ಕರ್ನಾಟಕ

karnataka

ETV Bharat / sitara

ಅಕ್ಷಯ ತೃತೀಯಕ್ಕೆ ಹೊಸ ಹಾಡು...'ನಿಂಬಿಯ ಬನ'ದಲ್ಲಿ ಅನರ್ಘ್ಯ ಪ್ರತಿಭೆ ಅನನ್ಯಾ

ಮೈಸೂರಿನ ಅನರ್ಘ್ಯ ಪ್ರತಿಭೆ ಅನನ್ಯಾ ಭಟ್ 9ನೇ ವರ್ಷ ವಯಸ್ಸಿನಲ್ಲೇ ‘ಒಲವೇ ಜೀವನ ಲೆಕ್ಕಾಚಾರ’ ಸಿನಿಮಾ ಮೂಲಕ ಗಾಯಕಿಯಾದವರು. ಆಮೇಲೆ ಲೂಸಿಯಾ, ಚತುರ್ಭುಜ, ರಾಕೆಟ್, ಭುಜಂಗ, ರಾಮ ರಾಮ ರೇ, ಜೀರ್ಜಿಂಬೆ, ಟಗರು.. ಸಿನಿಮಾಗಳಿಗೆ ಹಾಡಿದರು.

ಅನನ್ಯ ಭಟ್

By

Published : May 7, 2019, 10:38 AM IST

'ಸೂಜುಗಾದ ಸೂಜು ಮಲ್ಲಿಗೆ' ಗೀತೆಯ ಯಶಸ್ಸಿನ ನಂತ್ರ ಜನಪ್ರಿಯ ಹಿನ್ನೆಲೆ ಗಾಯಕಿ ಅನನ್ಯಾ ಭಟ್, ಈಗ ತಮ್ಮ ಏಳನೇ ಹಾಡು ರಿಲೀಸ್ ಮಾಡುತ್ತಿದ್ದಾರೆ.

'ಸೂಜುಗಾದ ಸೂಜು ಮಲ್ಲಿಗೆ' ಜಾನಪದ ಗೀತೆಗೆ ಆಧುನಿಕ ಸಂಗೀತದ ಟಚ್​ ಕೊಟ್ಟು, ತಮ್ಮ ಮಧುರ ಕಂಠದಲ್ಲಿ ಮೋಡಿ ಮಾಡಿದ್ದರು. ಇದೀಗ ಜನಪ್ರಿಯ 'ನಿಂಬಿಯ ಬನದ ಮ್ಯಾಲೆ' ಗೀತೆಗೂ ಪಾಶ್ಚಿಮಾತ್ಯ ಸಂಗೀತ ಜೋಡಿಸಿದ್ದಾರೆ. ಮೂರು ನಿಮಿಷದ ಈ ಹಾಡು ಸಂಗೀತಾ ಭಟ್​ ಯುಟ್ಯೂಬ್​ ಚಾನೆಲ್​​ನಲ್ಲಿ ಸಂಜೆ 7 ಗಂಟೆಗೆ ಅನಾವರಣಗೊಳ್ಳಲಿದೆ.

ಮೈಸೂರಿನ ಅನರ್ಘ್ಯ ಪ್ರತಿಭೆ ಅನನ್ಯ ಭಟ್ 9ನೇ ವರ್ಷ ವಯಸ್ಸಿನಲ್ಲೇ ‘ಒಲವೇ ಜೀವನ ಲೆಕ್ಕಾಚಾರ’ ಸಿನಿಮಾ ಮೂಲಕ ಗಾಯಕಿಯಾದವರು. ಆಮೇಲೆ ಲೂಸಿಯಾ, ಚತುರ್ಭುಜ, ರಾಕೆಟ್, ಭುಜಂಗ, ರಾಮ ರಾಮ ರೇ, ಜೀರ್ಜಿಂಬೆ, ಟಗರು... ಸಿನಿಮಾಗಳಿಗೆ ಹಾಡಿದರು. ವಿಜಯ್ ಸೇತುಪತಿ ನಟನೆಯ ‘ಕರುಪ್ಪನ್’ ತಮಿಳು ಸಿನಿಮಾಗೆ ಹಾಡಿದ್ದಾರೆ. ಅನನ್ಯಾ, ‘ಉರ್ವಿ’ಸಿನಿಮಾ ಮೂಲಕ ಅಭಿನಯಕ್ಕೂ ಧುಮುಕಿದರು.

ಇಂದು ಬಿಡುಗಡೆಯಾಗಲಿರುವ ‘ನಿಂಬಿಯ ಬನದ ಮ್ಯಾಲೆ' ಹಾಡಿಗೆ ಸಂಗೀತ ನಿರ್ದೇಶಕ ವಿವೇಕ್ ಥಾಮಸ್ ಆಧುನಿಕ ಸ್ಪರ್ಶ ನೀಡಿದ್ದಾರೆ. ರಚನ ದೇಶಪಾಂಡೆ ಛಾಯಾಗ್ರಹಣ ಮಾಡಿದ್ದಾರೆ. ಅನನ್ಯಾ ಭಟ್, ಈ ವೀಡಿಯೋ ಹಾಡಿನಲ್ಲಿ ಕನ್ನಡ ನಾಡಿನ ಸಂಸ್ಕೃತಿ ಬಿಂಬಿಸುವ ಹಾಗೆ ಉತ್ತರಕರ್ನಾಟಕದ ಉಡುಗೆ ತೊಡುಗೆಗಳಲ್ಲಿ ಕಾಣಿಸಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details