ಕರ್ನಾಟಕ

karnataka

ETV Bharat / sitara

ನಿರೂಪಣೆ, ನಟನೆ ಜೊತೆಗೆ ಮಾಡರ್ನ್​ ರೈತ ಆದ್ರು ಅಕುಲ್ ಬಾಲಾಜಿ - ಸಾವಯವ ಬಾಳೆಹಣ್ಣು ಬೆಳೆದ ಅಕುಲ್ ಬಾಲಾಜಿ

ತಮ್ಮ ತಾಯಿಯ ಸಲಹೆಯಂತೆ ಅಕುಲ್ ಬಾಲಾಜಿ ತಮ್ಮ ಕೈತೋಟದಲ್ಲಿ ಸಾವಯವ ಬಾಳೆಹಣ್ಣು ಬೆಳೆದಿದ್ದಾರೆ. ಈ ಫೋಟೋವನ್ನು ತಮ್ಮ ಇನ್ಸ್​​​ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಗೂ ಕೂಡಾ ಸಾವಯವ ಬೆಳೆ ಬೆಳೆಯುವಂತೆ ಕರೆ ನೀಡಿದ್ದಾರೆ.

ಅಕುಲ್ ಬಾಲಾಜಿ

By

Published : Nov 8, 2019, 7:02 PM IST

ನಟನಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಅಕುಲ್ ಬಾಲಾಜಿ, ನಿರೂಪಕನಾಗಿ ಎಲ್ಲರ ಗಮನ ಸೆಳೆದವರು. ಇದೀಗ ಸಾವಯವ ಬೆಳೆ ಬೆಳೆಯುವ ಮೂಲಕ ರೈತ ಎನಿಸಿಕೊಂಡಿದ್ದಾರೆ. ತಮ್ಮ ಮನೆಯ ಗಾರ್ಡನ್​ನಲ್ಲಿ ಸಾವಯವ ಬಾಳೆಹಣ್ಣನ್ನು ಬೆಳೆದಿದ್ದಾರೆ.

'ನನಗೆ ತುಂಬಾ ಇಷ್ಟವಾದದ್ದು ಬಾಳೆಹಣ್ಣು. ಇದರಲ್ಲಿ ಕಬ್ಬಿಣಾಂಶ ಹಾಗೂ ಇತರ ಸತ್ವಯುತ ಅಂಶಗಳಿವೆ. ಹೀಗಾಗಿ ನೀವೂ ಕೂಡಾ ನಿಮ್ಮ ಕೈತೋಟದಲ್ಲಿ ಸಾವಯವ ಬಾಳೆ ಬೆಳೆಯಿರಿ...ಈ ಮೂಲಕ ರೈತನಾಗಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ' ಎಂದು ಅಕುಲ್ ಹೇಳಿದ್ದಾರೆ. ಅಲ್ಲದೆ, ತಮ್ಮ ಇನ್ಸ್​ಟಾಗ್ರಾಮ್​​​ನಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ.

ಅಕುಲ್ ತಮ್ಮ ತಾಯಿಯ ಸಲಹೆಯಂತೆ ಬಾಳೆಹಣ್ಣನ್ನು ಬೆಳೆದಿದ್ದಾರೆ. ಸದ್ಯಕ್ಕೆ ಅಕುಲ್ ಬಾಲಾಜಿ, ಕಿರುತೆರೆಯ ಖ್ಯಾತ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.

ABOUT THE AUTHOR

...view details