ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅಗಲಿಕೆಯಿಂದ ಚಿತ್ರರಂಗ ಕಣ್ಣೀರಿಡುತ್ತಿದೆ. ಅಭಿಮಾನಿಗಳು ಕೂಡಾ ಸೋಷಿಯಲ್ ಮೀಡಿಯಾಗಳಲ್ಲಿ ಚಿರಂಜೀವಿ ಸರ್ಜಾ ಪೋಟೋ ಹಾಕುವ ಮೂಲಕ ಮೆಚ್ಚಿನ ನಟನ ಅಗಲಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ.
ಆಘಾತಕಾರಿ ಸುದ್ದಿಗೆ ಹೆದರಿ 2 ದಿನ ಟಿವಿ, ಸೋಷಿಯಲ್ ಮೀಡಿಯಾ ನೋಡಲಿಲ್ಲ...ಅನುಶ್ರೀ - Anchor Anushree
ಭಾನುವಾರ ನಿಧನರಾದ ಚಿರಂಜೀವಿ ಸರ್ಜಾ ಅವರನ್ನು ನೆನೆದು ನಿರೂಪಕಿ ಅನುಶ್ರೀ ದು:ಖ ವ್ಯಕ್ತಪಡಿಸಿದ್ದಾರೆ. ಚಿರಂಜೀವಿ ಸರ್ಜಾ ಅವರೊಂದಿಗಿನ ಗ್ರೂಪ್ ಪೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಅನುಶ್ರೀ, ಚಿರು ನಿಧನದ ಸುದ್ದಿ ನೋಡಲು ಆಗದೆ ಎರಡು ದಿನಗಳಿಂದ ಟಿವಿ ನೋಡಿಲ್ಲ, ಸೋಷಿಯಲ್ ಮೀಡಿಯಾ ಕೂಡಾ ಓಪನ್ ಮಾಡಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಈಗ ಇದ್ದವರು, ಮುಂದಿನ ಕ್ಷಣದಲ್ಲಿ ಇಲ್ಲ ಎನ್ನುವ ಸುದ್ದಿ ಎಲ್ಲರಿಗೂ ಬರಸಿಡಿಲು ಬಂಡಿದಂಗಾಗಿದೆ. ಬೆಳ್ಳಿತೆರೆ ಮಾತ್ರವಲ್ಲ, ಕಿರುತೆರೆ ಕೂಡಾ ಚಿರು ನಿಧನಕ್ಕೆ ದು:ಖ ವ್ಯಕ್ತಪಡಿಸಿದ್ದಾರೆ. ಇನ್ನು ಚಿರು ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನಿರೂಪಕಿ ಅನುಶ್ರೀ ಕೂಡಾ ಶಾಕ್ ಆಗಿದ್ದಾರೆ. ಈ ಆಘಾತಕಾರಿ ಸುದ್ದಿಗೆ ಹೆದರಿ ಎರಡು ದಿನಗಳಿಂದ ಟಿವಿ ನೋಡದೆ, ಸೋಷಿಯಲ್ ಮೀಡಿಯಾ ನೋಡಲಿಲ್ಲವಂತೆ.
ನಿನ್ನೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಚಿರಂಜೀವಿ ಸರ್ಜಾ ಅವರೊಂದಿಗಿನ ಗ್ರೂಪ್ ಫೋಟೋವನ್ನು ಹಂಚಿಕೊಂಡಿರುವ ಅನುಶ್ರಿ, 'ಈ ಎರಡು ದಿನ ಸೋಷಿಯಲ್ ಮೀಡಿಯಾ ಓಪನ್ ಮಾಡಲು ಹಿಂಜರಿದೆ, ನ್ಯೂಸ್ ನೋಡಲು ಅಂಜಿದೆ. ಕಾರಣ ಚಿರನಿದ್ರೆಗೆ ಜಾರಿದ ಚಿರು ನೋಡಲು ಆಗದೆ ...ದೇವರ ಆಟ ಬಲ್ಲವರಾರು... ಹೌದು ಆದರೆ ಈ ಆಟಗಾರ ಬಹಳ ಬೇಗ ಅಗಲಿದ ....ಸದಾ ನಗುವ ನಗಿಸುವ...ಕಿಂಚಿತ್ತು ಬೇರೆಯವರ ಬಗ್ಗೆ ಅಸೂಯೆ ಪಡದ ಚಿರುವನ್ನು ಆ ಬಾಕ್ಸ್ನಲ್ಲಿ ನೋಡಿದಾಗ ವಿವರಿಸಲಾಗದ ಸಂಕಟ ....ಈಗ ಎಲ್ಲೆಡೆ ಹಾಗೆ ಮಾಡಿದ್ದರೆ ಹೀಗೆ ಆಗುತಿತ್ತು ಹೀಗೆ ಮಾಡಬೇಕಿತ್ತು ಅನ್ನೋ ನೂರಾರು ಊಹಾಪೋಹಗಳು ....ಆದರೆ ಅವನನ್ನ ಅರಿತವರು ಈ ಭಾವಚಿತ್ರದಲ್ಲಿರೋ ಗೆಳೆಯರೆಲ್ಲರಿಗೂ ಗೊತ್ತು ಆತ ಎಷ್ಟು cool guy ಅಂತ ...ಯಾವ ಕಾರಣಗಳು ಅವನನ್ನ ಮತ್ತೆ ತರಲು ಸಾಧ್ಯವೇ ???ಅವನ ಆತ್ಮಕ್ಕೆ ಶಾಂತಿ ಸಿಗಲಿ ...ಮೇಘನಾ ಹಾಗೂ ಕುಟುಂಬದವರಿಗೆ ಹಾಗು ಸ್ನೇಹಿತರಿಗೆ ಆ ದೇವರು ಧೈರ್ಯ ಕೊಡಲಿ. ದೇವರೇ ಇನ್ನೆಂದೂ ಇಂತ ಸ್ನೇಹಜೀವಿಯನ್ನ ಇಷ್ಟು ಬೇಗ ಕರೆಯಬೇಡ' ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.