನ ಸಲ್ಲಿಸಿತು. ಆದರೆ ಡಾ.ರಾಜ್​​ಕುಮಾರ್ ಆದರ್ಶಗಳನ್ನ ಪಾಲಿಸುತ್ತಿದ್ದ, ಕೋಟ್ಯಂತರ ಅಭಿಮಾನಿಗಳ ಮನೆ ಮಗನಾಗಿದ್ದ ಪುನೀತ್ ರಾಜ್‍ಕುಮಾರ್ (Puneet Rajkumar) ಫೋಟೋ ಮುಂದೆ ನಿರ್ಮಾಪಕಿ ರಕ್ಷಿತಾ ಪ್ರೇಮ್ ಶಾಂಪೇನ್​​​​ ಬಾಟಲ್​​ ಓಪನ್ ಮಾಡಿರುವುದು ದೊಡ್ಡ ಪ್ರಮಾದಕ್ಕೆ ಕಾರಣವಾಗಿದೆ.

ಪುನೀತ್ ರಾಜ್​​​ಕುಮಾರ್, ಫೋಟೋ ಮುಂದೆ ಎಲ್ಲರೂ ಅಸಹ್ಯ ಪಡುವಂತೆ ಏಕ್ ಲವ್ ಯಾ ಚಿತ್ರತಂಡ ಮಾಡಿದೆ ಎಂದು ಅಪ್ಪು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅಪ್ಪು ಜೀವನದಲ್ಲಿ ಅಳವಡಿಸಿಕೊಂಡ ನೀತಿಗೆ ಚಿತ್ರತಂಡ ಧಕ್ಕೆವುಂಟುಮಾಡಿದೆ. ಒಬ್ಬ ಸ್ಟಾರ್ ನಟನ‌ ಅಗಲಿಕೆಯ ಸಮಯದಲ್ಲಿ, ಅವರ ಭಾವ ಚಿತ್ರದ ಎದುರು ಹುಡುಗಿಯರ ಕೈಯಲ್ಲಿ ಶಾಂಪೇನ್​​​ ಬಾಟಲ್ ಓಪನ್ ಮಾಡಿರುವುದು ತಪ್ಪು ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಅಪ್ಪು ಕುಡಿಯುವುದು ಹಾಗೂ ವ್ಯಸನಗಳನ್ನು ತಮ್ಮ ಸಿನಿಮಾದಲ್ಲಿ ತೋರಿಸಲು ಇಷ್ಟಪಡುತ್ತಿರಲಿಲ್ಲ. ಅಂಥಹವರ ಫೋಟೋ ಮುಂದೆ ಹುಡುಗಿಯರು ಚಿಯರ್ಸ್ ಎಂದು ಹೇಳಿ ಶಾಂಪೇನ್​​​​​ ಓಪನ್ ಮಾಡುವ ಮೂಲಕ ಅಭಿಮಾನಿಗಳ ಕೋಪಕ್ಕೆ ಏಕ್ ಲವ್ ಯಾ (Ek Love Ya) ಚಿತ್ರತಂಡ ಗುರಿಯಾಗಿದೆ.

ಇದನ್ನೂ ಓದಿ: 'ಏಕ್ ಲವ್ ಯಾ' ಕನ್ನಡದ ಅರ್ಜುನ್ ರೆಡ್ಡಿನಾ...ಇದಕ್ಕೆ ಪ್ರೇಮ್ ಏನು ಹೇಳ್ತಾರೆ...?

Last Updated : Nov 13, 2021, 12:24 PM IST

ABOUT THE AUTHOR

...view details