ಇತ್ತೀಚಿನ ದಿನಗಳಲ್ಲಿ ಕೆಲವು ಸೆಲೆಬ್ರಿಟಿಗಳು, ರಾಜಕಾರಣಿಗಳು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಹಾರ, ಕೇಕ್ ಎಂದು ಅನಗತ್ಯ ದುಂದುವೆಚ್ಚ ಮಾಡುವ ಬದಲಿಗೆ ಬಡವರಿಗೆ ನೆರವಾಗೋಣ ಎಂದು ಅಭಿಮಾನಿಗಳಿಗೂ ಸಂದೇಶ ನೀಡುತ್ತಿದ್ದಾರೆ. ಹಾಗೆಯೇ ಕಿರುತೆರೆ ನಟ ಕಿರಣ್ ರಾಜ್ ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಗಿಫ್ಟ್ ನೀಡಲು ಮುಂದಾಗಿದ್ದಾರೆ.
ನಟ ಕಿರಣ್ ರಾಜ್ ಕಡೆಯಿಂದ ಫ್ಯಾನ್ಸ್ಗೆ ಸಿಹಿ ಸುದ್ದಿ.. ನಿಮ್ಮನೆ ಬಾಗಿಲಿಗೆ ಬರಲಿವೆ ಉಡುಗೊರೆಗಳು - ಕನ್ನಡತಿ ಧಾರವಾಹಿ ಖ್ಯಾತಿಯ ಕಿರಣ್ ರಾಜ್
ತಮ್ಮ ಅಭಿಮಾನಿಗಳಿಗೆ ಗಿಫ್ಟ್ ಕೊಡಲು ಕಿರಣ್ ರಾಜ್ ರೆಡಿಯಾಗಿದ್ದು, ಅಭಿಮಾನಿ ಪೇಜ್’ಗಳ ಅಡ್ಮಿನ್ ಅಡ್ರೆಸ್ ಸಂಗ್ರಹಿಸಿದ್ದಾರೆ. ಶೀಘ್ರದಲ್ಲೇ ಅವರಿಗೆ ಗಿಫ್ಟ್ ತಲುಪಿಸುವುದಾಗಿ ಕಿರಣ್ ರಾಜ್ ತಿಳಿಸಿದ್ದಾರೆ.
ಹೌದು, ಇಂತಹ ಒಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿರುವುದು ಬೇರಾರೂ ಅಲ್ಲ, ಕನ್ನಡತಿ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್. ಈಗಾಗಲೇ ಲಾಕ್ ಡೌನ್ ಸಮಯದಲ್ಲಿ ಬಡವರಿಗೆ, ನಿರ್ಗತಿಕರಿಗೆ, ನೊಂದವರಿಗೆ ನೆರವಾಗುತ್ತಾ ಜನಪ್ರಿಯತೆ ಗಳಿಸಿರುವ ಕಿರಣ್, ಈ ಬಾರಿ ಹುಟ್ಟುಹಬ್ಬವನ್ನು ಡಿಫರೆಂಟ್ ಆಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಜುಲೈ 5 ಕಿರಣ್ ರಾಜ್ ಅವರ ಹುಟ್ಟುಹಬ್ಬ. ಈ ವಿಶೇಷ ದಿನದಂದು ಅಭಿಮಾನಿಗಳಿಂದ ಬ್ಯಾಗ್ಸ್, ಕ್ಯಾಪ್ಸ್ ಸೇರಿದಂತೆ ಇನ್ನಿತರ ಗಿಫ್ಟ್ ಗಳನ್ನು ವಿತರಿಸಲಿದ್ದಾರೆ.
ತಮ್ಮ ಅಭಿಮಾನಿಗಳಿಗೆ ಗಿಫ್ಟ್ ಕೊಡಲು ಕಿರಣ್ ರಾಜ್ ರೆಡಿಯಾಗಿದ್ದು, ಅಭಿಮಾನಿ ಪೇಜ್’ಗಳ ಅಡ್ಮಿನ್ ಅಡ್ರೆಸ್ ಸಂಗ್ರಹಿಸಿದ್ದಾರೆ. ಶೀಘ್ರದಲ್ಲೇ ಅವರಿಗೆ ಗಿಫ್ಟ್ ತಲುಪಿಸುವುದಾಗಿ ತಿಳಿಸಿದ್ದಾರೆ. ಕಿರಣ್ ರಾಜ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದೀಗ ಅವರ ಈ ಪೋಸ್ಟ್’ಗೆ ಅಭಿಮಾನಿಗಳಿಂದ ಕಮೆಂಟ್’ಗಳ ಸುರಿಮಳೆಯೇ ಹರಿದು ಬರುತ್ತಿದೆ.