'ರಾಜಾ ರಾಣಿ' ರಿಯಾಲಿಟಿ ಶೋನ ಫಿನಾಲೆಯೊಳಗೆ ಶೋ ನಿರೂಪಕಿ ಅನುಪಮಾ ಗೌಡ ಅವರ ಮದುವೆ ನಡೆಯಲಿದೆಯಂತೆ. ಹೀಗಂತ ಶೋನ ತೀರ್ಪುಗಾರರಾದ ತಾರಾ ಅನುರಾಧ ಹಾಗೂ ಸೃಜನ್ ಲೋಕೇಶ್ ಹೇಳಿದ್ದಾರೆ.
ಇದು ಮದುವೆಯಾದ ಜೋಡಿಗಳಿಗಾಗಿ ಇರುವ ಶೋ. ಇಲ್ಲಿ ಜಡ್ಜ್‌ಗಳು ಹಾಗೂ ಭಾಗವಹಿಸಿರುವ ಸ್ಪರ್ಧಿಗಳು ಪ್ರತಿಯೊಬ್ಬರೂ ಮದುವೆಯಾಗಿದ್ದಾರೆ. ಆದರೆ, ನಿರೂಪಕಿ ಅನುಪಮಾ ಮಾತ್ರ ಮದುವೆಯಾಗಿಲ್ಲ. ಹೀಗಾಗಿ ಈ ಶೋ ಮುಗಿಯುವುದರೊಳಗೆ ಹುಡುಗನನ್ನು ಹುಡುಕಿ ಮದುವೆ ಮಾಡುವುದಾಗಿ ಹೇಳಿದ್ದಾರೆ.