ಕರ್ನಾಟಕ

karnataka

ETV Bharat / sitara

ಅಣ್ಣಾವ್ರ ಫೋಟೊ ಪೋಸ್ಟ್​ ಮಾಡಿ 'ನಾವಾಡುವ ನುಡಿ ಕನ್ನಡ' ಹಿಂದಿ ಹೇರಬೇಡಿ ಎಂದ ಅಪ್ಪು!

ತಂದೆ ಡಾ. ರಾಜ್ ಕುಮಾರ್ ಫೋಟೋ ಹಾಕುವ ಮೂಲಕ, ಮೊದಲು ನಮ್ಮ ಕನ್ನಡ ಭಾಷೆ ಮುಖ್ಯ. ನಂತರ ಬೇರೆ ಭಾಷೆಗಳು ಅಂತಾ ಪುನೀತ್​ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ‌.

Actor Puneet Rajkumar
ನಟ ಪುನೀತ್ ರಾಜ್‍ಕುಮಾರ್

By

Published : Aug 21, 2020, 9:21 PM IST

ಹಿಂದಿ ಹೇರಿಕೆಗೆ ಸಂಬಂಧಿಸಿದಂತೆ, ದಕ್ಷಿಣ ಭಾರತದಲ್ಲಿ ವಿರೋಧಗಳು ವ್ಯಕ್ತವಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಕನ್ನಡ ಅಂದಾಕ್ಷಣ ಮೊದಲಿಗೆ ಡಾ. ರಾಜ್ ಕುಮಾರ್ ನೆನಪಾಗುತ್ತಾರೆ. ಕನ್ನಡ ವಿಷಯವಾಗಿ ಅಣ್ಣಾವ್ರು ಗೋಕಾಕ್ ಚಳವಳಿಯಲ್ಲಿ ನಾಯಕತ್ವದ ಹೊಣೆ ಹೊತ್ತಿದ್ದು, ಇವತ್ತಿಗೆ ಕನ್ನಡಿಗರಿ ಮನಸ್ಸಿನಲ್ಲಿ ಉಳಿದಿದೆ. ಇದೀಗ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿಚಾರವಾಗಿ ನಟ ಪುನೀತ್ ರಾಜ್‍ಕುಮಾರ್ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.

ಮೊದಲು ನಮ್ಮ ಕನ್ನಡ ಭಾಷೆ ಮುಖ್ಯ ನಂತರ ಬೇರೆ ಭಾಷೆ ಪವರ್ ಸ್ಟಾರ್

ತಂದೆ ಡಾ. ರಾಜ್ ಕುಮಾರ್ ಫೋಟೋ ಹಾಕುವ ಮೂಲಕ, ಮೊದಲು ನಮ್ಮ ಕನ್ನಡ ಭಾಷೆ ಮುಖ್ಯ. ನಂತರ ಬೇರೆ ಭಾಷೆಗಳು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ‌.

ಕನ್ನಡ ಕಲಿಕೆ, ನಮ್ಮೆಲ್ಲರ ಬಯಕೆ, ತಾಯಿ ಮಗುವಿಗೆ ಕಲಿಸುವ ಮೊದಲ ಭಾಷೆ ಮಾತೃಭಾಷೆ. ಮಗುವಿನ ಯೋಚನೆ ಭಾಷೆ ಮಾತೃ ಭಾಷೆಯಾಗಿರುತ್ತದೆ. ಆ ಭಾಷೆ ಕಲಿತಾಗಲೇ ಜಗತ್ತಿನ ಎಲ್ಲಾ ವಿಚಾರಗಳಿಗೆ ಸ್ಪಂದಿಸುವ ಶಕ್ತಿ ಹಾಗು ನಂಬಿಕೆ ಹುಟ್ಟುತ್ತದೆ. ಭಾಷೆ ಒಂದು ಭಾವನೆ, ನಮ್ಮ ಭಾವನೆ ಕನ್ನಡ ಕಲಿತು ಕಲಿಸೋಣ ಎಂದು ಬರೆದಿದ್ದಾರೆ.

For All Latest Updates

ABOUT THE AUTHOR

...view details